ಬಿಜೆಪಿ ಸರ್ಕಾರದ ಬಜೆಟ್ ಹಿನ್ನೋಟ, ನಿರೀಕ್ಷೆಗಳು
ಬೆಂಗಳೂರು, ಫೆ.7: 2008ರಿಂದ ಇಲ್ಲಿವರೆಗೂ ಬಿಜೆಪಿ ಸರ್ಕಾರ ತನ್ನ ಅಧಿಕಾರ ಅವಧಿಯಲ್ಲಿ ಯಾವ ಯಾವ ಕ್ಷೇತ್ರಗಳಿಗೆ, ಜಿಲ್ಲೆ, ತಾಲೂಕುಗಳಿಗೆ ಆದ್ಯತೆ ನೀಡಿದೆ. ಮಠ ಮಾನ್ಯಗಳಿಗೆ ನೀಡಿದ ಅನುದಾನ ಇನ್ನಷ್ಟು ಹಿಗ್ಗುತ್ತದೆಯೇ? ಜಗದೀಶ್ ಶೆಟ್ಟರ್ ಚೊಚ್ಚಲ ಬಜೆಟ್ ನಿರೀಕ್ಷೆಗಳೇನು? ಕೃಷಿ ಬಜೆಟ್ ನಿಂದ ಏನಾದರೂ ಲಾಭವಾಗಿದೆಯೇ? ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಗಳ ಮಂಥನ, ಶೆಟ್ಟರ್ ಬಜೆಟ್ ನಿರೀಕ್ಷೆಗಳತ್ತ ಕಿರು ನೋಟ ಇಲ್ಲಿದೆ
ಮಣ್ಣಿನ ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದ ಸಿಎಂ, 6 ಬಾರಿ ಬಜೆಟ್ ಮಂಡಿಸಿದ ಕೀರ್ತಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮ ಆರ್ಥಿಕ ತಜ್ಞ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಮಠ ಮಾನ್ಯಗಳಿಗೆ ಹಂಚಿದ್ದಷ್ಟು ಬೇರೆ ಕಡೆ ಹಣ ಮೀಸಲಿಡಲಿಲ್ಲ.
ಬಜೆಟ್ಟಿಗೆ ಸಂಬಂಧಿಸಿದಂತೆ ಬಲಗೈಯಂತಿದ್ದ ಡಾ. ಆಚಾರ್ಯ ಅವರ ನಿಧನ ನಂತರ ಸದಾನಂದ ಗೌಡರು ಮಂಡಿಸಿದ ಬಜೆಟ್ ಯಡಿಯೂರಪ್ಪ ಅವರ ಬಜೆಟ್ ಮೀರಿಸಿದ್ದಲ್ಲದೆ 1 ಲಕ್ಷ ಕೋಟಿ ರು ದಾಟಿತ್ತು.
ಈಗ ಫೆ. 8 ರಂದು ಜಗದೀಶ್ ಶೆಟ್ಟರ್ ಅವರು ಮಂಡಿಸಲಿರುವ ಬಜೆಟ್ ಚುನಾವಣಾ ಬಜೆಟ್ ಆದರೆ ಆಚ್ಚರಿಯೇನಿಲ್ಲ. ವಿಧಾನಸಭೆಯಲ್ಲಿ ಶುಕ್ರವಾರ (ಫೆ.8) 12.30 ಕ್ಕೆ ಬಜೆಟ್ ಮಂಡನೆಯಾಗಲಿದೆ. ನಂತರ ಸಚಿವ ಉಮೇಶ್ ಕತ್ತಿ ಅವರ ಸಹಾಯದಿಂದ ಶೆಟ್ಟರ್ ಅವರು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಿದ್ದಾರೆ.
ಯಡಿಯೂರಪ್ಪ vs ಸದಾನಂದ ಗೌಡ vs ಜಗದೀಶ್ ಶೆಟ್ಟರ್ ಬಜೆಟ್ ಬಗ್ಗೆ ಕಣ್ಣೋಟ [ಶೆಟ್ಟರ್ ಬಜೆಟ್ ಮುಖ್ಯಾಂಶಗಳು ಇಲ್ಲಿದೆ]

ಬಿಎಸ್ ವೈ vs ಡಿವಿಎಸ್ vs ಶೆಟ್ಟರ್
ಬಿಎಸ್ ವೈ : 85,319 ಕೋಟಿ ರು. ವೆಚ್ಚದ ಜಂಬೋ ಬಜೆಟ್
ಡಿವಿಎಸ್: 1 ಲಕ್ಷ ಕೋಟಿ ರು ರಾಜ್ಯ ಬಜೆಟ್
ಶೆಟ್ಟರ್: 1.5 ಲಕ್ಷ ಕೋಟಿ ರು ಮೀರುವ ಸಾಧ್ಯತೆ

