ಉಪಲೋಕಾ ಚಂದ್ರಶೇಖರಯ್ಯ ನೇಮಕ ಢಮಾರ್

ಇದರಿಂದ ರಾಜ್ಯ ಸರಕಾರಕ್ಕೆ ಮತ್ತೆ ಮುಖಭಂಗವಾಗಿದೆ. ಕಳೆದ ವಾರ ಶಂಕರ ಬಿದರಿ ನೇಮಕದಲ್ಲಿ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದ ಮುಖ್ಯಮಂತ್ರಿ ಸದಾನಂದಗೌಡ ಸರಕಾರಕ್ಕೆ ಹೈಕೋರ್ಟಿನಿಂದ ಮತ್ತೊಮ್ಮೆ ಕಪಾಳಮೋಕ್ಷವಾಗಿದೆ.
ಈಗಾಗಲೇ 7 ತಿಂಗಳಿಂದ ಕರ್ನಾಟಕ ಲೋಕಾಯುಕ್ತ ಸ್ಥಾನ ಖಾಲಿ ಬಿದ್ದಿದೆ. ಇನ್ನು, ಇಬ್ಬರು ಉಪ ಲೋಕಾಯುಕ್ತರ ಪೈಕಿ ಇದೀಗ ನ್ಯಾ. ಚಂದ್ರಶೇಖರಯ್ಯ ಅವರ ನೇಮಕವನ್ನೂ ಕೋರ್ಟ್ ಅನೂರ್ಜಿತಗೊಳಿಸಿದೆ.
ರಾಜ್ಯ ಎರಡನೇ ಉಪಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಚಂದ್ರಶೇಖರಯ್ಯ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ, ವಕೀಲ ಆರ್. ಆನಂದ ಮೂರ್ತಿ ಮತ್ತು ಸಿ. ಜಾಣಕೆರೆ ಕೃಷ್ಣ ಅವರು 2 ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications