ಇನ್ಫೋಸಿಸ್ ಮತ್ತೆ ಹಳಿಗೆ: 2369 ಕೋಟಿ ನಿವ್ವಳ ಲಾಭ

infosys-q3-2013-beats-estimates-pat-at-rs-2369-cr
ಬೆಂಗಳೂರು, ಜ.11: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿ ಮೂರನೆಯ ತ್ರೈಮಾಸಿಕದಲ್ಲಿ ವೆರೈಟಿ ಫಲಿತಾಂಶ ನೀಡಿದೆ. ಮಾರುಕಟ್ಟೆಯ ನಿರೀಕ್ಷೆ, ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ಇನ್ಫಿ, Q3 ಫಲಿತಾಂಶದಲ್ಲಿ ಭರ್ಜರಿ ಇಳುವರಿ ತೋರಿದೆ.

Infosys ಕಂಪನಿಯ ತೆರಿಗೆ ನಂತರದ ಲಾಭ 2369 ಕೋಟಿ ರೂ. ಆಗಿದೆ. ಕಂಪನಿ ಅಬ್ಬಬ್ಬಾ ಅಂದರೆ 2,200 ಕೋಟಿ ರೂ. ಲಾಭ ಗಳಿಸಬಹುದು ಎಂದೇ ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದರು. ತತ್ಫಲವಾಗಿ, 2012ರಲ್ಲಿ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ Infosys ಈಗ ನಿರಾಶಾವಾದದ ಸುಳಿಯಿಂದ ಹೊರಬಂದಂತಾಗಿದೆ.

Infosys ಕಂಪನಿಯ ಆದಾಯ ಅಕ್ಟೋಬರ್-ಡಿಸೆಂಬರ್ 2012 ತ್ರೈಮಾಸಿಕದಲ್ಲಿ ಶೇ. 12 ರಷ್ಟು ಏರಿಕೆಯೊಂದಿಗೆ 10,424 ಕೋಟಿ ರೂ. ಗಳಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 9,298 ಕೋಟಿ ರೂ. ಆದಾಯ ದಾಖಲಿಸಿತ್ತು.

ಕಂಪನಿಯು ಪ್ರಸಕ್ತ ಆರ್ಥಿಕ ವರ್ಷಕ್ಕೆ revenue guidance ಅನ್ನು ಇಂದು 7.45 ಶತಕೋಟಿ ಡಾಲರ್ ಗೆ ಏರಿಸಿದ್ದು, ಭಾರಿ ಆಶಾದಾಯಕ ವಾತಾವರಣ ಮೂಡಿಸಿದೆ. ಮಾರುಕಟ್ಟೆಯಲ್ಲಿ ಅತಂತ್ರ ಸ್ಥಿತಿಯಿದ್ದರೂ ಎಲ್ಲರ ನಿರೀಕ್ಷೆಯನ್ನು ಮೀರಿ ಕಂಪನಿ ಉತ್ತಮ ಸಾಧನೆ ತೋರಿದೆ ಎಂದು ಕಂಪನಿ ಸಿಇಒ ಮತ್ತು ಎಂಡಿ ಎಸ್ ಡಿ ಶಿಬೂಲಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಯವಾಹಿ ವೆಚ್ಚಗಳು ಹೆಚ್ಚಾಗಿದ್ದರೂ ಕಾರ್ಯದಕ್ಷತೆ ಸಾಧಿಸುವ ಮೂಲಕ ಈ ಫಲಿತಾಂಶ ನೀಡಿದ್ದೇವೆ. ಮುಂದಿನ ಜನವರಿ-ಮಾರ್ಚ್ ಫಲಿತಾಂಶವೂ ಉತ್ತಮಗೊಳ್ಳಲಿದೆ ಎಂದು ಶಿಬೂಲಾಲ್ ಆಶಾಭಾವ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+