ಏರೋ ಟಿಕೆಟ್ ನೀಡದೆ ಸತಾಯಿಸಿದ ಬ್ಯಾಂಕ್

ಇದರಿಂದ ರೊಚ್ಚಿಗೆದ್ದಿರುವ 150ಕ್ಕೂ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳು ಬ್ಯಾಂಕ್‌ನಲ್ಲಿ ಗುರುವಾರ ನೆರೆದಿದ್ದು, ಟಿಕೆಟ್ ನೀಡುವ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದು, ಬ್ಯಾಂಕ್ ಸಿಬ್ಬಂದಿಗಳು ಜನರಿಗೆ ಸಮಜಾಯಿಷಿ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.
ಏರೋ ಶೋ ನೋಡಲು ಟಿಕೆಟ್ ನೀಡಲು ಆಕ್ಸಿಸ್ ಬ್ಯಾಂಕ್ ವಿಂಡೋ ತೆರೆದಿತ್ತು. ಜನರು ಖುಷಿಯಿಂದ ಕ್ಯೂ ನಿಂತುಕೊಂಡು ಹಣ ನೀಡಿ ರಸೀದಿ ಪಡೆದುಕೊಂಡರು. ಆದರೆ, ಬ್ಯಾಂಕ್ ಮಾತ್ರ ಟಿಕೆಟ್ ನೀಡದೆ ಸತಾಯಿಸುತ್ತದೆ. ಸರ್ವರ್ ತುಂಬ ನಿಧಾನವಾಗಿದೆ ಎಂದು ಸಬೂಬು ಹೇಳುತ್ತಿದೆ.
ಒನ್ಇಂಡಿಯಾ ಕನ್ನಡ ಓದುಗರೊಬ್ಬರು ಹೇಳುವುದೇನೆಂದರೆ, ಟಿಕೆಟ್‌ನೀಡುವ ಮೊದಲೇ ಬ್ಯಾಂಕ್ ಹಣವನ್ನು ಇಸಿದುಕೊಂಡಿದೆ. ಆದರೆ, ಟಿಕೆಟ್ ನೀಡುವ ಮುನ್ನ ತುಂಬಬೇಕಾದ ಫಾರಂ ಖಾಲಿಯಾಗಿದೆ, ಸರ್ವರ್ ಸ್ಲೋ ಇದೆ ಮುಂತಾದ ಕಾರಣಗಳನ್ನು ನೀಡಿ ಜನರನ್ನು ಆಟವಾಡಿಸುತ್ತಿದೆ. ಇದು ಎಂಥ ನ್ಯಾಯ? ನೀಡಿರುವ ಹಣ ವಾಪಸ್ ಕೂಡ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications