ಉಜಿರೆಯಲ್ಲಿ ಸುದೀಪ್ XI vs ಪ್ರೆಸ್ ಕ್ಲಬ್ XI

ಜನವರಿ 27 ರ ಭಾನುವಾರ ಬೆಳಗ್ಗೆ 8-30 ರಿಂದ ಮಧ್ಯಾಹ್ನ 1-30 ಗಂಟೆಯವರೆಗೆ ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜು ಆಶ್ರಯದಲ್ಲಿ 'ಸುದಿಪ್-11' v/s 'ಪ್ರೆಸ್ ಕ್ಲಬ್ 11' ನಡುವೆ ನಿಯಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಅಪರೂಪಕ್ಕೊಮ್ಮೆ ನಡೆಯುವ 'ಸೌಹಾರ್ದ ಕ್ರಿಕೆಟ್ ಟೂರ್ನಮೆಂಟ್'ಗಳಲ್ಲಿ ಮಿಂಚುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ಈಗ 'ತಾರೆ'ಗಳನ್ನೆದುರಿಸಲು ತಯಾರಾಗಿದ್ದಾರೆ.
ಸಹಾಯಾರ್ಥ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ಆಯೋಜಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದ ಕನ್ನಡ ಚಲನಚಿತ್ರರಂಗ ರಾಜ್ ಕಪ್ ವೇಳೆ ಸಾಕಷ್ಟು ಸಂಚಲನ ಹುಟ್ಟುಹಾಕಿತ್ತು. ಅದರಲ್ಲೂ ತಾರೆಗಳ ಸಿ.ಸಿ.ಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ಸಂಪೂರ್ಣ ದಕ್ಷಿಣ ಭಾರತದ ಚಿತ್ರೋದ್ಯಮವನ್ನು ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾಗಿತ್ತು. ಈಗ ಇದೇ ತಂಡ ಮಾಧ್ಯಮ ಲೋಕದ ದಿಗ್ಗಜರನ್ನು ಉಜಿರೆಯ ನೆಲದಲ್ಲಿ ಎದುರಿಸಲು ಸಿದ್ಧವಾಗಿದೆ.
ರಾಜ್ ಕಪ್, ಸಿ.ಸಿ.ಎಲ್ ಅಭ್ಯಾಸ ಪಂದ್ಯಗಳಲ್ಲಿ ಸೆಣಸಿದ್ದ ಕನ್ನಡ ಚಲನಚಿತ್ರರಂಗ ಹಾಗೂ ಬೆಂಗಳೂರು ಪತ್ರಕರ್ತರ ಸಂಘದ ತಂಡಗಳು ಉಜಿರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 'ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ'ದಲ್ಲಿ ಮುಖಾಮುಖಿಯಾಗಲಿವೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಉಜಿರೆ ಎಸ್.ಡಿ.ಎಂ ಕಾಲೇಜಿನ ಆಶ್ರಯದಲ್ಲಿ ನಡೆಯುವ ಈ ಅಪರೂಪದ ಕ್ರಿಕೆಟ್ ಪಂದ್ಯಾಟದಲ್ಲಿ ಕನ್ನಡ ಚಲನಚಿತ್ರರಂಗದ ಖ್ಯಾತ ನಟ, ಕಿಚ್ಚ ಸುದೀಪ್ ನೇತೃತ್ವದ 'ಸುದೀಪ್ - ಇಲೆವೆನ್' ಹಾಗೂ ಬೆಂಗಳೂರು ಪತ್ರಕರ್ತ ಸಂಘದ ಸದಾಶಿವ ಶೆಣೈ ನೇತೃತ್ವದ 'ಪ್ರೆಸ್ ಕ್ಲಬ್ - ಇಲೆವೆನ್' ತಂಡಗಳು 'ಟ್ರೋಫಿ'ಗಾಗಿ ಸೆಣಸಲಿವೆ.
