ನ್ಯಾ.ಚಂದ್ರಶೇಖರಯ್ಯ ನೇಮಕಕ್ಕೆ ಸುಪ್ರೀಂ ಸಹ ಅಸಮ್ಮತಿ

sc-quashes-upalokayukta-chandrashekaraiah-appointment
ಬೆಂಗಳೂರು, ಜ.11: ಕರ್ನಾಟಕದ ಎರಡನೆಯ ಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ನೇಮಕಾತಿಯನ್ನು ಅನೂರ್ಜಿತಗೊಳಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಇದರೊಂದಿಗೆ ಸತತ ಎರಡನೆಯ ದಿನವೂ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಕಪಾಳಮೋಕ್ಷ ಮಾಡಿದೆ.

ಕಳೆದ ಏಪ್ರಿಲ್ 3ರಂದು ಮಂಗಳವಾರ ಸಂಜೆ ಹೈಕೋರ್ಟ್ ಸುದೀರ್ಘ ತೀರ್ಪು ನೀಡುತ್ತಿದ್ದಂತೆ ಚಂದ್ರಶೇಖರಯ್ಯ ಉಪ ಲೋಕಾಯುಕ್ತರಾಗಿ ಮುಂದುವರಿಯುವುದು void ಅಗಿತ್ತು. ಅದಾನಂತರ, ಚಂದ್ರಶೇಖರಯ್ಯ ಅವರು ಎರಡನೇ ದಿನಗಳಲ್ಲಿ ಲೋಕಾಯುಕ್ತ ಕಚೇರಿಯನ್ನು ತೆರವುಗೊಳಿಸಿದ್ದರು. ಅಂದಹಾಗೆ ಪ್ರಸ್ತುತ ನ್ಯಾ. ಮಜ್ಜಗೆ ಒಬ್ಬರೇ ಈಗ ಲೋಕಾಯುಕ್ತಕ್ಕೆ ದಿಕ್ಕು.

ತಮ್ಮ ಗಮನಕ್ಕೆ ತಾರದೇ ಚಂದ್ರಶೇಖರಯ್ಯ ಅವರನ್ನು ಉಪ ಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡಗೆ ಪತ್ರ ಬರೆದಿದ್ದರು. ನಂತರ ಉಪ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ವಿವಾದಕ್ಕೆ ಒಳಗಾಗಿತ್ತು. ಚಂದ್ರಶೇಖರಯ್ಯ ಅವರ ನೇಮಕಾತಿಯನ್ನೇ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಚಂದ್ರಶೇಖರಯ್ಯ ಅವರನ್ನು ಈ ಹುದ್ದೆಗೆ ನೇಮಕ ಮಾಡಿ ಜನವರಿ 21ರಂದು ಆದೇಶ ಹೊರಡಿಸಲಾಗಿತ್ತು. ಜ. 22ರಂದು ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+