ಇತ್ತ ಕೆಜೆಪಿ vs ಬಿಜೆಪಿ ಡ್ರಾಮಾ, ಅತ್ತ ಕೈಪಡೆ ನಡಿಗೆ

Siddaramaiah, DHNS photo
ಉಡುಪಿ, ಜ.29 : ಕೆಜೆಪಿ vs ಬಿಜೆಪಿ ಶೀತಲ ಸಮರ ತಾರಕಕ್ಕೇರಿ ವಿಧಾನಸೌಧದ ಅಂಗಳದಲ್ಲಿ ಹಾಸಿಗೆ ಹಾಸಿಕೊಂಡು ಮಲಗಿರುವಾಗ ಕಾಂಗ್ರೆಸ್ ನಾಯಕರು ತಮ್ಮ ಪಾಡಿಗೆ ಕರಾವಳಿ ನೆಲದಲ್ಲಿ ಪಾದಯಾತ್ರೆ ಮುಂದುವರೆಸಿದ್ದಾರೆ.

ರಾಜ್ಯದಲ್ಲಿ ನಾಲ್ಕು ಭಾಗಗಳಲ್ಲಿ ಸುಮಾರು 500 ಕಿ.ಮೀ ದೂರದ ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪೂರ್ವ ನಿಗದಿಯಂತೆ ಉಡುಪಿ ಕೃಷ್ಣನ ಕಡೆಗೆ ಮುಖಮಾಡಿದೆ.

ಮಂಗಳವಾರ ಬೆಳಗ್ಗೆ 9 ಗಂಟೆಗೆ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. 'ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ' ಎಂಬ ಧ್ಯೇಯ ವಾಕ್ಯ ಹೊತ್ತು ಸುಮಾರು 79.4 ಕಿ.ಮೀ. ದೂರದ ಪಾದಯಾತ್ರೆಯನ್ನು ಫೆ.1 ರಂದು ಉಡುಪಿಯ ಶ್ರೀಕೃಷ್ಣನ ಕ್ಷೇತ್ರದಲ್ಲಿ ಮುಕ್ತಾಯಗೊಳಿಸಲು ಕೆಪಿಸಿಸಿ ಯೋಜಿಸಿದೆ.

ಮೊದಲ ದಿನದ ಪಾದಯಾತ್ರೆ ಪಣಂಬೂರಿನಲ್ಲಿ ಅಂತ್ಯಗೊಳ್ಳಲಿದ್ದು, ಎರಡನೇ ದಿನ ಮುಲ್ಕಿಯಲ್ಲಿ ಹಾಗೂ ಮೂರನೇ ದಿನ ಕಾಪು ಬಳಿಯ ಪಾಂಗಾಳದಲ್ಲಿ ಕೆಪಿಸಿಸಿ ನಾಯಕರು ತಂಗಲಿದ್ದಾರೆ. ಕೊನೆ ದಿನ ಮಲ್ಪೆ ಬಳಿ ಪಾದಯಾತ್ರೆ ಅಂತ್ಯಗೊಳಿಸಿ ಶ್ರೀಕೃಷ್ಣ ದರ್ಶನಕ್ಕೆ ನಾಯಕರು ತೆರಳುವ ಕಾರ್ಯಕ್ರಮವಿದೆ ಎಂದು ಕೆಪಿಸಿಸಿ ಮಾಧ್ಯಮ ಕೇಂದ್ರ ಮುಖ್ಯಸ್ಥ ದಿನೇಶ್ ಮಾಹಿತಿ ನೀಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ನಾಯಕ ಎಸ್.ಆರ್ ಪಾಟೀಲ್ ಸೇರಿದಂತೆ ಹಲವಾರು ನಾಯಕರು ಕರಾವಳಿ ಭಾಗದ ಜನರ ಮನ ಓಲೈಕೆಗೆ ಬಂದಿದ್ದಾರೆ. ಆದರೆ, ಬೆಂಗಳೂರಿನಲ್ಲಿ ನಡೆದಿರುವ ದಿಢೀರ್ ರಾಜಕೀಯ ಬೆಳವಣಿಗೆ ನಂತರ ಕಾಂಗ್ರೆಸ್ ಪಾಳೆಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿರುವ ಸುದ್ದಿ ಸಿಕ್ಕಿದೆ.

ಜಗದೀಶ್ ಶೆಟ್ಟರ್ ಅವರ ಸರ್ಕಾರ ಉಳಿಯುವುದೇ ಕಷ್ಟ ಎಂಬ ಸ್ಥಿತಿ ಬಂದರೆ ಏನು ಮಾಡುವುದು. ಬಹುಮತ ಪರೀಕ್ಷೆ ಸಮಯದಲ್ಲಿ ಯಾವ ನಿಲುವು ತಾಳಬೇಕು. ರಾಜ್ಯಪಾಲರಿಗೆ ಮತ್ತೊಮ್ಮೆ ಮನವಿ ಮಾಡಬೇಕಾ? ಅಥವಾ ನಮ್ಮ ಪಾಡಿಗೆ ನಾವು ಪಾದಯಾತ್ರೆ ಮುಂದುವರೆಸಬೇಕಾ? ಎಂಬ ಪ್ರಶ್ನೆಗಳನ್ನು ಹೈಕಮಾಂಡ್ ನಾಯಕರ ಕಂಪ್ಯೂಟರ್ ಗೆ ಕೆಪಿಸಿಸಿ ಕಚೇರಿ ಕಳಿಸಿರಲಿಕ್ಕೂ ಸಾಕು.

