ಲೋಕಾ ಪೇದೆ ಸೇರಿ 8 ಮಂದಿ ಭ್ರಷ್ಟರು ಬಲೆಗೆ

Lokayukta raid
ಬೆಂಗಳೂರು, ಡಿ.19: ಲೋಕಾಯುಕ್ತ ಇಲಾಖೆಯಲ್ಲೇ ಕರ್ತವ್ಯ ನಡೆಸುತ್ತಿದ್ದ ಪೇದೆ ಸೇರಿದಂತೆ 8 ಜನ ಭ್ರಷ್ಟರ ವಿರುದ್ಧ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ರಾಜ್ಯದ 7 ಜಿಲ್ಲೆಗಳ 22 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಹಾಗೂ ನಗದು ಹಣ ಪತ್ತೆಯಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಚಿಕ್ಕಮಗಳೂರು, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಗೃಹ ನಿರ್ಮಾಣ ಮಂಡಳಿ ಮುಖ್ಯ ಇಂಜಿನಿಯರ್ ಸೇರಿದಂತೆ 8 ಜನರ ಕೋಟಿಗಟ್ಟಲೇ ಆಕ್ರಮ ಆಸ್ತಿ ಪತ್ತೆಯಾಗಿದೆ.
* ಕರ್ನಾಟಕ ಗೃಹ ಮಂಡಳಿ ಮುಖ್ಯ ಇಂಜಿನಿಯರ್ ಗುರುಪ್ರಸಾದ್, ಚರಾಸ್ತಿ 82,60,000; ಸ್ಥಿರಾಸ್ತಿ : 1,54,37,000; ಅಕ್ರಮ ಆಸ್ತಿ : 1,83,10,410
* ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಇಂಜಿನಿಯರ್ ನಾಗರಾಜ್, ಚರಾಸ್ತಿ 29,10,000; ಸ್ಥಿರಾಸ್ತಿ : 1,28,20,000; ಅಕ್ರಮ ಆಸ್ತಿ 1,02,30,000
* ಹಾಸನ ಜಿಲ್ಲೆ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಕೀರ್ತಿ ಕುಮಾರ್, ಚರಾಸ್ತಿ 1,50,000; ಸ್ಥಿರಾಸ್ತಿ 75,78,000; ಅಕ್ರಮ ಆಸ್ತಿ 84,28,000
* ತುಮಕೂರಿನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರೀಕ್ಷಕ ಲಕ್ಷ್ಮಿನಾರಾಯಣ ರೆಡ್ಡಿ
* ಪುರಾತತ್ವ ಇಲಾಖೆ ನಿರ್ದೇಶಕ ಆರ್ ಗೋಪಾಲ್
* ಕಡೂರು ತಾಲೂಕಿನ ಶಿರಸ್ತೇದಾರ ಎಲ್ ಪಿ ವಿನ್ಸ್ ರೋಜಾರಿಯಾ, ಚರಾಸ್ತಿ 09,66,960; ಸ್ಥಿರಾಸ್ತಿ 71,52,000;ಅಕ್ರಮ ಆಸ್ತಿ 90,18,960
* ಲೋಕಾಯುಕ್ತ ಅಂಗರಕ್ಷಕ(ಸಂತೋಷ್ ಹೆಗ್ಡೆ) ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಚನ್ನಬಸವಯ್ಯ, ಚರಾಸ್ತಿ 13,81,000; ಸ್ಥಿರಾಸ್ತಿ 59,24,000; ಅಕ್ರಮ ಆಸ್ತಿ 55,25,000
* ಕೆಎಸ್ ಆರ್ ಟಿಸಿ ತಾಂತ್ರಿಕ ವಿಭಾಗ ನಿರ್ದೇಶಕ ಎಸ್ ಕೆ ಪರಮೇಶ್

ಗುರುಪ್ರಸಾದ್:
ಸಹಕಾರ ನಗರದಲ್ಲಿರುವ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆ, ಒಂದು ಫ್ಲಾಟ್, ದೊಡ್ಡಬಳ್ಳಾಪುರದಲ್ಲಿ 3 ಸೈಟ್, ಅಂಜನಾಪುರದಲ್ಲಿ 2 ಫ್ಲಾಟ್, ಕಡೂರಿನಲ್ಲಿ 22 ಎಕರೆ ಭೂಮಿ, 20 ಲಕ್ಷ ರು ಬ್ಯಾಂಕ್ ಠೇವಣಿ, ವಿವಿಧ ಕಂಪನಿಗಳಲ್ಲಿ ಷೇರು, ಬೇನಾಮಿ ಹೆಸರಿನಲ್ಲಿ ಆಸ್ತಿ ಪತ್ರಗಳು ಸಿಕ್ಕಿದೆ. ಲೋಕಾಯುಕ್ತ ಎಸ್ಪಿ ಶಿವರಾಮರೆಡ್ಡಿ ನೇತೃತ್ವದ ತಂಡದಿಂಡ ದಾಳಿ.

