ಕಾವೇರಿ: ಸರ್ವಾನುಮತದ ತೀರ್ಮಾನ ಏನು?

ಬೆಳಗಾವಿ, ಡಿ.6: ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟ್ ತಗಾದೆ ಬಗ್ಗೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲು ಸಿಎಂ ಶೆಟ್ಟರ್ ಅವರು ಬೆಳಗಾವಿಯಲ್ಲಿ ಗುರುವಾರ ಮಧ್ಯಾಹ್ನ ಸರ್ವ ಪಕ್ಷ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ರಾಜ್ಯದ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ ಸರಕಾರವು ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕೆ, ಬೇಡವೇ ಎಂಬ ಮಂತ್ರಾಲೋಚನೆಯಲ್ಲಿ ಮಗ್ನವಾಗಿದೆ. ಆದರೆ ರಾಜ್ಯ ಸರಕಾರ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ.

cauvery-row-belgaum-all-party-metting-yet-to-decide

ಈ ಮಧ್ಯೆ, ಪ್ರತಿಪಕ್ಷಗಳು ನ್ಯಾಯಾಂಗ ನಿಂದನೆಯಾದರೂ ಪರವಾಗಿಲ್ಲ ನೀರು ಬಿಡುವುದು ಬೇಡ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟಿವೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ಇಂದು ಸಂಜೆಯ ವೇಳೆಗೆ ಸರಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.

ಈ ಮಧ್ಯೆ, KRS ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ನಿನ್ನೆ 98 ಅಡಿ ಇದ್ದ ನೀರು ಇಂದು 97 ಅಡಿಗೆ ತಲುಪಿದೆ. ಒಳ ಹರಿವು 2000 ಕ್ಯುಸೆಕ್ ಇದ್ದು, ಹೊರಹರಿವು 5,000 ಕ್ಯುಸೆಕ್ ನಷ್ಟಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಅಂತೂ ಇಂದು ಇಡೀ ಗುರುವಾರ ಕರ್ನಾಟಕ ಕಾವೇರಿ ಮಂತ್ರ ಜಪಿಸುವುದು ನಿಶ್ಚಿತ.

ಡಿಟಿ ಜಯಚಂದ್ರ, ಎಸ್ಆರ್ ಪಾಟೀಲ್, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಎಂಸಿ ನಾಣಯ್ಯ, ಈಶ್ವರಪ್ಪ, ಎಚ್ ಡಿ ರೇವಣ್ಣ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+