ದೇವೇಗೌಡ ನಂತರ ಭಸ್ಮಾಸುರ ಯಾರು? ಡಿವಿಎಸ್ ಕೇಳಿ

ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿರುವ ಯಡಿಯೂರಪ್ಪ ಅವರಿಗೆ ಭಸ್ಮಾಸುರ ಎಂಬ ಬಿರುದನ್ನು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಪ್ರೀತಿಯಿಂದ ನೀಡಿದ್ದಾರೆ.
ಪ್ರಾಯಶಃ ನಾಯಕನಾಗಿ ಬೆಳೆದು ಭಸ್ಮಾಸುರ ನಂತಾಗಿದ್ದ ಮುಖಂಡ ಬಿಜೆಪಿಯಿಂದ ಹೊರ ಬಿದ್ದ ಮೇಲೆ ಕಾರ್ಯಕರ್ತರಿಗೆ ನೆಮ್ಮದಿ ಸಿಕ್ಕಿದೆ. ಈಗ ಭಸ್ಮಾಸುರ ಸಂಹಾರ ಮಾಡಲಿಕ್ಕೆ ನಮ್ಮ ಕಾರ್ಯಕರ್ತರಿದ್ದಾರೆ.
ಚುನಾವಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ತೀವ್ರವಾಗಿ ಹೋರಾಟ ಮಾಡಬಹುದು. ಜನರ ವಿಶ್ವಾಸವನ್ನು ಹೆಚ್ಚಿನ ಮಟ್ಟದಲ್ಲಿ ಗಳಿಸಬಹುದು. ಭಸ್ಮಾಸುರ ಪಕ್ಷದಲ್ಲಿ ಇದ್ದಿದ್ದರೆ ಎಲ್ಲರ ಬಾಯಿ ಮುಚ್ಚಿಸುತ್ತಿದ್ದರು. ಆಗ ಬರೀ ಭ್ರಷ್ಟಾಚಾರವೇ ಮಾತಾಡುತ್ತಿತ್ತು ಎಂದು ಸದಾನಂದ ಗೌಡ ಕುಟುಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ ಅವರು ಅವರ ಬಗ್ಗೆ ನಾನೇನು ಹೇಳಬೇಕಿಲ್ಲ. ಜನರಿಗೆ ಎಲ್ಲಾ ಗೊತ್ತಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಕೆಜೆಪಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಸುಮಾರು 50-60 ಜನ ಶಾಸಕರು ಕೆಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಭಸ್ಮಾಸುರ ಪ್ರಸಂಗ: ದೇವೇಗೌಡ ಒಬ್ಬ ಭಸ್ಮಾಸುರ, ಅವರಿಂದ ಮುಟ್ಟಿಸಿಕೊಂಡವರು ಯಾರೂ ಉದ್ದಾರ ಆಗಿಲ್ಲ. ಆಗಲು ಸಾಧ್ಯವೇನ್ರೀ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಯಡಿಯೂರಪ್ಪ ಅವರು ತೀವ್ರ ವಾಗ್ದಾಳಿ ನಡೆಸಿದ್ದರು.
ದೇವೇಗೌಡ ಯಡಿಯೂರಪ್ಪ ಅವರನ್ನು ಮಾನಗೆಟ್ಟ ಮುಖ್ಯಮಂತ್ರಿ ಎಂದಿದ್ದರು. ಇದಕ್ಕೂ ಪ್ರತಿಯಾಗಿ ಯಡಿಯೂರಪ್ಪ ಈ ರೀತಿ ಪ್ರತಿಕ್ರಿಯಿಸಿದ್ದರು.- September 9, 2010,
ಇದಕ್ಕೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒಕ್ಕಲಿಗರ ಸಮಾಜವನ್ನು ಒಡೆದ ಕೆಟ್ಟ ವಿಷ ಬೀಜ. ಇನ್ನೊಬ್ಬರ ಏಳಿಗೆಯನ್ನ ಎಂದೂ ಸಹಿಸದ ದೇವೇಗೌಡರಿಗೆ ಯಾಗಯಜ್ಞಗಳನ್ನು ಮಾಡುವ ಮೂಲಕ ಅವರಿವರನ್ನು ಸಂಹಾರ ಮಾಡುವುದೇ ಏಕೈಕ ಉದ್ದೇಶ. ದೇವೇಗೌಡ ಕರಿನಾಗರ ಇದ್ದ ಹಾಗೆ, ಆಧುನಿಕ ಭಸ್ಮಾಸುರನ ಅವತಾರ...
ದೇವೇಗೌಡ, ತಾನು ತನ್ನ ಮಕ್ಕಳು ಮಾತ್ರ ಅಧಿಕಾರ ಅನುಭವಿಸಬೇಕು ಎನ್ನುವ ಸ್ವಾರ್ಥ ಮನಸ್ಸಿನ ವ್ಯಕ್ತಿ. ಅವನ ಕಾಟ ತಾಳಲಾರದೇ ಪಕ್ಷದಲ್ಲಿರುವ ಅನೇಕ ಮುಖಂಡರು ಅನ್ಯ ಪಕ್ಷಗಳಿಗೆ ಸೇರಿದರು. ಇನ್ನೂ ಕೆಲ ನಾಯಕರನ್ನು ಮೂಲೆಗುಂಪು ಮಾಡಿದ ದೇವೇಗೌಡ, ಬೆರಳೆಣಿಕೆಯಷ್ಟು ಮುಖಂಡರು ಈತನ ಕುಟಿಲ ರಾಜಕಾರಣಕ್ಕೆ ಬಲಿಯಾಗಿ ಅದೇ ಚಿಂತೆಯಲ್ಲಿ ಸಾವನ್ನಪ್ಪಿರುವುದು ಕಣ್ಮುಂದೆ ಇದೆ ಈಗಿನ ಕಾರ್ಮಿಕ ಸಚಿವ ಬಚ್ಚೇಗೌಡ ಹೇಳಿದ್ದರು. November 14, 2008,












Click it and Unblock the Notifications