ದೇಶದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಯಾರು?

ಮುಂಬೈ, ಜ.31: ಕಳೆದ ವರ್ಷ ಭ್ರಷ್ಟಾಚಾರ ವಿರೋಧಿ ಆಂದೋಲನದ ಕಿಚ್ಚು ಹಚ್ಚುವ ಮೂಲಕ ಮನೆಮಾತಾದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಕಳೆದ ವರ್ಷದಂತೆ ಈ ವರ್ಷವೂ ದೇಶದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.

ನಂತರದ 2 ಮತ್ತು 3ನೇ ಸ್ಥಾನಗಳಲ್ಲಿ ಕ್ರಮವಾಗಿ ನಟರಾದ ಅಮೀರ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಇದ್ದಾರೆ. ಸದ್ಯ, ಅಪ್ಪಿತಪ್ಪಿಯೂ ಸಮೀಕ್ಷಕರು ರಾಜಕಾರಣಿಗಳತ್ತ ಹೋಗಿಲ್ಲ.

anna-hazare-most-trusted-in-india-trust-research-survey

Trust Research Advisory ಸಂಸ್ಥೆ Brand Trust Report-2013 ಸಮೀಕ್ಷಾ ವರದಿಯನ್ನು ನಿನ್ನೆ ಬಿಡುಗಡೆ ಮಾಡಿದೆ. ಒಟ್ಟು 211 ವಿಭಾಗಗಳಲ್ಲಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ ವ್ಯಕ್ತಿ ವಿಭಾಗದಲ್ಲಿ ಅಣ್ಣಾ ಹಜಾರೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಗ್ರಾಹಕ ವಸ್ತುಗಳಲ್ಲಿ ನೋಕಿಯಾ ಮೊಬೈಲ್ ಕಂಪನಿ ಎಂದಿನಂತೆ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.

ಕಳೆದ ವರ್ಷ 5ನೇ ಸ್ಥಾನದಲ್ಲಿದ್ದ ಅಮೀರ್‌ 2ನೇ ಸ್ಥಾನಕ್ಕೆ ಏರಿದ್ದರೆ, 2ನೇ ಸ್ಥಾನದಲ್ಲಿದ್ದ ಸಲ್ಮಾನ್‌ ಈ ಬಾರಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ರತನ್‌ ಟಾಟಾಗೆ 4ನೇ ಸ್ಥಾನ, ಕ್ರಿಕೆಟಿಗ ಸಚಿನ್‌ಗೆ 5ನೇ ಸ್ಥಾನ, ಬಾಬಾ ರಾಮದೇವ್‌ಗೆ 10ನೇ ಸ್ಥಾನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ 12 ಮತ್ತು ನಟ ರಜನೀಕಾಂತ್‌ಗೆ 13ನೇ ಸ್ಥಾನ ಪ್ರಾಪ್ತಿಯಾಗಿದೆ.

211 ವಿಭಾಗಗಳಲ್ಲಿ 1,100 ಅತ್ಯಂತ ವಿಶ್ವಾಸಾರ್ಹತೆಯನ್ನು ಆಧಾರವಾಗಿಸಿಕೊಂಡು ಈ ಸಮೀಕ್ಷೆ ನಡೆಸಲಾಗಿದೆ. ಕೇವಲ ವ್ಯಕ್ತಿಗಳಲ್ಲದೆ ವೈಯಕ್ತಿಕ ಸಾಧನ/ಸಲಕರಣೆಗಳು, ಗ್ರಾಹಕ ಉತ್ಪನ್ನಗಳು, ರೀಟೇಲ್, ಟೆಕ್ನಾಲಜಿ, ಬ್ಯಾಂಕಿಂಗ್, ಸರಕಾರಿ ಸಂಸ್ಥೆಗಳು, ಟೆಲಿಕಾಂ, ಏರ್ ಲೈನ್ಸ್ ಇವೇ ಮುಂತಾದ ವಿಭಾಗಗಳಲ್ಲಿ ಈ ಆಯ್ಕೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+