ಅಕ್ರಮ ಆಸ್ತಿ: ಮುಲಾಯಂ, ಅಖಿಲೇಶ್ ಮೇಲೆ ಸಿಬಿಐ ತನಿಖೆ

ಆದರೆ, ತನಿಖೆ ಭೀತಿಯಿಂದ ಮುಲಾಯಂ ಸಿಂಗ್ ಸೊಸೆ ಡಿಂಪಲ್ ಅವರು ತಪ್ಪಿಸಿಕೊಂಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಾಗ ಅಖಿಲೇಶ್ ಅವರ ಪತ್ನಿ ಡಿಂಪಲ್ ಅವರು ಇನ್ನೂ ಜನಪ್ರತಿನಿಧಿಯಾಗಿರದ ಕಾರಣ ಅವರ ಮೇಲೆ ತನಿಖೆಗೆ ಆದೇಶ ನೀಡಲಾಗಿಲ್ಲ ಎಂದು ಸಿಜೆ ಅಲ್ತಾಮಸ್ ಕಬೀರ್ ಹಾಗೂ ಜಸ್ಟೀಸ್ ಎಚ್ ಎಲ್ ದತ್ತು ಅವರಿದ್ದ ನಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಕುಟುಂಬ ಅಕ್ರಮ ಆಸ್ತಿ ಗಳಿಕೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಮುಖಂಡ, ವಕೀಲ ವಿಶ್ವನಾಥ್ ಚತುರ್ವೇದಿ ಎಂಬುವರು ಕೋರ್ಟಿಗೆ ದೂರು ಸಲ್ಲಿಸಿದ್ದರು.
ಯಾದವ ಕುಟುಂಬದ ವಿರುದ್ಧ ಸಿಬಿಐ ತನಿಖೆಗೆ ಮಾರ್ಚ್ 1, 2007ರಲ್ಲೇ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರೆ, ಇದು ರಾಜಕೀಯ ದುರುದ್ದೇಶದಿಂದ ಕೂಡಿದ ದೂರು, ಇದಕ್ಕೆ ಸರಿಯಾದ ಸಾಕ್ಷಿ ಇಲ್ಲ ಎಂದು ಹೇಳಿ ಮೇಲ್ಮನವಿ ಸಲ್ಲಿಸಿದ್ದರು.
ಉತ್ತರ ಪ್ರದೇಶದ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಪಕ್ಷ ಹೂಡಿರುವ ತಂತ್ರ ಇದಾಗಿದೆ ಎಂದು ಹೇಳಲಾಗಿತ್ತು.
ದೇಶ ದೊಡ್ಡ ದೊಡ್ಡ ಹಗರಣಗಳಿಗೆ ಹೋಲಿಸಿದರೆ, ಯಾದವರ ಕುಟುಂಬದ ಗಳಿಕೆ ಕಮ್ಮಿ ಎನ್ನಬಹುದು. 1.76 ಲಕ್ಷ ಕೋಟಿ 2ಜಿ ಹಗರಣ, 10.6 ಲಕ್ಷ ಕೋಟಿ ರು ಕಲ್ಲಿದ್ದಲು ಹಗರಣಕ್ಕೆ ಹೋಲಿಸಿದರೆ ಯಾದವರ ಅಕ್ರಮ ಆಸ್ತಿ ಗಳಿಕೆ 2.63 ಕೋಟಿ ರು ಮಾತ್ರ.
ಸಿಬಿಐ ತಂಡ ಏಪ್ರಿಲ್ 1, 1993 ರಿಂದ ಮಾರ್ಚ್ 31, 2005 ರ ತನಕದ ಯಾದವ ಕುಟುಂಬದ ಐಟಿ ರಿಟರ್ನ್ಸ್ ಪ್ರತಿ ತೆಗೆದುಕೊಂಡು ಪರಿಶೀಲನೆ ನಡೆಸಿದೆ.
1977ರಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಘೋಷಿತ ಆಸ್ತಿ 77,000 ರು ಆಗಿತ್ತು, ಈಗ ಹಲವು ಕೋಟಿ ಮೀರುತ್ತದೆ. 2005ರಲ್ಲಿ ನೀಡಿರುವ ಅಫಿಡವಿಡ್ ಹಾಗು ಸೇಲ್ ಡೀಡ್ ಗಳ ಆಧಾರದ ಮೇಲೆ ಮುಲಾಯಂ ಅವರ ಆಸ್ತಿ ಮೊತ್ತ ಸುಮಾರು 100 ಕೋಟಿ ರು ದಾಟುತ್ತದೆ ಎಂದು ಸಿಬಿಐ ಮೂಲಗಳು ಹೇಳಿದೆ. ಈಗಿನ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಆಸ್ತಿ ಮೌಲ್ಯ ಇನ್ನೂ ಅಧಿಕವಾಗುವ ಸಾಧ್ಯತೆಯಿದೆ.
1993ರಲ್ಲಿ 18.25 ಲಕ್ಷ ರು, ಮಾರ್ಚ್ 2005ರಲ್ಲಿ 4.59 ಕೋಟಿ ರು ಆಗಿದೆ. ಆದರೆ, ಖರ್ಚು ಮತ್ತು ಉಳಿತಾಯದ ಲೆಕ್ಕಾಚಾರ ಹಾಕಿದರೆ 1.78 ಕೋಟಿ ವ್ಯತ್ಯಾಸ ಕಂಡು ಬರುತ್ತದೆ. ಇದು ಎಲ್ಲೂ ದಾಖಲಾಗಿಲ್ಲ. ಇದೇ ವ್ಯತ್ಯಾಸ 2005ರ ನಂತರೂ ಮುಂದುವರೆದಿದೆ ಎಂದು ಸಿಬಿಐ ಮಾಹಿತಿ ಹೊರ ಹಾಕಿದೆ.












Click it and Unblock the Notifications