143 ಕೋಟಿ ರು ಆಸ್ತಿ ಕಳೆದುಕೊಂಡ ಜಗನ್

ED to attach YS Jagan Assets
ಹೈದರಾಬಾದ್, ಜ.8: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಬಿಡುಗಡೆ ಇನ್ನಷ್ಟು ಕಾಲ ಮುಂದೂಡಲ್ಪಟ್ಟಿದೆ. ಈ ನಡುವೆ ಜಗನ್ ಅವರ ಆಸ್ತಿ ಮುಟ್ಟುಗೋಲಿಗೆ ಜಾರಿ ನಿರ್ದೇಶನಾಲಯ (ED) ಮುಂದಾಗಿದೆ.

ಈ ಹಿಂದೆ ಕೂಡಾ ಜಗನ್ ಆಸ್ತಿಯ ಅಲ್ಪ ಪ್ರಮಾಣದ ಮೊತ್ತವನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು. ಈಗ ಜಗನ್ ಗೆ ಸೇರಿದ 143 ಕೋಟಿ ರು ಮೊತ್ತದ ಆಸ್ತಿಯನ್ನು ಇಡಿ ತನ್ನದಾಗಿಸಿಕೊಳ್ಳಲಿದೆ.

ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮೇ27, 2012ರಂದು ಜಗನ್ ಅವರನ್ನು ಬಂಧಿಸಲಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಜಗನ್ ವಿರುದ್ಧ ಸಿಬಿಐ ತಂಡ ಚಾರ್ಚ್ ಶೀಟ್ ಸಲ್ಲಿಸಿತ್ತು.

ಜಗನ್ ಜೊತೆಗೆ ಸಹ ಆರೋಪಿಗಳಾದ ಉದ್ಯಮಿ ನಿಮ್ಮಗಡ್ಡ ಪ್ರಸಾದ್, ಅಧಿಕಾರಿ ಕೆವಿ ಬ್ರಹ್ಮಾನಂದ ರೆಡ್ಡಿ ಕೂಡಾ ಚಂಚಲಗುಡ ಜೈಲಿನಲ್ಲಿದ್ದಾರೆ.

ಜಗನ್ ಗೆ ಸೋಮವಾರ (ಡಿ.24) ಆಂಧ್ರ ಪ್ರದೇಶ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಒಂದು ಕಡೆ ಸಿಬಿಐ ತಂಡ ಇನ್ನೊಂದು ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿಧಾನಗತಿಯಲ್ಲಿ ಪ್ರಕರಣದ ತನಿಖೆ ಮುಂದುವರೆಸುತ್ತಿದ್ದು, ಇನ್ನೆರಡು ತಿಂಗಳಾದರೂ ವಿಚಾರಣೆ ಮುಂದುವರೆಯುವ ನಿರೀಕ್ಷೆಯಿದೆ.

ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಜಗನ್ ಗೆ ನಿರಾಶೆಯಾಗಿದೆ. ಜಗನ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಆ.9) ವಜಾಗೊಳಿಸಿತ್ತು.

ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ರೆಡ್ಡಿ ಪರ ಸಮರ್ಥವಾಗಿ ವಾದ ಮಂಡಿಸಿದರೂ ಜಾಮೀನು ಕೊಡಿಸುವಲ್ಲಿ ವಿಫಲರಾಗಿದ್ದರು. ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡಾ ಜಗನ್ ಹಿಂಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್ ಹಾಗೂ ಸಿಬಿಐ ಕೋರ್ಟಿನ ತೀರ್ಪು ಜಗನ್ ಅವರ ವಿರುದ್ಧವಾಗಿ ಬಂದಿದೆ.

ಬಾಕಿ ಉಳಿದಿರುವ 7 ಪ್ರಕರಣಗಳ ಮೊತ್ತ ಸುಮಾರು 3000 ಕೋಟಿ ರು ದಾಟುತ್ತದೆ ಎಂದು ಸಿಬಿಐ ಹೇಳಿದೆ. ಹಾಗಾದರೆ ಸಮಸ್ತ ಆಸ್ತಿ ಲೆಕ್ಕಾಚಾರ ಇನ್ನೂ ಬಹಿರಂಗಗೊಂಡಿಲ್ಲ.

ಹೀಗಾಗಿ ತನಿಖೆ ಬಾಕಿ ಇರುವುದರಿಂದ ಜಗನ್ ಗೆ ಬೇಲ್ ಸಿಗುವುದು ಕಷ್ಟಕರವಾಗಿದೆ. ಸುಮಾರು 7 ಪ್ರಕರಣಗಳಲ್ಲಿ ಸೇರಿಸಿ ಚಾರ್ಚ್ ಶೀಟ್ ಹಾಕಬೇಕಾಗುತ್ತದೆ.

ಸಂಡೂರು ಪವರ್ ಕಂಪನಿ, ಭಾರತಿ ರಘುರಾಮ್ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್, ಪೆನ್ನಾ ಸಿಮೆಂಟ್ಸ್, ದಾಲ್ಮಿಯಾ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್ ಹಾಗು ಕೋಲ್ಕತ್ತಾ ಭ್ರೀಫ್ ಕೇಸ್ ಕಂಪನಿ ಅಕ್ರಮ ಗಳಿಕೆ ಬಗ್ಗೆ ಚಾರ್ಚ್ ಶೀಟ್ ಹಾಕಿಲ್ಲ. ಲೇಪಾಕ್ಷಿ ನಾಲೆಡ್ಜ್ ಪಾರ್ಕ್ ಮುಂತಾದ ಕಂಪನಿಗಳ ಮೂಲಕ ಗಳಿಸಿದ ಅಕ್ರಮ ಆಸ್ತಿಗಳ ವಿವರ ಸಂಗ್ರಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+