ವ್ಯಾಲೆಂಟೈನ್ಸ್ ಡೇ ಆಚರಣೆಗೆ ಬೇಡ : ರಾಮಸೇನೆ

ಫೆ.13 ರಂದು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿ ವ್ಯಾಲೆಂಟೈನ್ಸ್ ಡೇ ಎಚ್ಚರಿಸುವುದಾಗಿ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ವ್ಯಭಿಚಾರ, ಅನೈತಿಕ ಆಚರಣೆಗಳು ಹೆಚ್ಚಾಗುತ್ತಿದೆ. ಶ್ರೀರಾಮಸೇನೆ ಪ್ರೇಮಿಗಳ ವಿರೋಧಿಗಳಲ್ಲ. ಆದರೆ, ಪ್ರೇಮದ ಹೆಸರಿನಲ್ಲಿ ಕಾಮಾಚರಣೆ ನಡೆಸಿ ಕೈಕೊಟ್ಟಿ ಹೋಗುವ ದುಷ್ಕರ್ಮಿಗಳ ವಿರುದ್ಧ ನಮ್ಮ ಹೋರಾಟ ಎಂದು ಹೇಮಂತ್ ಹೇಳಿದರು,
ಫೆಬ್ರವರಿ ತಿಂಗಳು 14 ರಂದು ಹೊರಾಟಗಾರ ಭಗತ್ ಸಿಂಗ್ ಹುತಾತ್ಮ ದಿನವಾಗಿರುವುದರಿಂದ ಅಂದು ಮಾತಾ-ಪಿತಾ-ಪೂಜ್ಯದಿನವೆಂದು ನೂತನ ಆಚರಣೆಯನ್ನು ಎಲ್ಲಾ ಕಡೆ ಮಾಡುವಂತೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಅದರಂತೆ ಆಚರಣೆ ಎಲ್ಲೆಡೆ ನಡೆಯುವಂತೆ ನೋಡಿಕೊಳ್ಳಲಾಗುವುದು
ಬ್ಯಾಂಗಲ್ ಸ್ಟೋರ್, ಹೋಟೇಲ್ ಮಾಲೀಕರು, ಗಿಫ್ಟ್ ಸೆಂಟರ್ ಶಾಪ್, ಕಾಲೇಜ್ ಬದಿಯಲ್ಲಿ ಮಾರಾಟ ಮಾಡುವವರು, ಕಾಫಿ ಡೇ, ಕೂಲ್ ಪಾರ್ಲರ್‍ಸ್, ಪಬ್ ಮಾಲೀಕರುಗಳ ಮೇಲೆ ಶ್ರೀರಾಮ ಸೇನೆ ಹೆಸರಿನಲ್ಲಿ ಕೆಲ ದುಷ್ಕರ್ಮಿಗಳು ದಾಳಿ ಮಾಡಬಹುದು. ಯಾವುದೇ ಕಾರಣಕ್ಕೂ ಪ್ರೇಮಿಗಳ ದಿನ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡಬಾರದೆಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಅಲ್ಪ ಸಂಖ್ಯಾತರ ವಿವಿಯ ಬಗ್ಗೆ ಮಾತನಾಡಿದ ಹೇಮಂತ್, ಕೋಮು ಆಧಾರದಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೆ ನಮ್ಮ ತೀವ ವಿರೊಧವಿದೆ ಎಂದರು.
ಮುಂಬರುವ ದಿನಗಳಲ್ಲಿ ಹೋರಾಟ ಮಾಡಲು ಶ್ರೀರಾಮ ಸೇನೆ ನಿರ್ಧರಿಸುವುದಾಗಿ ಹೇಳಿದರು.
ಬೆಂಗಳೂರಿನಿಂದ ಶ್ರೀರಂಗಪಟ್ಟಣವರೆಗೂ ಬೈಕ್ ರ್‍ಯಾಲಿ ಜಾತಾ ಮಾಡಲು ನಿರ್ಧರಿಸಲಾಗಿದೆ ಎಂದು ತಮ್ಮ ನಿಲುವು ತಿಳಿಸಿದರು. ದಿನಾಂಕವನ್ನು ಕೆಲ ದಿವಸಗಳಲ್ಲಿ ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದರು.












Click it and Unblock the Notifications