2ನೇ ಉಪಲೋಕಾಯುಕ್ತ ಮುಂದುವರೀತಾರಾ?

will-chandrashekaraiah-continue-as-upalokayukta-hc
ಬೆಂಗಳೂರು, ಏ.3: ಇಂದು ಹೈಕೋರ್ಟ್‌ ಈ ಪ್ರಶ್ನೆಗೆ ಉತ್ತರಿಸಲಿದೆ. ರಾಜ್ಯದ ಎರಡನೆಯ ಉಪ ಲೋಕಾಯುಕ್ತರಾಗಿ ನ್ಯಾ. ಚಂದ್ರಶೇಖರಯ್ಯ ಮುಂದುವರಿಯಬೇಕೇ, ಬೇಡವೇ ಎಂಬುದನ್ನು ಕೋರ್ಟ್‌ ನಿರ್ಧರಿಸಲಿದೆ. ಕಳೆದ ವಾರ DG-IGP ಆಗಿದ್ದ ಶಂಕರ ಬಿದರಿಯನ್ನು ಆ ಸ್ಥಾನದಿಂದ ಕೆಳಗಿಳಿಸಿದ ಹೈಕೋರ್ಟ್‌ ವಿಭಾಗೀಯ ಪೀಠ 'ಕಳಂಕಿತ' ನ್ಯಾ. ಚಂದ್ರಶೇಖರಯ್ಯ ಅವರನ್ನು ಈ ವಾರ ಲೋಕಾಯುಕ್ತದಿಂದ ನಿರ್ಗಮಿಸುವಂತೆ ಮಾಡುತ್ತದಾ?

ಪುರಾತನ ಪ್ರಶ್ನೆ: ಈ ಮಧ್ಯೆ, ಅನಾದಿ ಕಾಲದಿಂದಲೂ ಖಾಲಿ ಬಿದ್ದಿರುವ ಕರ್ನಾಟಕ ಲೋಕಾಯುಕ್ತ ಸ್ಥಾನಕ್ಕೆ ಅಕಳಂಕಿತರು ಯಾರಾದರೂ ನೇಮಕಗೊಂಡರಾ ಎಂಬುದು ಇನ್ನೂ ತಿಳಿದುಬಂದಿಲ್ಲ.

ರಾಜ್ಯ ಎರಡನೇ ಉಪಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಚಂದ್ರಶೇಖರಯ್ಯ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ, ವಕೀಲ ಆರ್. ಆನಂದ ಮೂರ್ತಿ ಮತ್ತು ಸಿ. ಜಾಣಕೆರೆ ಕೃಷ್ಣ ಅವರು 2 ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾ. ಎನ್‌. ಕುಮಾರ್‌ ಮತ್ತು ನ್ಯಾ. ಎಚ್‌.ಎಸ್‌. ಕೆಂಪಣ್ಣ ಅವರ ವಿಭಾಗೀಯ ಪೀಠ ವಿಚಾರಣೆ ಮುಂದುವರಿಸಲಿದೆ.

ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ. ರಾಜ್ಯ ಸರ್ಕಾರದ ಪರ ರಾಜ್ಯ ಅಡ್ವೋಕೇಟ್‌ ಜನರಲ್‌ ವಾದ ಮಂಡಿಸುತ್ತಿದ್ದಾರೆ. ಈಗಾಗಲೇ ಸತತ ಮೂರು ಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿರುವ ಅಡ್ವೋಕೇಟ್‌ ಜನರಲ್‌ ಅವರು, ನ್ಯಾ. ಚಂದ್ರಶೇಖರಯ್ಯ ನೇಮಕಾತಿಯನ್ನು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+