ಎಸ್ ಡಿಎಂ ಕಾಲೇಜಿನ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಮೂಡಬಿದಿರೆಯ ಆಳ್ವಾಸ್ ಎಜುಕೇಷನಲ್ ಫೌಂಡೇಶನ್ ನ ಅಧ್ಯಕ್ಷರಾದ ಡಾ. ಮೋಹನ್ ಆಳ್ವಾ, ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಉಪ ಮುಖ್ಯಮಂತ್ರಿ ಆರ್ ಅಶೋಕ್, ಬೆಳ್ತಂಗಡಿ ಶಾಸಕ ವಸಂತ ಬಂಗೇರ ಭಾಗವಹಿಸಲಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ವಿಜಯಕುಮಾರ್, ಕರ್ನಾಟಕ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ಕರ್ನಾಟಕ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ನಾಯ್ಡು ಕರ್ನಾಟಕ ನಿರ್ಮಾಪಕರ ಸಂಘದ ಕಾರ್ಯದರ್ಶಿ ಸೂರಪ್ಪ ಬಾಬು, ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಟೂರ್ನಿಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.
ಕ್ರೀಡಾಭಿಮಾನಿಗಳು ಈ ಅಪರೂಪದ ಪಂದ್ಯಾಟಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ತಂಡಗಳು ಇಂತಿದೆ:
ಸುದೀಪ್ - 11 ತಂಡದಲ್ಲಿ ಸುದೀಪ್ (ಕಪ್ತಾನ), ದರ್ಶನ್ ತೂಗುದೀಪ್ (ನಟ), ಚಿರಂಜೀವಿ ಸರ್ಜಾ (ನಟ), ಜಯ ಕಾರ್ತಿಕ್ (ನಟ), ತರುಣ್ ಚಂದ್ರ (ನಟ), ತರುಣ್ ಸುಧೀರ್ (ನಟ), ರಾಜೀವ್, ಧ್ರುವ (ಭಾರತದ ಕಿವುಡು ಮತ್ತು ಮೂಕ ಕ್ರಿಕೆಟ್ ತಂಡದ ನಾಯಕ), ಅಭಿಮನ್ಯು (ನಟ), ಪ್ರದೀಪ್ (ನಟ), ರಾಹುಲ್ (ನಟ), ಮಹೇಶ್ (ನಟ), ಚೇತನ್ (ನಟ) ಮತ್ತು ಶಂಕರ ಗೌಡ (ನಿರ್ಮಾಪಕ) ಆಡಲಿದ್ದಾರೆ. ಕರ್ನಾಟಕದ ಮಾಜಿ ರಣಜಿ ಆಟಗಾರ ಜಿ. ಕೆ. ಅನಿಲ್ ಕುಮಾರ್ ತಂಡದ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ 11 ತಂಡದಿಂದ ಸದಾಶಿವ ಶೆಣೈ (ಕಪ್ತಾನ - ಸಿನಿ ಪತ್ರಕರ್ತ), ಸುದರ್ಶನ್ - ಉಪ ಕಪ್ತಾನ (ಕ್ರೀಡಾ ವಿಭಾಗದ ಮುಖ್ಯಸ್ಥ - ಕಸ್ತೂರಿ ನ್ಯೂಸ್), ಕಿರಣ್ ಹೆಚ್. ವಿ (ಟಿ.ವಿ 9), ಗಂಗಾಧರ್ (ಟಿ.ವಿ 9), ಸಮೀರ್ (ಟಿ.ವಿ 9), ಮಂಜುನಾಥ್ (ಟಿವಿ 9), ಮನು ಅಪ್ಪಯ್ಯ (ಟೈಮ್ಸ್ ಆಫ್ ಇಂಡಿಯಾ), ವಾಸುದೇವ ಕಿತ್ತೂರು (ಟೈಮ್ಸ್ ಆಫ್ ಇಂಡಿಯಾ), ನಿತಿನ್ ಜಾದವ್ (ಟೈಮ್ಸ್ ಆಫ್ ಇಂಡಿಯಾ), ವಿನಯ್ (ಇನ್ ಬ್ಯಾಂಗಲೂರ್), ವಿಶ್ವಾಸ್ ಶೆಟ್ಟಿ (ಇನ್ ಬ್ಯಾಂಗಲೂರ್), ಸೋಮಶೇಖರ್ ಜಿ.ಆರ್.ಎನ್ (ದಿ ಹಿಂದೂ), ಮಲ್ಲಿಕಾಚರಣ್ ವಾಡಿ (ವಿಜಯವಾಣಿ, ಶ್ರೀಧರ್ (ಉದಯ ಟಿ.ವಿ), ರೋಶನ್ (ಡೆಕ್ಕನ್ ಹೆರಾಲ್ಡ್) ಭಾಗವಹಿಸಲಿದ್ದಾರೆ












Click it and Unblock the Notifications