ಕಪ್ಪು ಹಣ: ಭಾರತಕ್ಕೆ 123 ಬಿ.ಡಾಲರ್ ನಷ್ಟ

India lost $123 bn in black money in a decade
ವಾಷಿಂಗ್ಟನ್, ಡಿ.18: ಕಪ್ಪು ಹಣದಿಂದ ಭಾರತ ಕಳೆದ ದಶಕದಲ್ಲಿ ಕಳೆದುಕೊಂಡು ಅಂದಾಜು ಮೊತ್ತದ ಲೆಕ್ಕಾ ಸಿಕ್ಕಿದೆ. ಸುಮಾರು 123 ಬಿಲಿಯನ್ ಡಾಲರ್ ಕಪ್ಪು ಹಣ ಭಾರತದಿಂದ ಹೊರಹರಿದಿದೆ ಎಂದು ವರದಿಯೊಂದು ಹೇಳಿದೆ.

ಸುಮಾರು 61,500 ಕೋಟಿ ರು ನಮ್ಮಿಂದ ಹೊರ ಹೋಗಿದೆ. 2010ರಲ್ಲಿ ಅಕ್ರಮ ಹಣ ಹೊರ ಹರಿವಿನಿಂದ ಸುಮಾರು 1.6 ಬಿಲಿಯನ್ ಡಾಲರ್ ಭಾರತೀಯ ಆರ್ಥಿಕತೆಗೆ ನಷ್ಟವನ್ನುಂಟು ಮಾಡಿದೆ ಎಂದು ವಿಶ್ವದ ಪ್ರತಿಷ್ಠಿತ ಸಂಸ್ಥೆ Global Financial Integrity (GFI) ಸಮೀಕ್ಷೆ ವರದಿ ಹೇಳಿದೆ.

ಕಪ್ಪು ಹಣದ ತೊಂದರೆಯಿಂದ ಬಳಲಿರುವ 150 ರಾಷ್ಟ್ರಗಳ ಪೈಕಿ ಕಳೆದ ಒಂದು ದಶಕದಲ್ಲಿ ಅಕ್ರಮ ಹಣ ಹೊರ ಹರಿವಿನಲ್ಲಿ ಜಗತ್ತಿನ 8ನೇ ರಾಷ್ಟ್ರವಾಗಿ ಭಾರತ ಗುರುತಿಸಲ್ಪಟ್ಟಿದೆ.

ಕಪ್ಪು ಹಣ ಹೊರಹರಿವಿನಲ್ಲಿ ಚೀನಾ, ಮೆಕ್ಸಿಕೊ, ಮಲೇಶ್ಯಾ, ಸೌದಿ ಅರೇಬಿಯಾ, ರಶ್ಯಾ, ಫಿಲಿಫೈನ್ಸ್ ಮತ್ತು ನೈಜೀರಿಯಾ ನಂತರ ಎಂಟನೇ ಸ್ಥಾನದಲ್ಲಿ ಭಾರತವಿದೆ ಎಂದು ಗ್ಲೋಬಲ್ ಫೈನಾನ್ಶಿಯಲ್ ಇಂಟಗ್ರಿಟಿಯ ವರದಿಯಿಂದ ತಿಳಿದು ಬಂದಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅಕ್ರಮ ಹಣಕಾಸು ಹೊರಹರಿವು: 2001-2010 ವರದಿಯಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಲಾಗಿದೆ.

2010ರಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಮತ್ತು ಉದಯೋನ್ಮುಖ ರಾಷ್ಟ್ರಗಳಿಗೆ 858.8 ಬಿಲಿಯನ್ ಡಾಲರ್ ನಷ್ಟವಾಗಿದೆ. 2008ರಲ್ಲಿ ಜಾಗತಿಕ ಹಣಕಾಸು ದುಸ್ಥಿತಿಯಿದ್ದಾಗ 871.3 ಬಿಲಿಯನ್ ಡಾಲರ್ ನಷ್ಟ ಈ ರಾಷ್ಟ್ರಗಳಿಗಾಗಿದೆ. ಇದು ದಶಕದಲ್ಲೇ ಆದ ಅತಿ ಹೆಚ್ಚು ನಷ್ಟವಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಕಪ್ಪುಹಣದ ಮೇಲೆ ಭಾರತ ಸರ್ಕಾರ ತೀವ್ರ ನಿಗಾ ಇಟ್ಟಿದೆ. ಅದರೆ, ನಿಯಂತ್ರಣ ಸಾಧ್ಯವಾಗಿಲ್ಲ.

1948 ರಿಂದ 2008ರವರೆಗೆ ಭಾರತದಿಂದ 462 ಬಿಲಿಯನ್ ಡಾಲರ್ ನಷ್ಟು ಕಪ್ಪು ಹಣ ಹರಿದು ಹೋಗಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿಯಲ್ಲಿದ್ದರೂ ಬಡರಾಷ್ಟ್ರವಾಗಿ ಉಳಿಯಲು ಕಪ್ಪು ಹಣವೇ ಕಾರಣ ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+