ದಿಲ್ಲಿ ರೇಪ್: ಬಾಧಿತರ ಹೆಸರನ್ನು ಬಹಿರಂಗಪಡಿಸಬೇಕೇ?

delhi-molest-anti-rape-legislation-in-india-name-game
ನವದೆಹಲಿ,ಜ.3: ಚಲಿಸುತ್ತಿದ್ದ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾದ ಯುವತಿಯ ಹೆಸರನ್ನು ಬಹಿರಂಗಪಡಿಸಬೇಕೇ, ಬೇಡವೇ? ಮಾಧ್ಯಮಗಳೇನೋ 23 ವರ್ಷದ ಬಾಧಿತೆಯ ಹೆಸರನ್ನು ಅಮಾನತ್ @ನಿರ್ಭಯಾ@ ದಾಮಿನಿ ಎಂದೆಲ್ಲಾ ಹೆಸರಿಸಿದೆ.

ಆದರೆ ಕಾನೂನು ಏನು ಹೇಳುತ್ತದೆ? ತತ್ಸಂಬಂಧದ ಕಾನೂನನ್ನು ಆಕೆಯ ಹೆಸರಿನಿಂದಲೇ ಗುರುತಿಸುವುದೇ? ಹೀಗೆ ಪುಂಖಾನುಪುಂಖ ಚರ್ಚೆಗಳು ನಡೆದಿವೆ. ಇದು ನಿಜಕ್ಕೂ ಗಂಭೀರವಾದ ವಿಷಯವೇ.

ಹೆಸರಿಗೆ ಎಸರು: ಬಾಧಿತೆಯ ಪೋಷಕರೂ ಸೇರಿದಂತೆ ಕೇಂದ್ರ ಮಾನವ ಸಂನ್ಮೂಲ ಸಚಿವ ಶಶಿ ತರೂರ್ ಅವರು ಸಹ ಅತ್ಯಾಚಾರ ವಿರೋಧಿ ತಿದ್ದುಪಡಿ ಶಾಸನಕ್ಕೆ ಸಂತ್ರಸ್ತೆಯ ಹೆಸರನ್ನೇ ಇಡಬೇಕು ಎಂದು ವಿಷಯವನ್ನು ಎಸರಿಗಿಟ್ಟಿದ್ದಾರೆ.

ಭಾರತದ ಈಗಿನ ಅತ್ಯಾಚಾರ ವಿರೋಧಿ ಕಾನೂನು ಏನು ಹೇಳುತ್ತದೆ?:
ಕೇಂದ್ರ ಸಚಿವ ಶಶಿ ತರೂರ್ ಹೇಳಿರುವುದರಲ್ಲಿ ಅರ್ಥವಿದೆ. ಏಕೆಂದರೆ ಅವರ ಯೋಚನಾಲಹರಿಗಳೆಲ್ಲ ಅಮೆರಿಕ ನೆಲೆಯಿಂದ ಬರುವಂತಹವು. ಅಮೆರಿಕದಲ್ಲಿ ಬಹುತೇಕ ಶಾಸನಗಳನ್ನು ವ್ಯಕ್ತಿಗತವಾಗಿ ಇಡುತ್ತಾರೆ. ಆದರೆ ಭಾರತಕ್ಕೆ ಇದು ಸರಿಹೊಂದುತ್ತದಾ? ಎಂಬುದು ಇಲ್ಲಿನ ಪ್ರಶ್ನೆ.

ಆದರೆ ಈ ದುರ್ಭರ ಪರಿಸ್ಥಿತಿಯಲ್ಲಿ ಭಾರತ ಹೆಸರಿನ ಹಿಂದೆ ಬೀಳುವುದು ಸಮಂಜಸವಲ್ಲ ಎನಿಸುತ್ತಿದೆ. ಮೌಲ್ಯಗಳಿಗೆ ಮಣೆಹಾಕುವ ಭಾರತದಂತಹ ರಾಷ್ಟ್ರಗಳಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾದೀತು. ಅದರಲ್ಲೂ ಅತ್ಯಾಚಾರದಂತಹ ಸಾಮಾಜಿಕ ಪಿಡುಗಿನ ವಿಷಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ.

ಇಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ದೆಹಲಿ ಗ್ಯಾಂಗ್ ರೇಪ್ ಬಾಧಿತೆಯ ಹೆಸರನ್ನು ಹೀಗೆ ಶಾಸನದ ಹೆಸರಿನ ಮೂಲಕ ಬಹಿರಂಗಪಡಿಸಿದರೆ ಮುಂದೆಯೂ ಅತ್ಯಾಚಾರ ಪೀಡಿತ ಹೆಣ್ಣುಮಕ್ಕಳ ಹೆಸರನ್ನು ಬಹಿರಂಗಪಡಿಸಬೇಕಾಗುತ್ತದೆ. ಅದಕ್ಕೆ ಮೇಲೆ ಹೇಳಿದ್ದು ಭಾರತಕ್ಕೆ ಇದು ಸಮಂಜಸವಾಗದು ಎಂದು.

ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಮುಂದೆ ಬೇರೆ ವಿಷಯಾಧರಿತ ಶಾಸನಗಳನ್ನು ಜಾರಿಗೆ ತರಬೇಕು ಅಂದರೆ ಆಗಲೂ ಸಂಬಂಧಪಟ್ಟವರ ಹೆಸರಿಗೆ ಅಂಕಿತವಾಗಬೇಕಾಗುತ್ತದೆ. ಇದು ರಾಜಕೀಯ ಸಮರಕ್ಕೆ ನಾಂದಿಯಾಗುತ್ತದೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಸಂತ್ರಸ್ತರ ಹೆಸರುಗಳನ್ನು ಬಹಿರಂಗಪಡಿಸುವ ವಿದ್ಯಮಾನಗಳು ನಮ್ಮಲ್ಲಿ ಕಾಣಿಸಿಕೊಳ್ಳುವುದು ಬೇಡ. (ಅಷ್ಟೇ ಅಲ್ಲ, ತಪ್ಪಿತಸ್ಥರ ಹೆಸರುಗಳನ್ನೂ ಬಹಿರಂಗಪಡಿಸುವುದು ಬೇಡ ಎಂಬುದು ನನ್ನ ವಾದ).

ಈ ಹೆಸರಿನ ಪೀಕಲಾಟದಲ್ಲಿ ಸಿಲುಕಿಕೊಳ್ಳುವ ಬದಲು ಮತ್ತಷ್ಟು ಕಠಿಣವಾದ ವಿಷಯಗಳತ್ತ ನಮ್ಮ ಗಮನವನ್ನು ಒಟ್ಟುಗೂಡಿಸೋಣ. ಸಮಾಜದ ದೃಷ್ಟಿಕೋನವನ್ನು ಬದಲಿಸುವತ್ತ ಕೈಜೋಡಿಸೋಣ. ಇಲ್ಲವಾದಲ್ಲಿ ಹೆಸರಿಗೆ ಎಸರಿಡುವುದು ಸಾಮಾಜಿಕ ದುರಂತವಾಗುತ್ತದೆ ಎಂಬುದು ನನ್ನ ಬಲವಾದ ಅನಿಸಿಕೆ.

ಲೇಖಕ ರಾಜೀವ್ ಗೌಡ ಅವರು Rajeev Gowda is a Professor of Economics and Social Sciences and Chairperson, Centre for Public Policy at the Indian Institute of Management, Bangalore.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+