ಮದುವೆ ಗುಟ್ಟು ರಟ್ಟು: ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

secret-wedding-revealed-dishearten-mba-student-suicide
ಮುಂಬೈ, ಡಿ.3: ಗುಪ್ತವಾಗಿ ತನ್ನ ಬಾಯ್ ಫ್ರೆಂಡ್ ಜತೆ ಮದುವೆಯಾಗಿದ್ದ ಸೋನಾಲ್ ಬಾಗಡೆ ಎಂಬ ಯುವತಿ ನಿನ್ನೆ ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸೋನಾಲ್ ತಾನು ಅತ್ಯಂತ ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದನ್ನು ಹೆತ್ತಮ್ಮನಿಗೆ ಮತ್ತು ಇತರೆ ಬಂಧುಗಳಿಗೆ 5 ದಿನಗಳ ಹಿಂದೆ ತಿಳಿಸಿದ್ಧಳು.

ಇದಕ್ಕೆ ಪೋಷಕರು ತೀವ್ರ ಪ್ರತಿರೋಧವೊಡ್ಡಿದ್ದರು. ಅದಾದ ನಂತರ ಪಾಪ ಪ್ರಜ್ಞೆಯಿಂದ ಬಳಲಿದ ಸೋನಾಲ್ ಕೊನೆಗೂ ಮುಕ್ತಿ ಮಾರ್ಗ ಕಂಡುಕೊಂಡು 6ನೆಯ ಮಹಡಿಯಿಂದ ಹಾರಿ ಪ್ರಾಣ ತೆತ್ತಿದ್ದಾಳೆ.

ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸೋನಾಲ್ ಅವರ ತಾಯಿ ಮಾಯಾ, ಸಂತಕ್ರೂಜ್ (ಪೂರ್ವ)ನಲ್ಲಿರುವ ಡಿಮೆಲ್ಲೋ ಅಪಾರ್ಟ್ ಮೆಂಟಿನಲ್ಲಿ ವಾಸವಾಗಿದ್ದಾರೆ. ಐದು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಸೀರೆಯುಟ್ಟುಕೊಂಡು, ಸಿಂಧೂರವಿಟ್ಟುಕೊಂಡು ತಾಯಿ ಮಾಯಾ ಮುಂದೆ ಪ್ರತ್ಯಕ್ಷಳಾದ ಸೋನಾಲ್, ತಾನು ಮದುವೆಯಾಗಿರುವುದಾಗಿ ಘೋಷಿಸಿದಳು.

ಇದನ್ನು ಸಹಿಸದ ಹೆತ್ತಮ್ಮ ಮಾಯಾ, ಮಗಳ ಮೊಬೈಲ್ ಕಿತ್ತುಕೊಂಡು ರಂಪಾಟ ಮಾಡಿದ್ದಾರೆ. ಇದರಿಂದ ಬೇಸತ್ತ ಸೋನಾಲ್ ಚಿಕ್ಕಮ್ಮನ ಮನೆಗೆ ತೆರಳಿ ಅಲ್ಲಿ ಸಮಾಧಾನ ಕಂಡುಕೊಳ್ಳಲು ಯತ್ನಿಸಿದ್ದಾಳೆ. ಅಲ್ಲೂ ಮನೆ ಮಂದಿ ಸೋನಾಲ್ ಮದುವೆ ವಿರುದ್ಧ ಅರಚಾಡಿದ್ದಾರೆ. ಮದುವೆ ಸಂಬಂಧ ಕಡಿದುಕೋ ಎಂದು ಒತ್ತಾಯ ಮಾಡಿದ್ದಾರೆ.

ಒತ್ತಡ ತಾಳಲಾರದೆ ಸೋನಾಲ್ ಭಾನುವಾರ ಬೆಳಗ್ಗೆ 9 ಗಂಟೆಯಲ್ಲಿ 6ನೇ ಮಹಡಿಯಿಂದ ಹಾರಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಸೋನಾಲ್ ಳನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾಳೆ.

'ಅಮ್ಮಾ/ ಬಂಧುಗಳೇ ನಿಮಗೆಲ್ಲ ತುಂಬಾ ದುಃಖ ಕೊಟ್ಟೆ. ದಯವಿಟ್ಟು ಕ್ಷಮಿಸಿಬಿಡಿ. ನನ್ನ ಸಾವಿಗೆ ನಾನೇ ಕಾರಣ' ಎಂದೆಲ್ಲ ಮರಣ ಪತ್ರದಲ್ಲಿ ಬರೆದು ಸೋನಾಲ್ ಸತ್ತಿದ್ದಾಳೆ. ಪೊಲೀಸರು ಸೋನಾಲ್ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಕಾಲ್ ಡೀಟೇಲ್ಸ್ ಪ್ರಕಾರ ಸೋನಾಲಳ ಗಂಡ ಯಾರೆಂಬುದು ಪತ್ತೆಯಾಗಿದೆ. ಆದರೆ ಆತ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಪೊಲೀಸರು ಈಗ ಆತನ ಬೆನ್ನುಹತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+