ರಾತ್ರಿ ವೇಳೆ ಓಡಾಡೋದ್ ನಿಲ್ಲಿಸಿದರೆ ರೇಪ್ ಆಗೊಲ್ಲ!

ಕೂಡಲಸಂಗಮ ದಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನಿನ್ನೆ ಧಾರವಾಡದಲ್ಲಿ ಸುದ್ದಿಗೋಷ್ಟಿಯಲ್ಲಿ ಏನು ಹೇಳಿದ್ದಾರೆ ಕೇಳಿ:
'ಮಹಿಳೆಯರೇ, ಪುರುಷರನ್ನು ಪ್ರಚೋದಿಸುವ ಉಡುಪು ಧರಿಸಬೇಡಿ. ರಾತ್ರಿ ವೇಳೆ ಅಡ್ಡಾಡಬೇಡಿ. ಮಕ್ಕಳನ್ನು ಧಾರ್ಮಿಕ ಕಟ್ಟುಪಾಡಿನಲ್ಲಿ ಬೆಳೆಸಿದರೆ ಅತ್ಯಾಚಾರ ಆಗೋಲ್ಲ. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿದ್ದರಿಂದಲೇ ಅತ್ಯಾಚಾರ ಹೆಚ್ಚಾಗುತ್ತಿರುವುದು'.
'ಸಮಾಜದಲ್ಲಿ ದೌರ್ಜನ್ಯ ತಡೆಗಟ್ಟಲು ಸರಕಾರ ಹಿಂದಿದೆ ಎಂಬ ಭರವಸೆಯ ಜತೆಗೆ ಮಹಿಳೆಯರು ತಮ್ಮ ಬಗ್ಗೆಯೂ ಸ್ವಯಂ ಕಟ್ಟುಪಾಡು ಹಾಕಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಧಾರ್ಮಿಕ, ಸಾಂಸ್ಕೃತಿಕ ಕಟ್ಟುಪಾಡಿನೊಳಗೆ ಬೆಳೆಸಬೇಕು. ಆಗ ಅತ್ಯಾಚಾರದಂತಹ ಘಟನೆಗಳು ಕಡಿಮೆಯಾಗುತ್ತವೆ'.
'ನಡುರಾತ್ರಿ 12 ಗಂಟೆಯಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತಹ ಕಾಲ ಬಂದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದಂತೆ' ಎಂದು ಯಾರೋ ದಾರ್ಶನಿಕರು ಹೇಳಿದ ಮಾತು ನೆನಪಿಗೆ ಬರುತ್ತಿದೆ.
ಹೇ ರಾಮ್!












Click it and Unblock the Notifications