ಕುಂಭಮೇಳ: ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?
ಪ್ರಯಾಗದಲ್ಲಿ ನಡೆದಿರುವ 2013ನೇ ಸಾಲಿನ ಮಹಾ ಕುಂಭ ಮೇಳ ಸಂಕ್ರಾಂತಿ ದಿನ ಜ.14ರಂದು ಆರಂಭಗೊಂಡರೂ ಜ.27ರಿಂದ ಫೆ.25ರ ತನಕ ಕೆಲವು ಶುಭ ದಿನಗಳನ್ನು ಪವಿತ್ರ ಸ್ನಾನಕ್ಕಾಗಿ ಗುರುತಿಸಲಾಗಿದೆ.
ಭೂ ಗ್ರಹದ ಅತಿ ದೊಡ್ಡ ಮೇಳ, ಜಗತ್ತಿನ ಯಾವ ಮೇಳದಲ್ಲೂ ಕಾಣದಷ್ಟು ಜನರನ್ನು ಆಕರ್ಷಿಸುತ್ತದೆ. ಜೊತೆಗೆ ಅಷ್ಟು ಜನರು ಒಂದು ಕಡೆ ಏಕತಾ ಭಾವದಿಂದ ಒಂದುಗೂಡುವಾಗ ಸ್ವಚ್ಛತೆ, ಆರೋಗ್ಯ, ರಕ್ಷಣೆ ಆಯೋಜಕರಿಗೆ ತಲೆ ನೋವಿನ ವಿಷಯವಾಗುತ್ತದೆ.
ಆದರೆ, ಈ ಮಹಾ ಕುಂಭಮೇಳದ ಯಶಸ್ಸಿಗೆ ಸ್ವಚ್ಛತಾ ಪರಿಚಾರಕರ ಕೊಡುಗೆ ಅಪಾರ, ಪೊರಕೆ ಹಿಡಿದು ಕ್ಲೀನರ್ ಗಳು ಕಸದ ರಾಶಿ ಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರೆ, ಪವಿತ್ರ ನದಿ ಗಂಗೆ ಮಲೀನಗೊಳ್ಳದಂತೆ ವಿಶೇಷ ಸ್ವಚ್ಛತಾ ಪಡೆ ಹದ್ದಿನ ಕಣ್ಣಿಟ್ಟಿದೆ.
ಸುಮಾರು 55 ದಿನಗಳ ಕಾಲ ನಡೆಯುವ ಈ ಮಹಾಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾಗಿದೆ. ಸುಮಾರು 100 ಮಿಲಿಯನ್ ಗೂ ಅಧಿಕ ಜನರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಾರ್ಚ್ 10ರಂದು ಮಹಾ ಶಿವರಾತ್ರಿ ದಿನ ಮೇಳ ಸಂಪನ್ನಗೊಳ್ಳಲಿದೆ. ಅಲಹಾಬಾದಿನಲ್ಲಿ ನಡೆಯುತ್ತಿರುವುದು ಪೂರ್ಣ ಮಹಾ ಕುಂಭಮೇಳವಾಗಿದೆ.
ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ಪವಿತ್ರ ಗಂಗೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಮುಸ್ಲಿಂ ಬಾಂಧವರು...ಈ ಬಾರಿಯ ಮಹಾ ಕುಂಭಮೇಳ 2013ರಲ್ಲಿ ಕಂಡು ಬರುವ ಶುಭ ತಿಥಿಗಳನ್ನು ಭಕ್ತಾದಿಗಳು ಗುರುತಿಸಿಕೊಳ್ಳಿ..
* ಜನವರಿ 14, 2013 (ಸೋಮವಾರ) : ಮಕರ ಸಂಕ್ರಾಂತಿ
* ಜನವರಿ 27, 2013 (ಭಾನುವಾರ) : ಪೌಶ ಹುಣ್ಣಿಮೆ
* ಫೆಬ್ರವರಿ 6, 2013 (ಬುಧವಾರ) : ಏಕಾದಶಿ ಸ್ನಾನ

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ರುದ್ರಾಕ್ಷಿ ಮಾಲೆ ತಯಾರಿಕೆಯಲ್ಲಿ ತೊಡಗಿರುವ ಸಾಧು. ಈ ಬಾರಿಯ ಮಹಾ ಕುಂಭಮೇಳ 2013ರಲ್ಲಿ ಕಂಡು ಬರುವ ಶುಭ ತಿಥಿಗಳನ್ನು ಭಕ್ತಾದಿಗಳು ಗುರುತಿಸಿಕೊಂಡು ಪವಿತ್ರ ಮುಳುಗು ಹಾಕುವಂತೆ ಕೋರಲಾಗಿದೆ.
* ಫೆಬ್ರವರಿ 10, 2013 (ಭಾನುವಾರ), ಮೌನಿ ಅಮಾವಾಸ್ಯೆ (ಮುಖ್ಯ ಪವಿತ್ರ ಸ್ನಾನ ದಿನ)
* ಫೆಬ್ರವರಿ 15, 2013 (ಶುಕ್ರವಾರ) : ವಸಂತ ಪಂಚಮಿ ಸ್ನಾನ
* ಫೆಬ್ರವರಿ 17, 2013 (ಭಾನುವಾರ) : ರಥಸಪ್ತಮಿ ಸ್ನಾನ

