ಸದಾನಂದ ಗೌಡರ ಲಕ್ಷ ಕೋಟಿ ಬಜೆಟ್ ರೀಕ್ಯಾಪ್

ಯಡಿಯೂರಪ್ಪ ಅವರು ಜಾರಿಗೆ ಬಂದ ಕೃಷಿ ಬಜೆಟ್ ಅನ್ನು ಸದಾನಂದ ಗೌಡರು ಮುಂದುವರೆಸಿ ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದರು. ಬಜೆಟ್ ಪ್ರಮುಖಾಂಶಗಳು ಇಲ್ಲಿದೆ:
* ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ 126 ಕೋಟಿ ರು ಅನುದಾನ
* ಭಾರತೀಯ ವಿಜ್ಞಾನ ಸಂಸ್ಥೆಯ ಚಳ್ಳಕೆರೆ ಕ್ಯಾಂಪಸ್‌ನಲ್ಲಿ ಸೌರಶಕ್ತಿ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ 10 ಕೋಟಿ ರು ಅನುದಾನ.
* ಬೆಂಗಳೂರಿನ ಟೆಲಿವಿಜನ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ
* ಪ್ರತಿವರ್ಷ ನವೆಂಬರ್ 1 ರಂದು ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ.
* ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 269 ಕೋಟಿ ರು.

DVS and BSY

* ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರು.ಗಳ ಅನುದಾನ
* ಕಂಬಳ ಉತ್ಸವವನ್ನು ಆಚರಿಸಲು 1 ಕೋಟಿ ರು
* ರಾಜ್ಯ ಶಿಲ್ಪಕಲಾ ಅಕಾಡೆಮಿ ಮೂಲಕ ಶಿಲ್ಪಿಗಳ ತರಬೇತಿಗೆ 3 ಕೋಟಿ ರು.
* * ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು 5 ಕೋಟಿ ರು ಅನುದಾನ.
* ದಕ್ಷಿಣ ಕನ್ನಡದ ಉಳ್ಳಾಲದಲ್ಲಿ 2 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣ.
* ಬಿಬಿಎಂಪಿ ಗೆ 1,000 ಕೋಟಿ ಅನುದಾನ
* ಸಿಗ್ನಲ್ ಮುಕ್ತ ಕಾರಿಡಾರ್ ಗೆ 426 ಕೋಟಿ ರು
* ಘನತ್ಯಾಜ್ಯ ನಿರ್ವಹಣಾಗೆ 200 ಕೋಟಿ
* ಬೆಂಗಳೂರಿನಲ್ಲಿ ನೀರು ಸರಬರಾಜು ಮಂಡಳಿಗೆ 1 ಸಾವಿರ ಕೋಟಿ
* ಬೆಂಗಳೂರಿನ 8 ವಾಹನ ನಿಲುಗಡೆ ಸಮುಚ್ಚಯ
* ಬೆಂಗಳೂರು ಮೂಲ ಸೌಕರ್ಯಕ್ಕೆ 5500 ಕೋಟಿ ರು
* ಕೃಷಿ ಮತ್ತು ತೋಟಗಾರಿಕೆಗೆ 4,096 ಕೋಟಿ

ತೆರಿಗೆ:ಬೀಡಿಗಳ ಮೇಲೆ ಶೇ 5 ರಷ್ಟು ಮೌಲ್ಯ ವರ್ಧಿತ ತೆರಿಗೆ.
* ರೆಡಿಮೇಡ್ ಉಡುಪು ಶೇ 14 ರಿಂದ ಶೇ. 5 ಕ್ಕೆ ಇಳಿಕೆ.
* ಬಂಗಾರ, ಆಭರಣ, ಲೋಹಗಳ ಮೇಲಿನ ಶೇ 2 ರಿಂದ 1 ಕ್ಕೆ ಇಳಿಕೆ.
* ತಾತ್ಕಾಲಿಕ ಕಲ್ಯಾಣ ಮಂಟಪಗಳ ಮೇಲೆ ಶೇ 8 ರಷ್ಟು ತೆರಿಗೆ.
* ಸಿಗರೇಟ್, ಶೇ 15 ರಿಂದ 17ಕ್ಕೇ ಏರಿಕೆ
* ವಿಚಾರ ಸಂಕಿರಣ, ಸಮಾರಂಭಕ್ಕೆ ಶೇ.10 ತೆರಿಗೆ

