ಗರ್ಭಪಾತ ತಿದ್ದುಪಡಿ ಕಾನೂನು ಸವಿತಾ ಹೆಸರಿನಲ್ಲಿರಲಿ

savitha-father-andanappa-reaction-ireland-abortion-law
ಬೆಳಗಾವಿ ಡಿ.19: ಒಬ್ಬ ಗರ್ಭಿಣಿಯ ಸಾವಿನ ನಂತರವಾದರೂ ಎಚ್ಚೆತ್ತುಕೊಂಡು ಐರ್ಲೆಂಡ್ ಸರಕಾರ ತನ್ನ 'ಮಾರಕ' ಗರ್ಭಪಾತ ನೀತಿಗೆ ತಿದ್ದುಪಡಿ ಮಾಡಲು ಮುಂದಾಗಿರುವುದು ಸ್ವಲ್ಪಮಟ್ಟಿಗೆ ಸಮಾಧಾನಕರವಾಗಿದೆ. ಕನ್ನಡಿಗರೂ ಈ ಬಗ್ಗೆ ವಿಷಾದದಿಂದಲೇ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ಇನ್ನು ಅಮಾನುಷವಾಗಿ ಸಾವು ಕಂಡ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಅವರ ತಂದೆ ಬೆಳಗಾವಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಕನ್ನಡಒನ್ಇಂಡಿಯಾ' ಬಾತ್ಮೀದಾರರ ಜತೆ ಮಾತನಾಡಿರುವ ಸವಿತಾ ತಂದೆ ಅಂದಾನಪ್ಪ ಯಳಗಿ ಅವರು 'ಐರ್ಲೆಂಡ್ ಸರಕಾರ ಕೊನೆಗೂ ಎಚ್ಚೆತ್ತುಕೊಂಡು ತನ್ನ ಕರಾಳ ನೀತಿಯನ್ನು ಮಾರ್ಪಾಡು ಮಾಡಲು ನಿರ್ಧರಿಸಿರುವುದು ತುಸುಮಟ್ಟಿಗೆ ಸಮಾಧಾನ ತಂದಿದೆ' ಎಂದಿದ್ದಾರೆ.

ಆದರೆ ಆ ತಿದ್ದುಪಡಿ ಕಾಯಿದೆಗೆ ತಮ್ಮ ಮಗಳ ಹೆಸರನ್ನಿಡಬೇಕು. So that ಆ ಕಾಯಿದೆಯಲ್ಲಿ ಸವಿತಾ ಹೆಸರು ಶಾಶ್ವತವಾಗಿ ಕಾಣಿಸಿಕೊಳ್ಳಬೇಕು. ಹಾಗಾದರೂ ನಮ್ಮ ಮಗಳು ಜೀವಂತವಾಗಿರಲಿ ಎಂದು ಅವರು ಆಶಿಸಿದ್ದಾರೆ.

ಇನ್ನು, ತಪ್ಪಿತಸ್ಥ ಆಸ್ಪತ್ರೆ ಸಿಬ್ಬಂದಿಯನ್ನು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು.

ಇಡೀ ಜಗತ್ತಿನಾದ್ಯಂತ ಈ ಬಗ್ಗೆ ವ್ಯಾಪಕ ಆಂದೋಲನ ನಡೆಸಿದ್ದೂ ಅಲ್ಲದೆ ನನಗೆ ಧೈರ್ಯ ತುಂಬಿದ ಎಲ್ಲರಿಗೂ ಬೆಳಗಾವಿಯಲ್ಲಿರುವ ನಾನು ಹೃದಯತುಂಬಿದ ವಂದನೆಗಳನ್ನು ಸಲ್ಲಿಸುವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+