ವಿದ್ಯಾರ್ಥಿನಿಗೆ ಲವ್ ಲೆಟರ್ ಬರೆದು ಸಿಕ್ಕಿಬಿದ್ದ ಶಿಕ್ಷಕ

Teacher writes love letter to student
ನಾಗಪಟ್ಟಿಣಂ (ತ.ನಾಡು), ಜ. 30 : ವಿದ್ಯಾರ್ಥಿನಿಯರ ಮೈಮುಟ್ಟುವುದು, ಶಾಲೆಯಲ್ಲಿ ಕುಳಿತುಕೊಂಡೇ ವೇಶ್ಯಾವಾಟಿಕೆ ನಡೆಸುವುದು, ಐದು ನಿಮಿಷ ತಡವಾಗಿ ಬಂದಿದ್ದಕ್ಕೆ ಸಾವಿರಾರು ಬಸ್ಕಿ ಹೊಡೆಸುವುದು, ಗೋಡೆಗೆ ವಿದ್ಯಾರ್ಥಿಯ ತಲೆ ಘಟ್ಟಿಸುವುದು, ಪುಟ್ಟ ಹುಡುಗನಿಗೆ ಅವನದೇ ಮೂತ್ರ ಕುಡಿಸುವುದು... ಇವರೇನಾ ಇಂದಿನ ಕಾಲದ ಶಿಕ್ಷಕರು.

ಎಲ್ಲೆಂದರಲ್ಲಿ ಇಂತಹುದೇ ಪ್ರಕರಣಗಳು ಕೇಳಿಬರುತ್ತಿರುವಾಗ ಇಲ್ಲೊಬ್ಬ ಸರಕಾರಿ ಶಾಲೆಯ ಶಿಕ್ಷಕ ಪೌಲ್ ಮೋಹನ್ ಎಂಬಾತ ಪಟ್ಟಾಗಿ ಕುಳಿತು 7ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದು ಸಿಕ್ಕುಬಿದ್ದಿದ್ದಾನೆ. ಪ್ರೇಮಿಗಳ ದಿನ ಇನ್ನು ಕೆಲವೇ ದಿನಗಳಿರುವಾಗ ಆತನಲ್ಲಿ ವಿದ್ಯಾರ್ಥಿನಿಯ ಮೇಲೆ ಪ್ರೇಮ ಚಿಗಿತುಬಿಟ್ಟಿದೆ. ತಾನೊಬ್ಬ ಶಿಕ್ಷಕನೆನ್ನುವುದನ್ನು ಮರೆತು ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದಾನೆ.

ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ಅಡೈಲೈಯೂರ್‌ನ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲಿನಲ್ಲಿ ಪಾಠ ಮಾಡುತ್ತಿರುವ ಈ 24 ವರ್ಷದ ಶಿಕ್ಷಕ ಇಂಗ್ಲಿಷಿನಲ್ಲಿ ಬರೆದ ಲವ್ ಲೆಟರನ್ನು 7ನೇ ತರಗತಿಯ ವಿದ್ಯಾರ್ಥಿನಿಯ ಪುಸ್ತಕದಲ್ಲಿ ಹುದುಗಿಸಿಟ್ಟಿದ್ದ. ಆತ ತನ್ನ ಪ್ರೇಮವನ್ನು ಹುಡುಗಿಗೆ ನಿವೇದಿಸಿಕೊಂಡ ಆ ಪತ್ರ ವಿದ್ಯಾರ್ಥಿನಿಯ ಗಮನಕ್ಕೇ ಬಂದಿಲ್ಲ. ಆದರೆ, ಮಂಗಳವಾರ ಅಚಾನಕ್ಕಾಗಿ ಸಿಕ್ಕಿದ್ದು ಮತ್ತೊಬ್ಬ ಶಿಕ್ಷಕರಿಗೆ.

ಅವರು ಬಿಡ್ತಾರಾ? ನೇರವಾಗಿ ಆ 'ಪ್ರೇಮಿ' ಶಿಕ್ಷಕನ ಭಾನಗಡಿಯನ್ನು ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಿದ್ದಾರೆ. ಮುಖ್ಯೋಪಾಧ್ಯಾಯರು ಶಿಕ್ಷಕ ಅನುಚಿತ ವರ್ತನೆಯನ್ನು ಸಹಾಯಕ ಪ್ರಾಥಮಿಕ ಶಿಕ್ಷಣ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ಅಧಿಕಾರಿಯಾಗಿರುವ ಪಳನಿವೇಲ್ ಅವರು ಶಿಕ್ಷಕನನ್ನು ಕರೆಸಿ ವಿಚಾರಿಸಿ ಆತನನ್ನು ಅಮಾನತು ಮಾಡಿದ್ದಾರೆ. ಇಂಥ ಶಿಕ್ಷಕನಿಗೆ ಕೊಟ್ಟ ಈ ಶಿಕ್ಷೆ ಸಾಕಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+