ಯಡಿಯೂರಪ್ಪ ಬಜೆಟ್ ನಲ್ಲಿ ನೀಡಿದ್ದೇನು?
ಯಡಿಯೂರಪ್ಪನವರು ಸತತವಾಗಿ ಮಂಡಿಸಿದ ಆರನೇ ಮುಂಗಡ ಪತ್ರದ ಮುಖ್ಯಾಂಶಗಳು:
* ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಮಿತಿ ರಚನೆ.
* 6ನೇ ವೇತನ ಆಯೋಗ ಶಿಫಾರಸು ಸದ್ಯಕ್ಕೆ ಇಲ್ಲ.
* ಬೆಂಗಳೂರಿನಲ್ಲಿ 8 ಮನರಂಜನಾ ಕೇಂದ್ರಗಳ ಅಭಿವೃದ್ಧಿ.
* 5 ಸಾವಿರ ಕೋಟಿ ವೆಚ್ಚದಲ್ಲಿ ದೇವನಹಳ್ಳಿ ಬಿಸಿನೆಸ್ ಪಾರ್ಕ್ ಸ್ಥಾಪನೆ.
* ಮೌಲ್ಯವರ್ಧಿತ ತೆರಿಗೆ ಶೇ. 13.5 ರಿಂದ ಶೇ. 14ಕ್ಕೆ ಹೆಚ್ಚಳ.
* ರಾಜಿ ತೆರಿಗೆ ಶೇ. 4ರಿಂದ ಶೇ. 8ಕ್ಕೆ ಹೆಚ್ಚಳ.
* ಅನಿಲ ವಿತರಣೆ ವ್ಯವಸ್ಥೆ ಅಭಿವೃದ್ಧಿಗೆ ಕಂಪನಿ ಸ್ಥಾಪನೆ.
* ಬೆಂಗಳೂರಿನಲ್ಲಿ ಅನಿಲ ವಿತರಣೆ ವ್ಯವಸ್ಥೆ ಅಭಿವೃದ್ಧಿಗೆ ಪ್ರತ್ಯೇಕ ಕಂಪನಿ.

* ಲಂಡನ್‌ನಲ್ಲಿ ಬಸವ ಪುತ್ಥಳಿ ಸ್ಥಾಪನೆಗೆ 3 ಕೋಟಿ ರು.
* ಬೆಂಗಳೂರು ಟರ್ಫ್ ಕ್ಲಬ್ ತೆರಿಗೆ ಏರಿಕೆ.
* ಉಡುಪಿ ಉಷ್ಣ ವಿದ್ಯುತ್ ಸ್ಥಾವರಕ್ಕೆ 25 ಕೋಟಿ ರು.
* ಛತ್ತೀಸ್‌ಗಢ ವಿದ್ಯುತ್ ಸ್ಥಾವರಕ್ಕಾಗಿ 1260 ಎಕರೆ ಭೂ ಸ್ವಾಧೀನಕ್ಕೆ ಅಸ್ತು.
* ಜಲಮಂಡಳಿಗೆ 1,500 ಕೋಟಿ ರು.
* ಆರ್ಥಿಕ ದುರ್ಬಲ ವರ್ಗದವರಿಗೆ 30 ಸಾವಿರ ಮನೆ.
* 8 ಎಕರೆ ಪ್ರದೇಶದಲ್ಲಿ ಶಿಲ್ಪ ಕಲಾ ಉದ್ಯಾನವನ.
* ಬೆಂಗಳೂರಿನ ನಾಲ್ಕು ಕಡೆ ಬೃಹತ್ ಆಸ್ಪತ್ರೆಗಳ ಸ್ಥಾಪನೆ.
* ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ.
* ಸರ್ವ ಶಿಕ್ಷಣ ಅಭಿಯಾನಕ್ಕೆ 900 ಕೋಟಿ ರು.
* ವಿದ್ಯುತ್ ವಿತರಣೆ ಸಂಸ್ಥೆಗಳಿಗೆ 500 ಕೋಟಿ ರು. ಇಕ್ವಿಟಿ ನೆರವು.
* ಶಾಲಾ ವಿದ್ಯಾರ್ಥಿಗಳ ಬೈಸಿಕಲ್‌ಗೆ 25 ಕೋಟಿ ರು.
* ಸಂಗೀತ, ಜಾನಪದ, ಲಲಿತ ಕಲಾ ವಿವಿ ಸ್ಥಾಪನೆ, 10 ಕೋಟಿ ರು. ವೆಚ್ಚ.
* ಉನ್ನತ ಶಿಕ್ಷಣ ಇಲಾಖೆಗೆ 2002 ಕೋಟಿ ರು.
* ವೈದ್ಯಕೀಯ ಶಿಕ್ಷಣ ಮೇಲ್ದರ್ಜೆಗೆ 5 ಕೋಟಿ ರು.
* ಮಧುಮೇಹ ಸಂಸ್ಥೆ ಬಲವರ್ಧನೆಗೆ 5 ಕೋಟಿ ರು.
* ಹುಬ್ಬಳ್ಳಿ ಕಿಮ್ಸ್‌ಗೆ 25 ಕೋಟಿ ರು.
* 10 ಜಿಲ್ಲೆಗಳಲ್ಲಿ ಮಾದರಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ 36 ಕೋಟಿ ರು.
* ಬಿಬಿಎಂಪಿ ಅಭಿವೃದ್ಧಿಗೆ 350 ಕೋಟಿ ರು.