ಬಿಎಸ್ ವೈ vs ಡಿವಿಎಸ್ vs ಶೆಟ್ಟರ್
ಬಿಎಸ್ ವೈ : ಉನ್ನತ ಶಿಕ್ಷಣ, ಇಂಧನ, ನಗರಾಭಿವೃದ್ಧಿ, ನೀರಾವರಿ ಇಲಾಖೆಗಳಿಗೆ ಸಿಂಹಪಾಲು
ಡಿವಿಎಸ್: ಕೃಷಿ, ಮೀನುಗಾರಿಕೆ, ನೀರಾವರಿ, ಹೈನುಗಾರಿಕೆಗೆ ಆದ್ಯತೆ
ಶೆಟ್ಟರ್: ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ

ಬಿಎಸ್ ವೈ vs ಡಿವಿಎಸ್ vs ಶೆಟ್ಟರ್
1. 446 ದೇಗುಲಗಳ ವಸತಿ ವ್ಯವಸ್ಥೆ, ಮೂಲ ಸೌಕರ್ಯಕ್ಕೆ 20 ಕೋಟಿ ರು, ಮೇಲುಕೋಟೆಗೆ 10 ಕೋಟಿ, ಕೊಡಗು ಕಳಂಚೇರಿ ಮಠಕ್ಕೆ 1 ಕೋಟಿ, ಹಾಸನಾಂಬ ದೇಗುಲ, ಬೀದರ್ ಚನ್ನವೀರ ಆಶ್ರಮಕ್ಕೆ 1 ಕೋಟಿ ರು ಅನುದಾನ
2. ರುದ್ರಭೂಮಿ ನಿರ್ವಹಣೆಗೆ 10 ಕೋಟಿ, ಕಾಡಸಿದ್ದೇಶ್ವರ ಮಠಕ್ಕೆ 1 ಕೋಟಿ, ಪಂಚಮಸಾಲಿ ಮಠಕ್ಕೆ 2 ಕೋಟಿ, ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ಹೊರ ರಾಜ್ಯದ ಛತ್ರಕ್ಕೆ 10 ಕೋಟಿ

ಬಿಎಸ್ ವೈ vs ಡಿವಿಎಸ್ vs ಶೆಟ್ಟರ್
ಬಿಎಸ್ ವೈ : ಬಿಬಿಎಂಪಿ ಅಭಿವೃದ್ಧಿಗೆ 350 ಕೋಟಿ ರು.
ಡಿವಿಎಸ್: ಬಿಬಿಎಂಪಿ ಗೆ 1,000 ಕೋಟಿ ಅನುದಾನ
ಶೆಟ್ಟರ್: 1,200 ಕೋಟಿ ನಿರೀಕ್ಷೆ ಸಾಲ ಬಾಧೆ ನಿವಾರಣೆಗೆ ಕ್ರಮ

ಬಿಎಸ್ ವೈ : ರಸ್ತೆ
* ಶಿವಮೊಗ್ಗದಲ್ಲಿ ವರ್ತುಲ ರಸ್ತೆ ಅಭಿವೃದ್ಧಿಗೆ 100 ಕೋಟಿ ರು
* ಮಾಗಡಿ-ಕೊರಟಗೆರೆ, ಗುಬ್ಬಿ-ಮಂಡ್ಯ ರಸ್ತೆ ಅಭಿವೃದ್ಧಿ.
* ಮಿನರ್ವ ರಸ್ತೆ-ಹಡ್ಸನ್ ವೃತ್ತದವರೆಗೆ ಮೇಲ್ಸೇತುವೆ.
* ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ 15 ಕೋಟಿ ರು
* 1,330 ಕೋಟಿ ವೆಚ್ಚದಲ್ಲಿ 600 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿ
* 28,059 ಕಿ.ಮೀ ರಸ್ತೆ ನವೀಕರಣ, 1,523 ಕೋಟಿ ರು ppp ಯೋಜನೆ

ಡಿವಿಎಸ್ ಬಜೆಟ್
* ರಸ್ತೆಗಳ ಸುಧಾರಣೆ, ನಿರ್ವಹಣೆ, ನವೀಕರಣಕ್ಕೆ 4,380 ಕೋಟಿ ರು
* ವಿಶ್ವಬ್ಯಾಂಕ್, ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ 885 ಕಿ.ಮೀ ರಸ್ತೆ ಸುಧಾರಣೆ
* ppp ಯೋಜನೆಯಡಿಗೆ 1816 ಕೋಟಿ ರು
* ಕೊಡಗು ರಸ್ತೆ ಅಭಿವೃದ್ಧಿಗಾಗಿ 75 ಕೋಟಿ ರು ಪ್ಯಾಕೇಜ್












Click it and Unblock the Notifications