ರೈಲ್ವೆ ಇಲಾಖೆ ಕೈಹಿಡಿದ 4,500 ಕೋಟಿ ರೂ. ಆಸ್ತಿ

mumbai-railways-get-plot-worth-r-4500-cr-100-yr-records
ಮುಂಬೈ, ಡಿ.8: ಮುಂಬೈನ ರೈಲ್ವೆ ಇಲಾಖೆಯು ನೂರು ವರ್ಷ ಹಳೆಯದಾದ ಸೂಕ್ತ ದಾಖಲೆ ಪತ್ರಗಳನ್ನು ಹಾಜರುಪಡಿಸಿ, 4,500 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ತನ್ನದೆಂದು ರುಜುವಾತು ಪಡಿಸುವಲ್ಲಿ ಯಶಸ್ವಿಯಾಗಿದೆ.

ಮುಂಬೈನ ಬಾಂದ್ರಾ (ಪೂ) ಭಾಗದಲ್ಲಿರುವ 10 ಎಕರೆ ಜಮೀನಿನ ಮೇಲೆ ತನ್ನ ಒಡೆತನ ಇದೆ ಎಂದು ಸಾಬೀತುಪಡಿಸಲು ಇಲಾಖೆಯು ಸುಮಾರು 100 ವರ್ಷಗಳಷ್ಟು ಹಳೆಯದಾದ ದಾಖಲೆಪತ್ರಗಳನ್ನು ಹಾಜರುಪಡಿಸಿದೆ. ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಇಂದು ಈ 10 ಎಕರೆ ಜಮೀನಿನ ಬೆಲೆ 4,500 ಕೋಟಿ ರೂ. ಗೂ ಹೆಚ್ಚು ಎಂಬುದು ಗಮನಾರ್ಹ.

ಇದೊಂದು ರೀತಿ ಕೇರಳದಲ್ಲಿ ದಿಢೀರನೆ 1 ಲಕ್ಷ ಕೋಟಿ ರೂ. ಚಿನ್ನ ಪತ್ತೆಯಾದಂತಾಗಿದೆ ಮುಂಬೈ ರೈಲ್ವೇಸ್ ಗೆ. ರಿಯಲ್ ಎಸ್ಟೇಟ್ ಗಗನ ಚುಂಬಿಯಾಗಿರುವ ಮುಂಬೈನಲ್ಲಿ ಸದ್ಯ ಈ ಪಾಟಿ ಆಸ್ತಿ ಪರರ ಪಾಲಾಗದೆ ಇಲಾಖೆಯ ಸುಪರ್ದಿಗೆ ಸೇರಿತಲ್ಲಾ ಎಂಬುದೇ ಸಮಾಧಾನ.

ಇಷ್ಟು ದೊಡ್ಡ ಆಸ್ತಿಯನ್ನು ಇಟ್ಟುಕೊಂಡು ಏನು ಮಾಡುವುದೆಂದು ರೈಲ್ವೆ ಇಲಾಖೆಯು, ಅಷ್ಟೂ ಜಾಗವನ್ನು ಮಾರಾಟ ಮಾಡಿ ಬಂದ ಹಣದಿಂದ ಇಲಾಖೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ. ಅನಾಯಾಸವಾಗಿ ಬಂದ ಈ ಹಣದಿಂದ ಪ್ರಧಾನವಾಗಿ Mumbai Urban Transport Project - II ಕಾರ್ಯಗತಗೊಳಿಸಲು ಇಲಾಖೆ ಮುಂದಾಗಿದೆ.

Mumbai Rail Vikas Corporation (MRVC) ಸಂಸ್ಥೆಯು 1911 ಮತ್ತು 1917 ರ ನಡುವಣ ದಾಖಲೆ ಪತ್ರಗಳನ್ನು ರಾಜ್ಯ ಸರಕಾರದ ಮುಂದೆ ಪ್ರಸ್ತುತಪಡಿಸಿ, ಆಸ್ತಿ ಮೇಲಿನ ಹಕ್ಕನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಥಾಣೆಯ ಅಂದಿನ ಕಲೆಕ್ಟರ್ Bombay Baroda

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+