ನಾಗರಾಜ್: ಬೆಂಗಳೂರಿನ ಸಹಕಾರ ನಗರದಲ್ಲಿ ಮನೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ವಿವಿಧೆಡೆ ನಿವೇಶನ, ಫ್ಲಾಟ್ ಗಳು, ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮವಾಗಿ ಬ್ಯಾಂಕ್ ಖಾತೆಗಳು, ಆಸ್ತಿ ಪತ್ರಗಳು ಸಿಕ್ಕಿದೆ.

ಕೀರ್ತಿ ಕುಮಾರ್ : ಬೆಂಗಳೂರಿನ ಜಯನಗರದಲ್ಲಿರುವಮನೆ, ಚೆನ್ನಿಗನಹಳ್ಳಿ, ತಿಮ್ಲಾಪುರದ ನಿವಾಸದ ಮೇಲೆ ದಾಳಿ, ಚಿನ್ನ, ಆಸ್ತಿ, ಬ್ಯಾಂಕ್ ಖಾತೆ ವಿವರ, ಲಕ್ಷಾಂತರ ರು ನಗಗು ವಶ. ಲೋಕಾಯುಕ್ತ ಡಿವೈಎಸ್ಪಿ ಶಿವಲಿಂಗಪ್ಪ ನೇತೃತ್ವದ ತಂಡ.

ಲಕ್ಷ್ಮಿ ನಾರಾಯಣ ರೆಡ್ಡಿ: ಲೋಕಾಯುಕ್ತ ಎಸ್ಪಿ ರಮೇಶ್ ಹಾಗೂ ಸಿಪಿಐ ಗೌತಮ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಯಿತು. ಅಪಾರ ಪ್ರಮಾಣದ ಅಕ್ರಮ ಆಸ್ತಿ, ಚಿನ್ನಾಭರಣ, ಆಸ್ತಿ, ನಿವೇಶನ, ಫ್ಲಾಟ್ ಗಳ ದಾಖಲೆಗಳು ಸಿಕ್ಕಿದೆ. ಚರಾಸ್ತಿ 15,72,037; ಸ್ಥಿರಾಸ್ತಿ 97,00,000; ಅಕ್ರಮ ಆಸ್ತಿ 63,91,963

ಆರ್ ಗೋಪಾಲ್: ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ನಿವಾಸ, ದಸರಾ ವಸ್ತು ಪ್ರದರ್ಶನ ಕಚೇರಿ ಮೇಲೂ ದಾಳಿ. ಗೋಪಾಲ್ ಸ್ನೇಹಿತ ಗುತ್ತಿಗೆದಾರ ಅನಂತರಾಜು ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚನ್ನಬಸವಯ್ಯ: ರಾಮನಗರ ಜಿಲ್ಲೆ ಬಿಡದಿ ಹೋಬಳಿ ರಾಮೋಹಳ್ಳಿ ಚನ್ನಬಸವಯ್ಯ ಲೋಕಾಯುಕ್ತ ಪೇದೆಯಾಗಿದ್ದಾರೆ. ಕುಂಬಳಗೋಡಿನಲ್ಲಿ 2 ಮನೆ, ದೊಡ್ಡ ಆಲದ ಮರ ಬಳಿ 3 ನಿವೇಶನ, ಬಿಡದಿಯಲ್ಲಿ 1 ಫ್ಲಾಟ್, ಮನೆಯಲ್ಲಿ 10 ಲಕ್ಷರು ನಗದು, ಬೆಲೆಬಾಳುವ ವಿದೇಶಿ ಮದ್ಯ, ಚಿನ್ನ, ಬೆಳ್ಳಿ, ಬೆಲೆಬಾಳುವ ವಾಹನಗಳು, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳ ದಾಖಲೆಗಳು ಸಿಕ್ಕಿದೆ.

ಎಸ್ ಕೆ ಪರಮೇಶ್: ಕರಾರಸಾಸಂ ತಾಂತ್ರಿಕ ವಿಭಾಗದ ನಿರ್ದೇಶಕ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ.

ಉಳಿದಂತೆ ಕಡೂರು ತಾಲೂಕಿನ ಶಿರಸ್ತೆದಾರ್ ಎಲ್ ಪಿ ವಿನ್ಸ್ ರೋಜಾರಿಯಾ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡಲಾಗಿದೆ. ಕಡೂರು ಪಟ್ಟಣದ ಎರಡು ಮನೆ, ವೆಂಕಟೇಶ್ವರ ನಗರ, ಸೋಮೇಶ್ವರ ನಗರ ಸೇರಿದಂತೆ ನಾಲ್ಕು ಕಡೆ ಶೋಧ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+