ರಾಜಹಂಸ ಬಸ್ ಗೆ ಕಿರ್ಲೋಸ್ಕರ್ ಉದ್ಯೋಗಿಗಳ ಬಲಿ

ಬೆಂಗಳೂರಿನಿಂದ 30 ಕಿಮೀ ದೂರದಲ್ಲಿರುವ ಬಿಡದಿ ಬಳಿ ಟೊಯೋಟಾ ಕಿರ್ಲೋಸ್ಕರ್ ಕಂಪನಿ ಉದ್ಯೋಗಿಗಳಾದ ಚೇತನ್ (22) ಮತ್ತು ದರ್ಶನ್ (24) ಕೆಲಸದ ಧಾವಂತದಲ್ಲಿ ಬೈಕಿನಲ್ಲಿ ಕಂಪನಿಯತ್ತ ಹೋಗುತ್ತಿದ್ದಾಗ ಎದುರಿನಿಂದ ಬಂದ ಕೆಎಸ್ಆರ್ ಟಿಸಿ ಬಸ್ಸು ಬೈಕಿಗೆ ಮುಖಾಮುಖಿ ಹೊಡೆದಿದೆ. ಇದರಿಂದ ಇಬ್ಬರೂ ಯುವಕರು ಸ್ಥಳದಲ್ಲೇ ಅಸುನೀಗಿದ್ದಾರೆ.
ರಾಜಹಂಸ ಬಸ್ಸು ಬೆಂಗಳೂರಿನಿಂದ ಮೈಸೂರಿಗೆ ಹೊರಟಿತ್ತು. ಬಿಡದಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಮತ್ತೊಂದು ಅಪಘಾತದಲ್ಲಿ ಕೂಲಿಯಾಳುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಮಡಿಕೇರಿ ಬಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕೃಷಿ ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರನ್ನು ಎಚ್ ಡಿ ಕೋಟೆಯ ಪಾಪ ನಾಯ್ಕ ಮತ್ತು ಮರಿಗೌಡ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಇನ್ನೂ 16 ಮಂದಿಗೆ ಗಾಯಗಳಾಗಿದ್ದು, 5 ಸ್ಥಿತಿ ಗಂಭಿರವಾಗಿದೆ. ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ್ದೇ ಲಾರಿ ಅಪಘಾತಕ್ಕೆ ಕಾರಣ ಎನ್ನಲಾಗಿದೆ.












Click it and Unblock the Notifications