'ನನ್ನ ಮಗನನ್ನು ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ'

my-son-rishad-wont-be-wipro-ceo-azim-premji-davos
ಬೆಂಗಳೂರು, ಜ.24: ನಿನ್ನೆಯವರೆಗೂ, ರಾಜ್ಯ ರಾಜಕೀಯದಲ್ಲಿನ ಹಸಿ-ಬಿಸಿ ವಿದ್ಯಮಾನಗಳನ್ನು ಕಂಡ ನಾಡಿನ ಜನತೆಗೆ ಯಾವೋನಪ್ಪಾ ಇಂತಹ ಮಾತು ಹೇಳಿರುವುದು. ಎಲ್ಲರೂ ತಮ್ಮ ಮಕ್ಕಳು, ಮೊಮ್ಮಕ್ಕಳು, ಆ ಮಕ್ಕಳು, ಈ ಮಕ್ಕಳು ಅಂತ ತಮ್ಮ ತಮ್ಮವರನ್ನೇ ಅಧಿಕಾರದಲ್ಲಿ ಪ್ರತಿಷ್ಠಾಪಿಸಲು ಹವಣಿಸುತ್ತಿರುವಾಗ ಇದ್ಯಾರಪ್ಪಾ ತನ್ನ ಮಗನನ್ನು ಅಧಿಕಾರಕ್ಕೆ ತರುವುದಿಲ್ಲವೆಂದು ಹೇಳುತ್ತಿರುವುದು ಎಂಬ ಕುತೂಹಲ ಮೂಡುವುದು ಸಹಜವೇ.

ಅದೂ ಈತ ಕಟ್ಟಿ ಬೆಳೆಸಿರುವ ಸಾಮ್ರಾಜ್ಯ ನೋಡಿದಾಗ ಅವರು ತಮ್ಮ ಮಗನ ವಿಷಯದಲ್ಲಿ ಹೇಳಿರುವ ಮಾತಿಗೆ ಮತ್ತಷ್ಟು ಮಹತ್ವ ಬರುತ್ತದೆ. ಹೌದು, ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾದ ಬೆಂಗಳೂರಿನ ವಿಪ್ರೋ ಕಂಪನಿಯ ಒಡೆಯ/ಮಾಜಿ ಸಿಇಒ ಅಜೀಂ ಪ್ರೇಮ್ ಜಿ ಅವರು ತಮ್ಮ ಹಿರಿಯ ಮಗನನ್ನು ಎಂದಿಗೂ ಕಂಪನಿಯ ಸಿಇಒ ಆಗಿ ಮಾಡಲಾರೆ ಎಂದು ಘೋಷಿಸಿದ್ದಾರೆ.

35 ವರ್ಷದ ರಿಶದ್ ಪ್ರೇಮ್ ಜಿ (ಚಿತ್ರದಲ್ಲಿರುವವರು) 2007ರಲ್ಲಿ ವಿಪ್ರೋ ಕಂಪನಿ ಸೇರಿಕೊಂಡಾಗಿನಿಂದ ಅಜೀಂ ತಮ್ಮ ಮಗನನ್ನೇ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಅದೆಲ್ಲ ಏನೂ ಇಲ್ಲ. ಕಂಪನಿಯ ಪ್ರವರ್ತಕ ಮಾಲೀಕತ್ವ ಮಾತ್ರವೇ ಆತನಿಗೆ ದಕ್ಕುತ್ತದೆ. ಉಳಿದಂತೆ ಅರ್ಹ ವ್ಯಕ್ತಿಯಷ್ಟೇ ಕಂಪನಿಯ CEO ಆಗುತ್ತಾರೆ ಎಂದು ಪ್ರೇಮ್ ಜೀ ಸ್ಪಷ್ಟಪಡಿಸಿದ್ದಾರೆ.

ಎಲ್ಲೋ ಹೊಳೆನರಸೀಪುರದಲ್ಲಿ ಕುಳಿತು ಅವರು ಈ ಮಾತನ್ನು ಹೇಳಿಲ್ಲ. ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಇಡೀ ಜಗತ್ತಿಗೆ ಕೇಳಿಸುವಂತೆ 67 ವರ್ಷದ ಅಜೀಂ ಘಂಟಾಘೋಷವಾಗಿ ಈ ಗಟ್ಟಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ರಿಶದ್, ವಿಪ್ರೋ ಕಂಪನಿಯಲ್ಲಿ ಶೇ. 0.03 ರಷ್ಟು ಷೇರು ಪಾಲು ಹೊಂದಿದ್ದಾರೆ. ಕಂಪನಿಯ ಹಾಲಿ ಸಿಇಒ ಟಿಕೆ ಕುರಿಯನ್ ಬಹುಶಃ ವಿಪ್ರೋದ ಮುಂದಿನ CEO ಆಗಬಹುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+