ಲಡ್ಡು ರೆಡಿ, ನಾನು 'ಪ್ಯೂರ್ ಲೀ ಬಿಜೆಪಿ': ಕೃ.ಶೆಟ್ಟಿ

bjp-krishnaiah-shetty-distribute-laddu-vaikunta-ekadasi
ಬೆಂಗಳೂರು, ಡಿ.20: ಇದೇ ಭಾನುವಾರ ವೈಕುಂಠ ಏಕಾದಶಿ. ಬೆಂಗಳೂರು ಸೇರಿದಂತೆ ನಾಡಿನ ಕೆಲ ಭಾಗಗಳಲ್ಲಿ ವೈಕುಂಠ ಏಕಾದಶಿ ಅಂದರೆ ಲಡ್ಡು, ಲಡ್ಡು ಅಂದರೆ ಕೃಷ್ಣಯ್ಯ ಶೆಟ್ಟಿ ಎನ್ನುವಷ್ಟು ಜನಪ್ರಿಯವಾಗಿದೆ. ಇದೇ ಕೃಷ್ಣಯ್ಯ ಶೆಟ್ಟರ ಹೆಸರಿನ ಜತೆಗೆ ಶಿವರಾತ್ರಿ ಕಾಲದಲ್ಲಿ ಗಂಗಾಜಲವೂ ಸಂಗಮವಾಗುತ್ತದೆ.

ರಾಜ್ಯದಲ್ಲಿ ಈ ಬಾರಿ ರಾಜಕೀಯ ಪಲ್ಲಟಗಳು ಭಾರಿ ಪ್ರಮಾಣದಲ್ಲಿದೆ. ತಮ್ಮ ನಿಷ್ಠೆ ಮೊದಲು ಯಡಿಯೂರಪ್ಪ ಆನಂತರವಷ್ಟೇ ಬಿಜೆಪಿಗೆ ಎನ್ನುತ್ತಿದ್ದ ಎಸ್ಎನ್ ಕೃಷ್ಣಯ್ಯ ಶೆಟ್ಟರು ಯಡಿಯೂರಪ್ಪಗೇ ಆಶ್ಚರ್ಯವಾಗುವಷ್ಟು ಬದಲಾಗಿದ್ದಾರೆ. ಹೇಗೆಂದರೆ...

ಅಧಿಕಾರದಲ್ಲಿದ್ದಾಗ ಜಂಟಿಯಾಗಿ ನಡೆಸಿದ್ದ ಭೂಹಗರಣಕ್ಕೆ ಸಂಬಂಧಿಸಿದಂತೆ ಮೊನ್ನೆ ಲೋಕಾಯುಕ್ತ ಕೋರ್ಟಿಗೆ ಇಬ್ಬರೂ ಹಾಜರಾಗಿದ್ದರು. ಇಬ್ಬರೂ ಸುಮಾರು 2 ಗಂಟೆ ಕಾಲ ಕೋರ್ಟಿನಲ್ಲಿ ಉಪಸ್ಥಿತರಿದ್ದರು. ಆದರೆ ಅಪ್ಪಿತಪ್ಪಿಯೂ ಒಬ್ಬರಿಗೊಬ್ಬರು ಮುಖ ಕೊಟ್ಟಿಕೊಂಡು ಮಾತನಾಡಿಲ್ಲ.

ಅದಾದ ನಂತ ಮೊನ್ನೆ ವೈಕುಂಠ ಏಕಾದಶಿ ನೆಪದಲ್ಲಿ ಲಡ್ಡು ಹಂಚಲು ಸಿದ್ಧತೆ ನಡೆಸಿದ್ದಾರೆ. ಆಗ ಸುದ್ದಿಗಾರರು ಏನ್ಸಾರ್ ನೀವು ಬಿಜೆಪಿಯೋ/ಕೆಜೆಪಿಯೋ ಎಂದು ಕೇಳಿದ್ದೇ ತಡ ಹಾವು ತುಳಿದವರಂತೆ 'ಎಲ್ಲಾದ್ರೂ ಉಂಟಾ ಗುರುಗಳೇ. ನಾನು ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತನಾಗುವುದಿಲ್ಲ. ನಾನು ಪ್ಯೂರ್ ಲೀ ಬಿಜೆಪಿ' ಎಂದು ನಿಟ್ಟುಸಿರುಬಿಟ್ಟಿದ್ದಾರೆ. ಈ ಹಿಂದೆ ಕೃಷ್ಣಯ್ಯ ಶೆಟ್ರು ನನ್ನದು ತಿರುಪತಿ ತಿಮ್ಮಪ್ಪನ ಪಕ್ಷ ಎಂದಿದ್ದರು.

ಅದಾದ ನಂತರ ಮುಜರಾಯಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಾಲೂರಿನ ಕೃಷ್ಣಯ್ಯ ಶೆಟ್ರು ಪ್ರತಿ ಬಾರಿಯಂತೆ ಈ ಬಾರಿಯೂ ಸ್ವಂತ ಖರ್ಚಿನಲ್ಲಿ ಲಕ್ಷಾಂತರ ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ 50ಕ್ಕೂ ಹೆಚ್ಚು ದೇವಾಸ್ಥಾನಗಳಲ್ಲಿ ಹಂಚಲಿದ್ದಾರೆ. 40 ಲಕ್ಷ ರೂ. ವೆಚ್ಚದಲ್ಲಿ 3 ಲಕ್ಷ ಲಡ್ಡುಗಳನ್ನು 5ನೇ ವರ್ಷವೂ ಹಂಚಲಿದ್ದಾರೆ. ಹನುಮಂತ ನಗರದ ಗವಿಗಂಗಾಧರೇಶ್ವರ ದೇವಸ್ಥಾನದ ಸಮೀಪವಿರುವ ಛತ್ರದಲ್ಲಿ ಈ ಲಾಡುಗಳು ತಯಾರಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+