* ಡೀಸೆಲ್ ತೆರಿಗೆ ಇಳಿಕೆ ಶೇ.18 ರಿಂದ ಶೇ 16.75ಕ್ಕೆ ಇಳಿಕೆ
* ಬೀರ್ ಮೇಲಿನ ತೆರಿಗೆ ಶೇ 7.5 ಸುಂಕ
* ಫ್ರೂಟ್ ವೈನ್ ಶೇ .50 ರಷ್ಟು ತೆರಿಗೆ ಕಡಿತ
* ಕಚ್ಚಾಹತ್ತಿ ಶೇ 5 ರಿಂದ ಶೇ 2 ಕ್ಕೆ ಇಳಿಕೆ
* ಸರ್ಜಿಕಲ್ ಪಾದರಕ್ಷೆ ತೆರಿಗೆ ಶೇ 14 ರಿಂದ ಶೇ 5ಕ್ಕೆ ಇಳಿಕೆ

* ಚಪಾತಿ, ಪರೋಟ ಮೇಲಿನ ತೆರಿಗೆ ಶೇ 14 ರಿಂದ 7ಕ್ಕೆ ಇಳಿಕೆ.
* ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆಗೆ 400 ಕೋಟಿ ರು

* ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್, 6ನೇ ವೇತನ ಆಯೋಗದ ಶಿಫಾರಸ್ಸಿಗೆ ಅಸ್ತು
* ಸಾವಯವ ಕೃಷಿಗೆ 200 ಕೋಟಿ
* ಮಂಡ್ಯದ ಮೈಶುಗರ್ ಅಭಿವೃದ್ಧಿಗೆ 30 ಕೋಟಿ
* ನೀರಾವರಿ ವಲಯಕ್ಕೆ 10,500 ಕೋಟಿ
* ಬೆಳಗಾವಿ, ಬಾಗಲಕೋಟೆ, ಕೋಲಾರದಲ್ಲಿ ಮಾವು ಅಭಿವೃದ್ಧಿ ಕೇಂದ್ರ
* 123 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ

ದೇಗುಲ, ಮಠಗಳಿಗೆ ಅನುದಾನ: ವಿಶ್ವಕರ್ಮ ಸಮುದಾಯ ಟ್ರಸ್ಟ್ ,ಬಲಿಜ ಸಮುದಾಯ, ಗುಲ್ಬರ್ಗಾ ವಿವಿ ಹಡಪದ ಅಧ್ಯಯನ ಪೀಠ, ಹೊಸದುರ್ಗದ ಉಪ್ಪಾರ ಜನಾಂಗ, ವಿಶ್ವಗಾಣಿಗರ ಕೇಂದ್ರ,ಕನಕ ಸ್ಮಾರಕ ಭವನ, ಹೇಮಾ ವೇಮಾ ಸದ್ಭಾವನಾ ಪೀಠ ಹಿರೇ ಹೊಸಹಳ್ಳಿ ಭವನ, ಕೊರಟಗೆರೆ ಅನ್ನಪೂರ್ಣೇಶ್ವರಿ ಟ್ರಸ್ಟ್ ದೇಗುಲ, ಶಂಕರಾಚಾರ್ಯ ಮಹಾಸಂಸ್ಥಾನ,ಅಂಬಿಗರ ಚೌಡಯ್ಯ ಭವನ, ಮೈಸೂರು ಸಂದೇಶ ಭವನ, ಜೇವರ್ಗಿ ಮರುಳ ಶಂಕರ ಪೀಠ, ನೆಲಮಂಗಲದ ಮಹಾಲಕ್ಷ್ಮಿ ಟ್ರಸ್ಟ್, ತಿಗಳ ಸಮಾಜ, ತೊಗಟವೀರ ಕ್ಷತ್ರಿಯ ಸಂಘಟನೆ, ರಾಜ್ಯ ಮಡಿವಾಳ ಸಮಾಜ, ತಿಪಟೂರು ತಾಲ್ಲೂಕಿನ ಕಾಡಸಿದ್ಧೇಶ್ವರ ಶ್ರೀ ಮಠಕ್ಕೆ ತಲಾ 1 ಕೋಟಿ ರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+