ಬೆಂ. ಹೆಬ್ಬಾಳದ ಯುವಕ ಮ್ಯಾಂಚೆಸ್ಟರ್‌ನಲ್ಲಿ ನಾಪತ್ತೆ

bng-hebbal-student-souvik-pal-missing-uk-since-jan-1
ಮ್ಯಾಂಚೆಸ್ಟರ್ (ಇಂಗ್ಲಂಡ್), ಜ.9‌: ಮೂಲತಃ ಪಶ್ಚಿಮ ಬಂಗಾಳದ, ಆದರೆ ಪ್ರಸ್ತುತ ಬೆಂಗಳೂರಿನ ಹೆಬ್ಬಾಳದಲ್ಲಿ ನೆಲೆಸಿರುವ ಸಂತನು ಪಾಲ್‌ ಎಂಬುವವರ ಪುತ್ರ ಸೌವಿಕ್ ಪಾಲ್ (18) ಮ್ಯಾಂಚೆಸ್ಟರ್‌ನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಣೆಯಾಗಿದ್ದಾನೆ.

ಆದರೆ 9 ದಿನಗಳಾದರೂ ಸೌವಿಕ್ ಪತ್ತೆಯಾಗದಿರುವುದು ಮ್ಯಾಂಚೆಸ್ಟರ್ ಪೊಲೀಸರಲ್ಲೂ ಆತಂಕ ಮೂಡಿಸಿದೆ. ಪ್ರಕರಣದ ಸಂಬಂಧ ಭಾರತೀಯ ಹೈಕಮೀಷನ್ ಅಧಿಕಾರಿಗಳು ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ನಾಪತ್ತೆಯಾದ ಮಗನ ಹುಡುಕಲು ಸಂತನು ಪಾಲ್‌ ಅವರು ಜನವರಿ 6ರಂದು ಇಂಗ್ಲಂಡ್‌ ತಲುಪಿದ್ದು, ಅಲ್ಲಿನ ಪೊಲೀಸರೊಂದಿಗೆ ಮಗನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಸಂತನು ಪಾಲ್‌ ಅವರ ಪುತ್ರ ಸೌವಿಕ್‌, Manchester Metropolitan Universityದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಸೌವಿಕ್, ಪ್ರಾಡಕ್ಟ್ ಡಿಸೈನ್ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ. Manchester United Football Clubನಲ್ಲಿ ಅರೆಕಾಲಿಕ ಉದ್ಯೋಗವನ್ನೂ ಮಾಡುತ್ತಿದ್ದ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮ್ಯಾಂಚೆಸ್ಟರ್‌ನ ನೈಟ್‌ ಕ್ಲಬ್‌ ನಲ್ಲಿ ಇಬ್ಬರು ಗೆಳತಿಯರೂ ಸೇರಿದಂತೆ ಒಟ್ಟು 5 ಮಂದಿಯೊಂದಿಗೆ ಪಾರ್ಟಿ ಮಾಡಿದ ಬಳಿಕ ಸೌವಿಕ್ ನಾಪತ್ತೆಯಾಗಿದ್ದಾನೆ.

ಈ ಮಧ್ಯೆ, ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿನಲ್ಲಿರುವ ಲಾ ಮಾರ್ವೆಲ್ಲಾ ಹೋಟೆಲ್ ಬಳಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ತಮಿಳುನಾಡು ಟೆಕ್ಕಿ ಕಾರ್ತಿಕ್ ವಿಷ್ಣು ಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿಯೇ ಇದೆ.

ಸೌವಿಕ್ ಪತ್ತೆ ಮಾಡುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ನೆರವು ಬೇಕಾಗಿದೆ. ಇದಕ್ಕಾಗಿ ತೆರೆದ ಫೇಸ್ ಬುಕ್ ಖಾತೆ ನೋಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+