ಕಾಂಗ್ರೆಸ್ ಭಿನ್ನಮತ: ಸಿದ್ದರಾಮಯ್ಯಗೆ ಸಿಹಿ ಸುದ್ದಿ

ರಾಜ್ಯ ಕಾಂಗ್ರೆಸ್ ಭಿನ್ನಮತಕ್ಕೆ ಆಗಾಗ ಗಾಳಿ ಹಾಕುತ್ತಿರುವ ಕೆಪಿಸಿಸಿ ಹಾಲಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರು ರಾಷ್ಟ್ರ ರಾಜಕಾರಣಕ್ಕೆ ಅಂಕಿತವಾಗುವ ಸೂಚನೆಗಳು ಸಿಕ್ಕಿವೆ. ಖುದ್ದು ಪರಮೇಶ್ವರ ಅವರೂ ಇದಕ್ಕೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಏನಪಾ ಅಂದರೆ ಮುಂದಿನ ಲೋಕಸಭೆ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಜಿ ಪರಮೇಶ್ವರ್ ಅವರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರಂತೆ.
ಸಂದರ್ಭ: AICC ವೀಕ್ಷಕಿ, ತಮಿಳುನಾಡು ಶಾಸಕಿ ವಿಜಯ ಧರಣಿ ಅವರು ಮುಂದಿನ ಲೋಕಸಭೆ ಚುನಾವಣೆ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲು ಸೋಮವಾರ ರಾಜ್ಯಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯಿಂದ 8 ಅರ್ಜಿಗಳು ಸಲ್ಲಿಕೆಯಾಗಿವೆ.
ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರದ್ದೂ ಒಂದು. ವೀಕ್ಷಕರು ಆಗಮಿಸಿದಾಗ ಪರಮೇಶ್ವರ ಖುದ್ದು ಹಾಜರಿರಲಿಲ್ಲ. ಆದರೆ, ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಮುಖರ ಮೂಲಕ ತಮ್ಮ ಅಪೇಕ್ಷೆಯುಳ್ಳ ಅರ್ಜಿ ಸಲ್ಲಿಸಿದ್ದಾರೆ.
ಇದರಿಂದ 'ವಿಧಾನಸಭೆ ಚುನಾವಣೆಗೆ ಇನ್ನು 170 ದಿನಗಳಷ್ಟೇ ಬಾಕಿಯಿದೆ. ಆದರೆ ನಮ್ಮಲ್ಲಿ ಭಿನ್ನಮತ ಮಾತ್ರ ಇನ್ನೂ ನಿಂತಿಲ್ಲ' ಎಂದು ಒಂದು ತಿಂಗಳ ಹಿಂದೆ ಗೋಳಾಡಿದ್ದ ಪರಮೇಶ್ವರ ಅವರು ರಾಜ್ಯ ಕಾಂಗ್ರೆಸ್ ಕಲಹದಿಂದ ಬೇಸತ್ತು ಕೇಂದ್ರ ರಾಜಕಾರಣಕ್ಕೆ ಶಿಫ್ಟ್ ಆಗಲಿದ್ದಾರೆಯೇ? ಎಂಬ ಕುತೂಹಲ ಮೂಡಿದೆ.












Click it and Unblock the Notifications