* ಸಾಕ್ಷರತಾ ಭಾರತ್ ಯೋಜನೆಗೆ 5 ಕೋಟಿ ರು.
* ತಾಯಿ-ಮಗು ಆರೋಗ್ಯ ಯೋಜನೆಗೆ 86 ಕೋಟಿ ರು.
* ಕಿರು ಸಾಲ ಯೋಜನೆಗೆ 10 ಕೋಟಿ ರು.
* 1ರಿಂದ 10ನೇ ತರಗತಿವರೆಗೆ ಉಚಿತ ಪಠ್ಯ ಪುಸ್ತಕ (ಈ ಹಿಂದೆ 8ರವರೆಗೂ ಇತ್ತು)
* ವಾಜಪೇಯಿ ಆರೋಗ್ಯ ಶ್ರೀ ಯೋಜನೆಗೆ 40 ಕೋಟಿ ರು.
* ಧಾರವಾಡ ಮಾನಸಿಕ ಆರೋಗ್ಯ ಕೇಂದ್ರಕ್ಕೆ 5 ಕೋಟಿ ರು.
* ಶಿವಮೊಗ್ಗದಲ್ಲಿ ಆಯುರ್ವೇದ ಕಾಲೇಜು ಸ್ಥಾಪನೆಗೆ 10 ಕೋಟಿ ರು.
* ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 750 ಕೋಟಿ ರು.
* ಬೆಂಗಳೂರಿನಲ್ಲಿ ಹಜ್ ಮಹಲ್ ನಿರ್ಮಾಣಕ್ಕೆ 5 ಕೋಟಿ ರು.
* ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ 3 ಕೋಟಿ ರು.
* ಬೆಂಗಳೂರಿನಲ್ಲಿ ಸ್ಕೌಟ್ಸ್ ಭವನ ನಿರ್ಮಾಣಕ್ಕೆ 5 ಕೋಟಿ ರು.
* ಜಯದೇವ ಹೃದ್ರೋಗ ಆಸ್ಪತ್ರೆಗೆ 5 ಕೋಟಿ ರು.
* 1,500 ನೇಕಾರರಿಗೆ ತಲಾ 2 ವಿದ್ಯುತ್ ಮಗ್ಗ.
* ವಾಲ್ಮೀಕಿ ಭವನ ನಿರ್ಮಾಣಕ್ಕೆ 5 ಕೋಟಿ ರು.
* ಕ್ರಿಶ್ಚಿಯನ್ ಪಂಗಡ ಅಭಿವೃದ್ಧಿಗೆ 50 ಕೋಟಿ ರು.
* ಬೆಂಗಳೂರಿನಲ್ಲಿ ಕೆಂಪೇಗೌಡ ಕಲಾಭವನ ನಿರ್ಮಾಣಕ್ಕೆ 5 ಕೋಟಿ ರು.
* ಬೆಂಗಳೂರಿನಲ್ಲಿ ಭುವನೇಶ್ವರಿ ಪುತ್ಥಳಿ ನಿರ್ಮಾಣಕ್ಕೆ 25 ಕೋಟಿ ರು.
* ವಿದೇಶಗಳಲ್ಲಿ 5 ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ. ತಲಾ ಒಂದೊಂದು ಕೋಟಿ ಮೀಸಲು.
* ಬಂಗಾರದ ಆಭರಣಗಳಿಗೆ ವ್ಯಾಟ್ ಹೆಚ್ಚಳ.
* ಅಡುಗೆ ಪಾತ್ರೆಗಳ ತೆರಿಗೆ ಶೇ. 1.5ರಷ್ಟು ಹೆಚ್ಚಳ.
* ಸಿನಿಮಾ ಹಂಚಿಕೆದಾರರ ನೊಂದಣಿಗೆ ರಿಯಾಯಿತಿ ಹೆಚ್ಚಳ.
* ಬೆಂಗಳೂರು ಧಾರವಾಡದಲ್ಲಿ ವಾಹನ ತರಬೇತಿ ಕೇಂದ್ರ ಸ್ಥಾಪನೆಗೆ 5 ಕೋಟಿ ರು.
* ಎಸ್‌ಸಿ/ಎಸ್‌ಟಿ ಕಾಲೋನಿ ಅಭಿವೃದ್ಧಿಗೆ ತಲಾ 1 ಕೋಟಿ ರು.
* ಸಾಹಿತಿಗಳ ನೆನಪಿನಂಗಳ ಸ್ಥಾಪನೆಗಾಗಿ 5 ಕೋಟಿ ರು.
* ಕೊಂಕಣಿ ಭಾಷೆ ಅಭಿವೃದ್ಧಿಗಾಗಿ 5 ಕೋಟಿ ರು.
* ಸಂಸ್ಕೃತ ವಿಕಿಪೀಡಿಯಾ ಅಭಿವೃದ್ಧಿಗೆ 1 ಕೋಟಿ ರು.
* ದಿಲ್ಲಿ ಕನ್ನಡ ಶಾಲಾ ಮಕ್ಕಳಿಗಾಗಿ 50 ಲಕ್ಷ ರು. ವೆಚ್ಚದಲ್ಲಿ 2 ಬಸ್ ಖರೀದಿ.
* ಕಂಠೀರವ ಸ್ಟುಡಿಯೋ ನವೀಕರಣಕ್ಕೆ 5 ಕೋಟಿ ರು.
* ಮೇಲುಕೋಟೆ ಅಭಿವೃದ್ಧಿಗೆ 10 ಕೋಟಿ ರು.












Click it and Unblock the Notifications