ರಾಜೀನಾಮೆ ವಿಷಯ ಪ್ರಕಟಿಸಿದ ಶೋಭಾ ಕರಂದ್ಲಾಜೆ
ಬೆಂಗಳೂರು,
ಜ.8: ಇಂದು ಬೆಳಗ್ಗೆ ಶಾಸಕರ ಭವನದಲ್ಲಿ ತಮ್ಮ ಆಪ್ತ ಬೆಂಬಲಿಗರೊಂದಿಗೆ ಗೌಪ್ಯ ಮಾತುಕತೆ ನಡೆಸಿದ ಬಿಜೆಪಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಂಕ್ರಮಣ ಕಾಲದಲ್ಲಿ (ಸಂಕ್ರಾಂತಿ ನಂತರ) ತಮ್ಮ ಸಚಿವ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಟಿವಿ9 ವರದಿ ಮಾಡಿದೆ. id="toptextpromo">ಮತ್ತೆ
ಮತ್ತೆ ವಿದಾಯದ ಮಾತುಗಳನ್ನಾಡುತ್ತಿದ್ದ ಶೋಭಾ ಅವರು ಬಿಜೆಪಿಗೆ ಗುಡ್ ಬೈ ಹೇಳಿ ನಿರೀಕ್ಷೆಯಂತೆ KJP ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜತೆಗೆ KJP ವತಿಯಿಂದ ರಾಜಾಜಿನಗರ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ರಾಜ್ಯದಲ್ಲಿ
ಶಾಂತಿ ವ್ಯವಸ್ಥೆ ಕುಸಿದಿದೆ. ಮಹಿಳೆಗೆ ರಕ್ಷಣೆಯೇ ಇ್ಲಲ್ಲವಾಗಿದೆ. ಇದರಿಂದ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಶೋಭಾ ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಬಗ್ಗೆಯೂ ತೀವ್ರ ಅಸಮಾಧಾನಗೊಂಡಿರುವುದಾಗಿ ಅವರು ಅಲವತ್ತುಕೊಂಡಿದ್ದಾರೆ.











Click it and Unblock the Notifications