ಸದ್ಯಕ್ಕಂತೂ ಬಿಜೆಪಿ vs ಕೆಜೆಪಿ ಕದನದಲ್ಲಿ ಶೋಭಾ ಕರಂದ್ಲಾಜೆ ಆದಿಯಾಗಿ ಯಡಿಯೂರಪ್ಪ ಬೆಂಬಲಿತ ಶಾಸಕರು ಸ್ಪೀಕರ್ ಕಚೇರಿಯಲ್ಲೇ ಹಾಸಿಗೆ ತರಿಸಿಕೊಂಡು ಆಹೋರಾತ್ರಿ ಧರಣಿ ಮಾಡಲು ನಿರ್ಧರಿಸಿದ್ದಾರೆ. ಹಠವಾದಿಯಂತೆ ಸ್ಪೀಕರ್ ಅವರು ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ ಎನ್ನುತ್ತಲೇ ಇದ್ದಾರೆ.

ಇನ್ನೊಂದು ಕಡೆ ಕೆಜೆಪಿ ಮೂಲಕ ಯಡಿಯೂರಪ್ಪ ಕಟ್ಟಲು ಹೊರಟ್ಟಿದ್ದ ಕನಸನ್ನು ಸಂಸ್ಥಾಪಕ ಪದ್ಮನಾಭ ಛಿದ್ರಗೊಳಿಸಿ ಯಡಿಯೂರಪ್ಪ ಅವರನ್ನೇ ಉಚ್ಚಾಟನೆ ಮಾಡಿ 'ದಿನದ ಬಿಸಿಬಿಸಿ ಸುದ್ದಿ' ನೀಡಿದ ಕೀರ್ತಿ ಹೊಂದಿದ್ದಾರೆ. ಎಲ್ಲದರ ನಡುವೆ ಕಾಂಗ್ರೆಸ್ ನಾಯಕರು ಊದಿಕೊಂಡಿರುವ ಕಾಲುಗಳಿಗೆ ನೋವಿನೆಣ್ಣೆ ತಿಕ್ಕಿಸಿಕೊಳ್ಳುತ್ತಾ ಕರಾವಳಿಯ ಹವೆಯನ್ನು ಸವಿಯುತ್ತಿದ್ದಾರೆ.

ಪಾದಯಾತ್ರೆ ಕಥೆ: ಮೊದಲ ಹಂತದಲ್ಲಿ ಕೃಷ್ಣೆಯ ಕಡೆಗೆ ಪಾದಯಾತ್ರೆಯಲ್ಲಿ ಬಳ್ಳಾರಿ, ಬಿಜಾಪುರ, ಬಾಗಲಕೋಟೆ, ಬಾಗೇವಾಡಿ, ಕೊಪ್ಪಳ ಹೀಗೆ ಒಟ್ಟು 4 ಜಿಲ್ಲೆಗಳ 140 ಕಿ.ಮೀ ದೂರ ಕ್ರಮಿಸಲಾಗಿದೆ. ಎರಡನೇ ಹಂತಕ್ಕೆ 'ಸಾಮಾನತೆಯ ಕಡೆಗೆ' ಎಂದು ಹೆಸರಿಡಲಾಗಿತ್ತು, ಫೆಬ್ರವರಿ ಮೊದಲ ವಾರ ಜೇವರ್ಗಿಯಲ್ಲಿ ಸಂಪನ್ನಗೊಳ್ಳಬೇಕಿತ್ತು. ಆದರೆ, ಅಲ್ಲಿಂದ ಕಾರಣಾಂತರದಿಂದ ಪಾದಯಾತ್ರೆ ಕರಾವಳಿ ಭಾಗಕ್ಕೆ ಶಿಫ್ಟ್ ಆಯಿತು.

ಮೂರನೇ ಹಂತದ ಸಾಮರಸ್ಯದ ನಡಿಗೆ: ಕನ್ನಡ ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ಕಾಂಗ್ರೆಸ್ ಈ ನಡಿಗೆ ಸದ್ಯ ಜಾರಿಯಲ್ಲಿದೆ. ನಾಲ್ಕನೇ ಹಂತ ಜನಾಡಳಿತದ ಕಡೆಗೆ: ಬಿಜೆಪಿಯ ಅಸ್ಥಿರ ಸರ್ಕಾರ, ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+