7 ವರ್ಷ ಪ್ರೀತಿಸಿ ಕೈಕೊಟ್ಟ ಇನ್ಫೋಸಿಸ್ ಟೆಕ್ಕಿ ಅರೆಸ್ಟ್

30 ವರ್ಷದ ಸಿ ಸುಧಾಕರ್ ಬಂಧಿತ ಟೆಕ್ಕಿ. ಮೂಲತಃ ಖಮ್ಮಂ ಜಿಲ್ಲೆಯ ಸುಧಾಕರ್ ಹೈದರಾಬಾದಿನಲ್ಲಿ ಟೆಕ್ಕಿಯಾಗಿದ್ದಾಗ ಸಾಮಾಜಿಕ ಜಾಲತಾಣದ ಮೂಲಕ ಚಿತ್ರ ಕಲಾವಿದೆಯೊಬ್ಬರ ಜತೆ ಗೆಳೆತನ ಬೆಳೆಸಿದ್ದ. ಮುಂದೆ ಅದು ಪ್ರೀತಿ-ಪ್ರೇಮಕ್ಕೆ ತಿರುಗಿತ್ತು.
ಅವರದು ಏಳು ವರ್ಷಗಳ ಪ್ರೀತಿ-ಪ್ರೇಮ-ಕಾಮ: ಈ ಪ್ರೀತಿ-ಪ್ರೇಮ-ಕಾಮವೆಲ್ಲ ಏಳು ವರ್ಷಗಳ ಕಾಲ ಸಾಂಗೋಪಾಂಗವಾಗಿ ನಡೆದಿತ್ತು. ಈ ಮಧ್ಯೆ, ಆ ಕಲಾವಿದೆಯನ್ನು ಮದುವೆಯಾಗುವುದಾಗಿ ಸುಧಾಕರ್ ತಿಳಿಸಿದ್ದ. ಆದರೆ ಆತ ಮದುವೆಯೇ ಆಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆದರೆ 3 ತಿಂಗಳ ಹಿಂದೆ ಪುಣೆ ಇನ್ಫೋಸಿಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸಗಿಟ್ಟಿಸಿದ ಸುಧಾಕರ್ ತನ್ನ ಕಲಾವಿದೆ ಗೆಳತಿಯನ್ನು ಮರೆತಿದ್ದ. ಆಕೆಯ ದೂರಿನ ಮೇರೆಗೆ ಪುಣೆಗೆ ಬಂದ ಹೈದರಾಬಾದ್ ಪೊಲೀಸರು ಸುಧಾಕರನನ್ನು ಬಂಧಿಸಿ, ಹೈದರಾಬಾದ್ ಕೋರ್ಟಿನಲ್ಲಿ ಹಾಜರುಪಡಿಸಿದ್ದಾರೆ.












Click it and Unblock the Notifications