ಆರ್‌ಜೆಗಳ ಕುಚೇಷ್ಟೆಗೆ ಬಲಿಯಾದ ನರ್ಸ್ ಉಡುಪಿಯವರು

Nurse Jacintha Saldanha from Udupi commits suicide
ಉಡುಪಿ, ಡಿ. 8 : ಗರ್ಭವತಿಯಾಗಿರುವ ಕೇಂಬ್ರಿಜ್ ರಾಜಕುಮಾರಿ ಕೇಟ್ ಮಿಡ್ಲ್‌ಟನ್‌ಳ ಖಾಸಗಿ ಮಾಹಿತಿಯನ್ನು ಪಡೆಯಲು ಮಾಡಿದ ಕುಚೇಷ್ಟೆ ಓರ್ವ ಪ್ರತಿಭಾವಂತ, ಹೃದಯವಂತ, ಎಲ್ಲರ ಪ್ರೀತಿಗೂ ಪಾತ್ರವಾಗಿದ್ದ ಭಾರತೀಯ ಮೂಲದ ನರ್ಸ್‌ವೊಬ್ಬರ ಪ್ರಾಣವನ್ನೇ ತೆಗೆದುಕೊಂಡಿದೆ.

ಲಂಡನ್‌ನಲ್ಲಿರುವ ಕಿಂಗ್ ಎಡ್ವರ್ಡ್ VII ಆಸ್ಪತ್ರೆಯಲ್ಲಿ ಕೇಂಬ್ರಿಜ್ ಡ್ಯೂಕ್ ಪ್ರಿನ್ಸ್ ವಿಲಿಯಂನ ಪತ್ನಿ ಕೇಟ್‌ಳ ಆರೈಕೆ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಶಿರ್ವದವರಾದ 46 ವರ್ಷದ ದಾದಿ ಜೆಸಿಂತಾ ಸಾಲ್ಡಾನಾ ಅವರು ಶುಕ್ರವಾರ ಬೆಳಗಿನ ಜಾವ ಸಾವಿಗೀಡಾಗಿದ್ದಾರೆ. ದುರುಳರು ಆಡಿದ ಕುಚೇಷ್ಟೆಯ ಆಟಕ್ಕೆ ಬಲಿಪಶುವಾಗಿರುವ ಜೆಸಿಂತಾ, ಈ ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಆಸ್ಟ್ರೇಲಿಯನ್ ರೇಡಿಯೋ 2Day FMದ ಜಾಕಿಗಳಾದ ಮೈಕಲ್ ಕ್ರಿಸ್ಟಿಯನ್ ಮತ್ತು ಮೆಲ್ ಗ್ರೇಗ್ ಅವರು ತಾವು ವಿಲಿಯಂ ಮತ್ತು ರಾಣಿ ಎಲಿಜಬೆತ್ ಎಂದು ಫೋನ್ ಮುಖಾಂತರ ಬುಧವಾರ ಹೇಳಿಕೊಂಡು, ಕೇಟ್‌ಳನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಮುಖಾಂತರ ಎಲ್ಲ ಖಾಸಗಿ ವಿಷಯಗಳನ್ನು ತಿಳಿದುಕೊಂಡು ರೇಡಿಯೋದಲ್ಲಿ ಪ್ರಸಾರ ಮಾಡಿದ್ದರು.

ಈ ಮೋಸದ ಫೋನ್ ಕರೆಯನ್ನು ಕೇಟ್‌ಳನ್ನು ನೋಡಿಕೊಳ್ಳುತ್ತಿದ್ದ ನರ್ಸ್‌ಗೆ ವರ್ಗಾಯಿಸಿದ್ದು ಜೆಸ್ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಜೆಸಿಂತಾ ಸಾಲ್ಡಾನಾ. ಇದು ಭಾರೀ ಸುದ್ದಿಯಾಗಿ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ರಾಜಕುಟುಂಬ ಮತ್ತು ಆಸ್ಪತ್ರೆಯ ಅಧಿಕಾರಿಗಳು ಕೂಡ ಹೆಚ್ಚು ತಲೆಕೆಡಿಸಿಕೊಳ್ಳದಿದ್ದರೂ ಬ್ರಿಸ್ಟಲ್‌ನಲ್ಲಿ ನೆಲೆಸಿರುವ ಜೆಸಿಂತಾ ಸಾಲ್ಡಾನಾ ಮಾತ್ರ ತೀವ್ರವಾಗಿ ಘಾಸಿಯಾಗಿದ್ದರು.

ಈ ದುರಂತದಿಂದ ಉಡುಪಿಯ ಶಿರ್ವದಲ್ಲಿರುವ ಜೆಸಿಂತಾ ಕುಟುಂಬದವರು ದಿಗ್ಮೂಢರಾಗಿದ್ದಾರೆ. ಇಂಥದೊಂದು ದುರ್ಘಟನೆ ನಡೆಯುತ್ತದೆಂದು ಕನಸಿನಲ್ಲಿಯೂ ನೆನೆಸಿರಲಿಲ್ಲ ಎಂದು ಅವರ ತಾಯಿ ಕರ್ಮೈನ್ ಸಾಲ್ಡಾನಾ ಅವರು ಕಣ್ಣೀರಾಗುತ್ತಾರೆ. ಪ್ರತಿದಿನ ಫೋನ್ ಮಾಡುತ್ತಿದ್ದರೂ ಜೆಸಿಂತಾ ಆಗಲಿ ಅವರ ಲಂಡನ್ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿರುವ ಗಂಡ ಬೆನೆಡಿಕ್ಟ್ ಬರ್ಬೋಜಾ ಆಗಲಿ ಕೇಟ್‌ಗೆ ಸಂಬಂಧಿಸಿದಂತೆ ನಡೆದ ಕುಚೇಷ್ಟೆಯ ಬಗ್ಗೆ ಒಂದು ಮಾತನ್ನೂ ಹೇಳಿರಲಿಲ್ಲ.

ಜೆಸಿಂತಾ ಅವರ ಗಂಡ ಬೆನೆಡಿಕ್ಟ್ (49) ಕೂಡ ಶಿರ್ವದವರಾಗಿದ್ದಾರೆ. ದಂಪತಿಗಳಿಗೆ ಜುನಲ್ (16) ಮತ್ತು ಲಿಶಾ (14) ಇಬ್ಬರು ಮಕ್ಕಳು. ಮಂಗಳೂರಿನ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಮಾಡಿದ್ದ ಜೆಸಿಂತಾ 9 ವರ್ಷಗಳ ಹಿಂದೆ ಅವರು ಪತಿಯೊಂದಿಗೆ ಲಂಡನ್‌ಗೆ ವಲಸೆ ಹೋಗಿದ್ದರು. ಎರಡು ವರ್ಷಗಳಿಗೊಮ್ಮೆ ಶಿರ್ವಕ್ಕೆ ಬರುತ್ತಿದ್ದ ಅವರು 2011ರಲ್ಲಿ ಕಳೆಯ ಬಾರಿ ಬಂದಿದ್ದರು. ಅವರ ಶವವನ್ನು ಶಿರ್ವಕ್ಕೆ ಕರೆದುಕೊಂಡು ಬರುತ್ತಾರಾ ಇಲ್ಲವಾ ಎಂಬುದು ಗೊತ್ತಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+