ರಾಷ್ಟ್ರಪತಿ ಭವನ ತಲುಪಿದ ಪ್ರತಿಭಟನೆ
ನವದೆಹಲಿ.ಡಿ.22 : ಕಳೆದ ವಾರ ಬಸ್ಸಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದಾರೆ. ಶನಿವಾರ(ಡಿ.22) ಬೆಳಗ್ಗೆ ದೆಹಲಿಯಲ್ಲಿ ಪ್ರತಿಭಟನೆಯ ಕಾವು ಏರುತ್ತಿದ್ದು, ಪೊಲೀಸರು ಜಲಫಿರಂಗಿ, ಲಾಠಿ ಚಾರ್ಚ್ ಪ್ರಯೋಗಿಸಿದ್ದಾರೆ,
ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ ಇರುವ ರೈಸಿನಾ ಹಿಲ್ಸ್ ಹಾಗೂ ಇಂಡಿಯಾ ಗೇಟ್‌ತನಕ ಸಫ್ದರ್ ಜಂಗ್ ರಸ್ತೆ ವರೆಗೂ ಪ್ರತಿಭಟನೆ ಹಬ್ಬಿದೆ. ವಿದ್ಯಾರ್ಥಿನಿಯರು ಮಾನವ ಸರಪಳಿ ರಚಿಸಿಕೊಂಡು ಪೊಲೀಸರ ತಡೆಗೋಡೆ ದಾಟಿ ಮುನ್ನುಗ್ಗುತ್ತಿದ್ದಾರೆ.

ಇಂಡಿಯಾ ಗೇಟ್ ಬಳಿ ಸಿಪಿಐ ಮುಖಂಡರಾದ ಎ.ಬಿ. ಬರ್ಧನ್ ಹಾಗೂ ಡಿ. ರಾಜಾ ಮಾತನಾಡಿ, ಇಂತಹ ಅಮಾನುಷ ಘಟನೆಯನ್ನು ಸಹಿಸಿಕೊಳ್ಳಲು ಆಗದು ಎಂದು ಭಾಷಣ ಮಾಡಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಪಾಲ್ಗೊಂಡಿದ್ದಾರೆ.
ಮಾಜಿ ಭೂ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿದ್ಯಾರ್ಥಿಗಳಿಗೆ ಹುರುಪು ತುಂಬಿದ್ದಾರೆ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ವತಿಯಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.












Click it and Unblock the Notifications