ವಿಟಿಯು ಗಣಿತ ಪೇಪರ್ ಲೀಕ್ ಆಗಿದ್ದು ಹೀಗೆ

VTU Maths paper leaked at Bangalore Engg College
ಬೆಂಗಳೂರು, ಜ.26: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಇಂಜಿನಿಯರಿಂಗ್ ಮೊದಲ ಸೆಮಿಸ್ಟರ್ ಗಣಿತದ ಪೇಪರ್ ಲೀಕ್ ಆಗಿದೆ. ಅದು ಮರು ಪರೀಕ್ಷೆ ಪತ್ರಿಕೆ ಸೋರಿಕೆ ಆಗಿರುವುದು ವಿಟಿಯು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಜ.23ರಂದು ನಡೆಯಬೇಕಿದ್ದ ಗಣಿತ ಮರು ಪರೀಕ್ಷೆಗೂ ಅರ್ಧ ಗಂಟೆ ಮುನ್ನ ಪೇಪರ್ ಲೀಕ್ ಆಗಿರುವ ಸುದ್ದಿ ಹಬ್ಬಿತ್ತು. ಕೊನೆ ಶುಕ್ರವಾರ ಸಂಜೆ ವೇಳೆಗೆ ಪೇಪರ್ ಲೀಕ್ ಆಗಿದ್ದು ಹೇಗೆ ಎಂಬುದು ಪತ್ತೆಯಾಗಿದೆ. ಯಲಹಂಕದ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿದೆ.

ಮೊದಲಿಗೆ ದಾವಣಗೆರೆ ಅಥವಾ ತುಮಕೂರು ಕೇಂದ್ರಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಶಂಕೆ ವ್ಯಕ್ತವಾಗಿತ್ತು. ವಿಟಿಯು ತಂಡ ತಕ್ಷಣವೇ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿತ್ತು. ಆದರೆ, ಯಾವುದೇ ಪರೀಕ್ಷಾ ಅಕ್ರಮ ಕಂಡು ಬಂದಿರಲಿಲ್ಲ. ಆದರೆ, ಎಲ್ಲಿಂದ ಲೀಕ್ ಆಗಿರಬಹುದು ಎಂಬುದರ ಸುಳಿವು ಅಲ್ಲಿ ಸಿಕ್ಕಿಬಿಟ್ಟಿತ್ತು.

ಮಿಸ್ ಕಾಲ್ ಸುಳಿವು: ನಂತರ ಯಲಹಂಕದ ಕೇಂದ್ರದ ಕಡೆಗೆ ಹೊರಟ ತನಿಖಾ ತಂಡ, ಅಲ್ಲಿ ಸಿಕ್ಕ ಕಂಪ್ಯೂಟರ್ ನೋಡಿ ದಂಗಾದರು. ವಿಟಿಯು ನಿಂದ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಇಮೇಲ್(encrypted) ಅನ್ನು ಅಲ್ಲಿ ಡಿಕೋಡ್ ಮಾಡಲಾಗುತ್ತಿತ್ತು. ಜೊತೆಗೆ ಅಲ್ಲಿನ ಸಿಬ್ಬಂದಿಯೊಬ್ಬರ ಮೊಬೈಲ್ ಫೋನ್ ನಲ್ಲಿ 10 ಮಿಸ್ ಕಾಲ್ ಗಳು ಸಂಪೂರ್ಣ ಕಥೆಯನ್ನು ಬಿಚ್ಚಿಟ್ಟಿತು.

ವಿಟಿಯು ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಅಪ್ ಲೋಡ್ ಮಾಡುವ ಸಮಯದ ಬಗ್ಗೆ ತಿಳಿದಿದ್ದ ಚಾಲಾಕಿ, ಇ ಮೇಲ್ ಕಳಿಸುವುದನ್ನೇ ಕಾಯುತ್ತಿದ್ದ. ನಂತರ ಕಂಪ್ಯೂಟರ್ ಲ್ಯಾಬ್ ಗೆ ತೆರಳಿ ದೈನಂದಿನ ಕೆಲಸದಲ್ಲಿ ನಿರತನಾಗುವಂತೆ ನಟಿಸುತ್ತಾ ಇಮೇಲ್ ಡಿಕೋಟ್ ಮಾಡಿದ್ದಾನೆ.

ಆದರೆ, ಈ ವೇಳೆಗೆ ಆತನ ಮೊಬೈಲ್ ಗೆ ಅನೇಕ ಬಾರಿ ಕರೆ ಬರಲು ಆರಂಭಿಸುತ್ತದೆ. ಆದರೆ, ಅವನು ಯಾವುದನ್ನು ರಿಸೀವ್ ಮಾಡುವುದಿಲ್ಲ. ಮೆಸೇಜ್ ಮೇಲೆ ಮೆಸೇಜ್ ಬಂದರೂ ಉತ್ತರಿಸುವುದಿಲ್ಲ. ಈ ಗದ್ದಲ ನಡುವೆ ಇಮೇಲ್ ಕೆಲವರಿಗೆ ರವಾನಿಸಿಬಿಡುತ್ತಾನೆ.

ಕಾಲೇಜು ಸಿಬ್ಬಂದಿ ಮೊಬೈಲ್ ಸೀಜ್ ಮಾಡಿದಾಗ ಆತನ ಮೊಬೈಲ್ ನಲ್ಲಿ ಕಂಡು ಬಂದ ಮೊಟ್ಟ ಮೊದಲ ಮೆಸೇಜ್ 'Are you done with sending the stuff" ತಕ್ಷಣವೇ ತನಿಖಾ ತಂಡ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸುತ್ತದೆ.

ಪರಿಶೀಲನೆ ನಡೆಸಿದಾಗ ಪರೀಕ್ಷಾ ಕೇಂದ್ರ ಕಂಪ್ಯೂಟರ್ ಗೆ ಎರಡು ಪ್ರಿಂಟರ್ ಗಳಲ್ಲದೆ ಇನ್ನೊಂದು ಫ್ಯಾಕ್ಸ್ ಯಂತ್ರ ಕನೆಕ್ಟ್ ಆಗಿರುವುದು ಕಂಡು ಬಂದಿದೆ. ಅಲ್ಲದೆ ಒಂದು ಡಾಕ್ಯುಮೆಂಟ್ ರೈಟರ್(ಗುಪ್ತ ಸಂದೇಶಗಳನ್ನು ಡಿಕೋಡ್) ಕೂಡಾ ಸಂಪರ್ಕ ಹೊಂದಿರುವುದು ಕಂಡು ಬಂದಿದೆ. ಈ ರೀತಿ ಡಿಕೋಡ್ ಆದ ಪೇಪರ್ ಗಳು PDF ಮಾದರಿಯಲ್ಲಿ ಸಂರಕ್ಷಿಸಿ ಇಮೇಲ್ ಮಾಡಲು ಆತ ಯತ್ನಿಸಿರುತ್ತಾನೆ.

ತನಿಖಾ ತಂಡ ಅಗತ್ಯ ಮಾಹಿತಿ ಕಲೆ ಹಾಕಿ ಸೂಕ್ತವಾಗಿ ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ತನಿಖೆ ಅಗತ್ಯವಿದ್ದರೆ ಕೈಗೊಳ್ಳಲಾಗುವುದು ಎಂದು ವಿಟಿಯು ಉಪ ಕುಲಪತಿ ಎಚ್ ಮಹೇಶಪ್ಪ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+