ಗೋಡೆಯಲ್ಲಿ ಸಿಕ್ತು ಮೊಘಲರ ಕೋಟ್ಯಂತರ ಚಿನ್ನಾಭರಣ
ಹೈದರಾಬಾದ್,
ಡಿ.13: ಪಾಳುಬಿದ್ದಿದ್ದ ಮನೆಯ ಗೋಡೆಯಲ್ಲಿ ಪುರಾತನ ಕಾಲದ ಚಿನ್ನಾಭರಣ ಪತ್ತೆಯಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು ಆರು ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ನಿಧಿಯನ್ನು ಸರಕಾರದ ಗಮನಕ್ಕೆ ತಾರದೆ ತಮ್ಮ ತಮ್ಮಲ್ಲೇ ಹಂಚಿಕೊಂಡಿದ್ದ 5 ಮಂದಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. id="toptextpromo">ನಗರದ
ಕಾಮಾಟಿಪುರದ ದೂಧ್ ಬೌಲಿ ಪ್ರದೇಶದಲ್ಲಿ ಹಳೆಯ ಮನೆಯೊಂದರಲ್ಲಿ ಕಳೆದ ವಾರ ಈ ಅಮೂಲ್ಯ ನಿಧಿ ಪತ್ತೆಯಾಗಿತ್ತು. 1.7 ಕೆಜಿ ಚಿನ್ನದ ನಾಣ್ಯ, ಆಭರಣ ಮತ್ತು 4.6 ಕೆಜಿ ಬೆಳ್ಳಿ ವಸ್ತುಗಳು ದೊರೆತಿವೆ. ಇವು ಮೊಘಲರು ಮತ್ತು ರೋಮನ್ ಕಾಲಕ್ಕೆ ಸೇರಿರುವುದು ಎಂದು ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ಸುಮಾರು
50 ವರ್ಷಗಳಷ್ಟು ಹಳೆಯದಾದ ಮನೆಯನ್ನು ಕೆಡವಿ ಹೊಸ ಮನೆ ಕಟ್ಟುವ ಸಂದರ್ಭದಲ್ಲಿ ಈ ನಿಧಿ ಪತ್ತೆಯಾಗಿದೆ. Indian Treasure Trove Act ಮತ್ತು ಐಪಿಸಿ ಸೆಕ್ಷನ್ ಗಳ ಅನುಸಾರ ಐವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications