ಎಸಿಯಲ್ಲಿ ಕೂತವರಿಗೆ ಬಿಸಿ ಮುಟ್ಟಿಸಿದ ಬಿಎಂಟಿಸಿ

ವೋಲ್ವೋ ಮೊದಲ ಎರಡು ಹಂತದವರೆಗಿನ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೂರು ಮತ್ತು ಏಳನೇ ಹಂತದವರೆಗಿನ ಪ್ರಯಾಣ ದರವನ್ನು ರು.5 ಹೆಚ್ಚಳ ಮಾಡಲಾಗಿದೆ. ಇಂದಿನಿಂದಲೇ ಹೊಸ ದರ ಜಾರಿಯಾಗಲಿದೆ.
ಎಂಟನೇ ಹಂತದ ನಂತರ ರು.10ಕ್ಕೆ ಹೆಚ್ಚಳವಾಗಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಅಂಜುಮ್ ಫರ್ವೇಜ್ ತಿಳಿಸಿದ್ದಾರೆ. ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಬಸ್ ದರ ಅನಿವಾರ್ಯವಾಗಿದೆ ಎಂದಿದ್ದಾರೆ ಅವರು.
ಮಾರುಕಟ್ಟೆ ದರದಲ್ಲೇ ಡೀಸೆಲ್ ಖರೀದಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಹೊರೆ ಹೊರುವುದು ಅನಿವಾರ್ಯವಾಗಿದೆ. ಈ ಹೊರೆಯಿಂದ ಪಾರಾಗಲು ಖಾಸಗಿ ಬಂಕ್ ಗಳಿಂದ ಡೀಸೆಲ್ ಖರೀದಿ ಮಾಡಬೇಕಾಗಿದೆ.
ಸದ್ಯಕ್ಕೆ ಈ ನಷ್ಟವನ್ನು ಸರಿದೂಗಿಸಿಕೊಳ್ಳಲು ವೋಲ್ವೋ ಬಸ್ ದರವನ್ನು ಹೆಚ್ಚಿಸಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಾಮಾನ್ಯ ಬಸ್ ದರವನ್ನು ಪರಿಷ್ಕರಿಸುವುದು ಅನಿವಾರ್ಯವಾಗುತ್ತದೆ ಎನ್ನುತ್ತವೆ ಬಿಎಂಟಿಸಿ ಮೂಲಗಳು.











Click it and Unblock the Notifications