ವಿಮಾನದಲ್ಲಿ ಜನಿಸಿದ ಈ ಮಗುವಿನ ಭಾಗ್ಯ ನೋಡಿ!

ಅಂತಾರಾಷ್ಟ್ರೀಯ ವಾಯುಯಾನ ಒಪ್ಪಂದದ ಪ್ರಕಾರ ವಿಮಾನ ಪ್ರಯಾಣದಲ್ಲಿದ್ದಾಗ ಮಗು ಜನಿಸಿದರೆ ಆ ಮಗು ಮುಂದಿನ ದಿನಗಳಲ್ಲಿ ಆ ವಿಮಾನ ಸಂಸ್ಥೆಯ ಯಾವುದೇ ವಿಮಾನದಲ್ಲಿ (ಇಲ್ಲಿ, ಎಮಿರೆಟ್ಸ್ ವಿಮಾನ ಕಂಪನಿ EK 332) ಉಚಿತವಾಗಿ ಪ್ರಯಾಣ ಮಾಡಬಹುದು.
ಏನಾಯಿತೆಂದರೆ, ಮನಿಲಾ ಕಡೆಗೆ ವಿಮಾನದಲ್ಲಿ ಪಯಣಿಸುತ್ತಿದ್ದ ಫಿಲಿಪ್ಪೀನ್ಸ್ ಮಹಿಳೆ ಕೆಮಿಜಿನಾ ಸೊಕುನಿವಾ (30) ವಿಮಾನ ಹಾರಾಟದ ವೇಳೆ ಪ್ರಸವ ವೇದನೆಗೊಳಗಾದರು. ಹಾಗಾಗಿ, ವಿಮಾನವನ್ನು ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸುವ ಮುನ್ನ ಆಕೆ ಗಂಡು ಮಗುವಿಗೆ ಜನ್ಮ ನೀಡಿದರು.
ದುಬೈ- ಢಾಕಾ- ಮನಿಲಾ ನಡುವೆ ಹಾರಾಟ ನಡೆಸುತ್ತಿದ್ದ ವಿಮಾನವು ಬುಧವಾರ ರಾತ್ರಿ 10.30ರ ವೇಳೆಯಲ್ಲಿ ಕೋಲ್ಕತಾದಲ್ಲಿ ಇಳಿಯಿತು. ತಾಯಿ ಮತ್ತು ಮಗುವನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ತಾಯಿ ಮತ್ತು ಮಗು ಆರೋಗ್ಯದಿಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮನಿಲಾದಲ್ಲಿದ್ದ ಮಗುವಿನ ಅಪ್ಪನಿಗೆ ಸುದ್ದಿ ತಲುಪಿ, ಅವರೂ ಕೋಲ್ಕೊತ್ತಾಗೆ ಧಾವಿಸಿದ್ದಾರೆ.












Click it and Unblock the Notifications