2ನೇ ಉಪಲೋಕಾಯುಕ್ತ ಪೀಕಲಾಟವೇನು?

ವಾಸ್ತವದಲ್ಲಿ CJ ಸೇನ್ ಅವರು ಜಸ್ಟೀಸ್ ಎಚ್. ರಾಘವ ವಿಠ್ಠಲಾಚಾರ್ಯ ಅವರ ಹೆಸರನ್ನು ಸೂಚಿಸಿದ್ದರು. ಅದೇ ರೀತಿ ವಿಧಾಸನಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಸ್ಟೀಸ್ ಮೊಹಮದ್ ಅನ್ವರ್ ಮತ್ತು ಜಸ್ಟೀಸ್ ರಮಣ ಅವರನ್ನು ಸೂಚಿಸಿದ್ದರು. ಆದರೆ ಈ ಹೆಸರುಗಳನ್ನು ಪರಿಶೀಲಿಸುವ ಗೋಜಿಗೇ ಹೋಗದೆ ಮುಖ್ಯಮಂತ್ರಿ ತಮ್ಮ ಪರಮಾಧಿಕಾರ ಬಳಸಿ, ನ್ಯಾ ಚಂದ್ರಶೇಖರಯ್ಯ ಅವರನ್ನು ಎರಡನೆಯ ಉಪ ಲೋಕಾಯುಕ್ತರನ್ನಾಗಿ ನೇಮಿಸಿದರು ಎಂಬುದು ವಿವಾದದ ಕೇಂದ್ರಬಿಂದು.
ಮತ್ತೊಂದು ಗಮನಾರ್ಹ ಅಂಶವೆಂದರೆ ಶಂಕರ ಬಿದರಿ ಕೇಸಿನಲ್ಲಿ ಮಾನವ ಹಕ್ಕುಗಳ ಆಯೋಗದ ವರದಿಯನ್ನು ಮರೆಮಾಚಿ, ಅವರನ್ನು DG-IGP ಸ್ಥಾನದಲ್ಲಿ ಕುಳ್ಳರಿಸಲಾಯಿತು ವಿವಾದಕ್ಕೆ ಗುರಿಯಾಗಿ ಅದರಿಂದಲೇ ಸ್ಥಾನ ವಂಚಿತರಾದರು. ಅದೇ ರೀತಿ, ನ್ಯಾ ಚಂದ್ರಶೇಖರಯ್ಯ ಅವರ ಕೇಸಿನಲ್ಲಿ ಅಂತಹ ಗುರುತರ ಪ್ರಕರಣವೊಂದನ್ನು ಹೈಕೋರ್ಟ್ ಗಮನಕ್ಕೆ ತರಲಾಗಿದೆ. ಆ ಪ್ರಕರಣವನ್ನು ಗಣನೆಗೆ ತೆಗೆದುಕೊಳ್ಳದೆ ನ್ಯಾ ಚಂದ್ರಶೇಖರಯ್ಯಗೆ ಉಪ ಲೋಕಾಯುಕ್ತ ಸ್ಥಾನ ನೀಡಲಾಗಿದೆ.
ಕುಖ್ಯಾತ ಮೈಸೂರು ರೆಸಾರ್ಟ್ ಹಗರಣದಲ್ಲಿ ನ್ಯಾ ಚಂದ್ರಶೇಖರಯ್ಯ ಹೆಸರು ಕಾಣಿಸಿಕೊಂಡಿತ್ತು. ಆದರೆ ನ್ಯಾ ಚಂದ್ರಶೇಖರಯ್ಯ ಅವರ ಪ್ರಕಾರ ಆ ಪ್ರಕರಣದಲ್ಲಿ ಅನಗತ್ಯವಾಗಿ ಅವರ ಹೆಸರನ್ನು ಎಳೆದುತರಲಾಗಿತ್ತು. ತದನಂತರ ಅಂತಿಮವಾಗಿ ಅವರ ಹೆಸರನ್ನು ತೆಗೆದುಹಾಕಲಾಗಿತ್ತು. ಇದರ ಹೊರತಾಗಿ ಹೌಸಿಂಗ್ ಸೊಸೈಟಿಯಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪವೂ ಇದೆ. ಆದರೆ ನ್ಯಾ ಚಂದ್ರಶೇಖರಯ್ಯ ಆ ಆರೋಪವನ್ನೂ ತಳ್ಳಿಹಾಕಿದ್ದಾರೆ.












Click it and Unblock the Notifications