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ರಷ್ಯಾ ಭಕ್ತೆಯೊಬ್ಬರು ಮೆರವಣಿಗೆ ಹೊರಟಾಗ ಕಂಡದ್ದು ಹೀಗೆ...ಈ ಬಾರಿಯ ಮಹಾ ಕುಂಭಮೇಳ 2013ರಲ್ಲಿ ಕಂಡು ಬರುವ ಶುಭ ತಿಥಿ
* ಫೆಬ್ರವರಿ 21, 2013 (ಗುರುವಾರ): ಭೀಷ್ಮ ಏಕಾದಶಿ ಸ್ನಾನ
* ಫೆಬ್ರವರಿ 25, 2013 (ಸೋಮವಾರ) : ಮಾಘಿ ಹುಣ್ಣಿಮೆ ಸ್ನಾನ

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ಆನೆ ಮೇಲೆ ಸಾಧುಗಳ ಮೆರವಣಿಗೆ... ವಿವಿಧ ಸ್ನಾನಘಟ್ಟಗಳಲ್ಲಿ ಮುಳುಗೇಳುವ ನಾಗಾ ಸಾಧುಗಳನ್ನು ನೋಡಲು ಅನೇಕರು ಭಯಮಿಶ್ರಿತ ಕುತೂಹಲದಿಂದ ಮುಗಿ ಬೀಳುವುದು ಸಾಮಾನ್ಯ ಸಂಗತಿಯಾಗಿದೆ.

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ಉತ್ತರ ಪ್ರದೇಶ ರಾಜ್ಯಪಾಲ ಬಿಎಲ್ ಜೋಶಿ ಅವರು ಪತ್ನಿ ಸಮೇತ ಸಂಗಮದಲ್ಲಿ ಗಂಗಾ ಪೂಜೆ ಸಲ್ಲಿಸಿದರು.
ಪರಮಶಿವನ ಆರಾಧಕರಾದ ಉದಾಸೀನ ಅಖಾಡ ಗಳು 'ಜಟಾ ಮುಕುಟ' ಧಾರಿಗಳಾಗಿ ಕಾಣಿಸಿಕೊಳ್ಳುವುದನ್ನು ನೋಡಲು ಜನರು ಕಾತುರರಾಗಿರುವ ದೃಶ್ಯ ಎಲ್ಲೆಡೆ ಕಂಡು ಬಂದಿದೆ.

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ಇಸ್ಕಾನ್ ಆಯೋಜನೆಯ ನೃತ್ಯದಲ್ಲಿ ವಿದೇಶಿ ಭಕ್ತರ ನಟನಾ ಭಂಗಿ. ಪ್ರಯಾಗದಲ್ಲಿ ನಡೆದಿರುವ 2013ನೇ ಸಾಲಿನ ಮಹಾ ಕುಂಭ ಮೇಳ ಸಂಕ್ರಾಂತಿ ದಿನ ಜ.14ರಂದು ಆರಂಭಗೊಂಡರೂ ಜ.27ರಿಂದ ಫೆ.25ರ ತನಕ ಕೆಲವು ಶುಭ ದಿನಗಳನ್ನು ಪವಿತ್ರ ಸ್ನಾನಕ್ಕಾಗಿ ಗುರುತಿಸಲಾಗಿದೆ.

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ಹಾಲಿವುಡ್ ನಟ ರಿಚರ್ಡ್ ಗೇರ್, ಮೈಕಲ್ ಡಗ್ಲಾಸ್, ಕ್ಯಾಥರೀನ್ ಜೆಟಾ ಜೋನ್ಸ್, ಆಧಾತ್ಮ ಗುರು ದಲಾಯಿ ಲಾಮಾ, ಯುಎಸ್ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಜಾನ್ ಹಗೆಲಿನ್ ಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ವಿಶ್ವದೆಲ್ಲೆಡೆಯಿಂದ 2,500 ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಮೇಳದಲ್ಲಿ ಪಾಲ್ಗೊಳ್ಳಲಿದೆ.

ಕುಂಭಮೇಳದ ದೃಶ್ಯಾವಳಿಗಳನ್ನು ತಪ್ಪದೆ ನೋಡಿ
ಪವಿತ್ರ ಗಂಗೆಗೆ ಪ್ರತಿ ದಿನ ಆರತಿ ಎತ್ತಿ ಪೂಜೆ ಸಲ್ಲಿಸುತ್ತಿರುವ ಅರ್ಚಕರು. ಪ್ರಮುಖ ಧಾರ್ಮಿಕ ಮುಖಂಡರ ಚಲನವಲನ ಭದ್ರತೆ ನಿಗಾವಹಿಸಲು ಜಿಪಿಎಸ್ ಬಳಸಲಾಗಿದೆ. ಇಸ್ರೋ, ದೂರ ಸಂವೇದಿ ಕೇಂದ್ರದ ಮೂಲಕ ಪ್ರತಿ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತಿದೆ. ಮೇಳದ ಪ್ರತಿ ಚಿತ್ರಗಳು ದಿನವಿಡೀ ಲಭ್ಯವಾಗಲಿದೆ.











Click it and Unblock the Notifications