ಹುಡ್ಗಿ ಮೇಲೆ ಅಣ್ಣನೇ 2 ವರ್ಷ ರೇಪ್ ಮಾಡ್ತಿದ್ದ

Kasargod: Minor Girl Raped by Brother, Friend for Two Years
ಕಾಸರಗೋಡು, ಡಿ.18: ದೇವರ ನಾಡು ಕೇರಳ ಗಡಿಯ ಕಾಸರಗೋಡಿನಲ್ಲಿ ಅಪ್ರಾಪ್ತ ವಯಸ್ಕ ಹುಡುಗಿಯ ಮೇಲೆ ಸತತ ಎರಡು ವರ್ಷ ಲೈಂಗಿಕ ಕಿರುಕುಳ ನಡೆದಿರುವ ದುರಂತ ಕಥೆ ಬೆಳಕಿಗೆ ಬಂದಿದೆ. ಹುಡುಗಿಯ ಅಣ್ಣ ಹಾಗೂ ಆತನ ಗೆಳೆಯ ಎರಡು ವರ್ಷಗಳ ಕಾಲ ತಮ್ಮ ಕಾಮವಾಂಛೆಯನ್ನು ತೀರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಜೇಶ್ವರ ಮೂಲದ 31 ವರ್ಷದ ಅಶ್ರಫ್ ಹಾಗೂ ಆತನ ಗೆಳೆಯ ಪವೂರಿನ 22 ವರ್ಷದ ಅಬ್ದುಲ್ ಅಜೀಜ್ ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದ ಅನೇಕ ಪ್ರದೇಶಗಳಿಗೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾಗಿ ತಪ್ಪೊಪ್ಪಿಗೆ ನೀಡಿದ್ದಾರೆ.

ಇತ್ತೀಚೆಗೆ ಇಲ್ಲಿನ ಹೋಟೆಲ್ ವೊಂದರ ಮೇಲೆ ನಡೆದ ಪೊಲೀಸ್ ದಾಳಿ ಸಂದರ್ಭದಲ್ಲಿ ಹುಡುಗಿ ಕೂಡಾ ಸೆರೆ ಸಿಕ್ಕಿದ್ದಳು. ನನ್ನ ಅಣ್ಣ ಬರೋಕೆ ಹೇಳಿದ್ದ ಇಲ್ಲಿಗೆ ಎಂದು ಆಕೆ ಹೇಳಿದ್ದಳು. ನಂತರ ಆಕೆ ಅಣ್ಣ ಹಾಗೂ ಗೆಳೆಯನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಪೊಲೀಸರಿಗೆ ಮೇಲ್ಕಂಡ ವಿಷಯ ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅಪ್ರಾಪ್ತರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುವ ಜಾಲ ತುಂಬಾ ದೊಡ್ಡದಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಗಳು ಹೆಚ್ಚಾಗಿದೆ. 17 ವರ್ಷದ ಯುವತಿ ಮೇಲೆ ಆಕೆ ತಂದೆ ಹಾಗೂ ಇತರೆ 7 ಜನ ಅತ್ಯಾಚಾರ ಎಸೆಗಿದ ಘಟನೆ ಎರ್ನಾಕುಲಂ ಜಿಲ್ಲೆಯಲ್ಲಿ ವರದಿಯಾಗಿತ್ತು.

ಇನ್ನೊಂದು ಪ್ರಕರಣದಲ್ಲಿ 6 ವರ್ಷದ ಹುಡುಗಿ ಮೇಲೆ 40 ವರ್ಷದ ವ್ಯಕ್ತಿ ಆರು ತಿಂಗಳುಗಳ ಕಾಲ ಆಲ್ಕೋಹಾಲ್ ಕುಡಿಸಿ ಕೆಡಿಸುತ್ತಿದ್ದ ಘಟನೆ ವರದಿಯಾಗಿತ್ತು. ಈ ಪ್ರಕರಣದ ಆರೋಪಿ ಇನ್ನೂ ಸಿಕ್ಕಿಲ್ಲ.

ಧರ್ಮಾಡೊಂನಲ್ಲಿ 13 ವರ್ಷದ ಹುಡುಗಿಯ ಮೇಲೆ ಆಕೆ ತಂದೆ,15 ವರ್ಷದ ಅಣ್ಣ ಹಾಗೂ ಅಂಕಲ್ ಸೇರಿಕೊಂಡು ಅತ್ಯಾಚಾರ ಎಸೆಗಿದ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಒಬ್ಬ ಆರೋಪಿ ಸಾವನ್ನಪ್ಪಿದ್ದರೆ ಉಳಿದವರಿಗೆ ಬಂಧನವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+