ಬಿಎಸ್‌ವೈ KJP ಕಾರ್ಯಕಾರಿಣಿ; 13 ಶಾಸಕರು ಭಾಗಿ

ಆದರೂ ಎದೆಗುಂದದ ಯಡಿಯೂರಪ್ಪ ಅವರು ಎಂದಿನ ಶೈಲಿಯಲ್ಲಿ ಹಾಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರಕಾರ ಸತ್ವ ಕಳೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಜನತೆಯನ್ನುದ್ದೇಶಿಸಿ ಮಾತನಾಡಿರುವ ಯಡಿಯೂರಪ್ಪ ತಾವು ಮುಖ್ಯಮಂತ್ರಿಪಟ್ಟ ಅಲಂಕರಿಸಲು ಹೋರಾಟ ನಡೆಸುತ್ತಿಲ್ಲ. ತಮಗಾಗಿ ಹೋರಾಡುತ್ತಿದ್ದೇನೆ. ಬೇರೆ ಪಕ್ಷಗಳಿಗೆ ಹೈಕಮಾಂಡ್ ಅಂತ ಇರುತ್ತದೆ. ಆದರೆ ನನಗೆ ತಾವೇ (ಜನತೆ) ಹೈಕಮಾಂಡ್' ಎಂದು ಹೇಳಿದ್ದಾರೆ.
ಸಭೆಯಲ್ಲಿ ಯಡಿಯೂರಪ್ಪ ಅವರ ನಿಷ್ಠರಾದ ಲಕ್ಷ್ಮಿನಾರಾಯಣ, ಧನಂಜಯ್ ಕುಮಾರ್, ವಿಜಯ್ ಸಂಕೇಶ್ವರ್, ಪೂಜಾ ಗಾಂಧಿ, ಮಮ್ತಾಜ್ ಅಲಿ ಖಾನ್, ಹಾಲಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಜರಾಗಿದ್ದಾರೆ. ಸಭೆ ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಿದ್ದು, ಇನ್ನೂ ಅನೇಕ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
KJP ಕಾರ್ಯಕಾರಿಣಿ ನಡೆಯುತ್ತಿರುವ ಕ್ಯಾಪಿಟಲ್ ಹೋಟೆಲ್ ರಾಜ್ಯಪಾಲರ ಮನೆಯಿಂದ ಕೂಗಳೆತೆಯ ದೂರದಲ್ಲಿದೆ. ಹಾಗಾಗಿ ಸಂಜೆಯ ವೇಳೆಗೆ ಸಭೆ ಮುಗಿದಾದ ಬಳಿಕ ಯಡಿಯೂರಪ್ಪ ನೇತೃತ್ವದ KJP ಪಕ್ಷವು ಹಂಸರಾಜ್ ಭಾರದ್ವಾಜ್ ಅವರನ್ನೇನಾದರೂ ಭೇಟಿ ಮಾಡುತ್ತದಾ? ಎಂಬ ಕುತೂಹಲ ಗರಿಗೆದರಿದೆ.












Click it and Unblock the Notifications