ಬಿಎಸ್ಆರ್ ಕಾಂಗ್ರೆಸ್ ದಿಗ್ವಿಜಯಕ್ಕೆ ರಾಮುಲು ಸಂಕಲ್ಪ
ಬಳ್ಳಾರಿ,
ಡಿ.3: ಮುಂದಿನ ವಿಧಾನಸಭೆ ಚುನಾವಣೆಗೆ 'ಬಳ್ಳಾರಿ ಬ್ರದರ್ಸ್' ಭರ್ಜರಿ ತಯಾರಿಯನ್ನೇ ನಡೆಸಿದ್ದಾರೆ. ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಚುನಾವಣೆ ಸ್ಪರ್ಧೆಗೆ ಎಂಟ್ರಿ ಕೊಟ್ಟಿರುವುದು ಪಕ್ಷದಲ್ಲಿ ಹೊಸ ಹುಮ್ಮಸ್ಸು/ಚೈತನ್ಯ ತುಂಬಿದೆ. id="toptextpromo"> id='are-slot-1' class='oiad oi-axt oiadv'>ಹಾಗೆ
ನೊಡಿದರೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧಿನೇತಾ ಶ್ರೀರಾಮುಲು ಅವರು ಪಕ್ಷವನ್ನು ಅಸ್ತಿತ್ವಕ್ಕೆ ತಂದ ದಿನದಿಂದಲೂ ಪಕ್ಷ ಬೇರೂರುವ ನಿಟ್ಟಿನಲ್ಲಿ ಕರಾರುವಕ್ಕಾಗಿ, ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯುತ್ತಿದ್ದಾರೆ. ಆರಂಭದಲ್ಲಿ ಪಾದಯಾತ್ರೆಗಳ ಮೂಲಕ ಜನರ ನಾಡಿಮಿಡಿತ ಅರಿಯಲು ಕರ್ನಾಟಕದ ಉದ್ದಗಲಕ್ಕೂ ಪಾದಯಾತ್ರೆ ನಡೆಸಿದ ರಾಮುಲು ಆರಂಭದಲ್ಲಿ ಕೆಲವೆಡೆ ಹಿನ್ನಡೆ ಅನುಭವಿಸಿದರು. ಆದರೆ ಧೃತಿಗೆಡದೆ/ಹಿಂದಿರುಗಿ ನೋಡದೆ ಮುನ್ನಡೆದ ರಾಮುಲು ಈ ಬಾರಿ ತಂತ್ರವನ್ನು ಬದಲಿಸಿದರು. id='are-slot-2' class='oiad oi-axt oiadv'>ಕೇವಲ
ಪಾದಯಾತ್ರೆ/ ಸಂಕಲ್ಪಯಾತ್ರೆಗಳನ್ನೇ ನೆಚ್ಚಿಕೊಂಡಿದ್ದರೆ ಸಾಲದು. ಹೇಗೂ ಉತ್ತರ ಕರ್ನಾಟಕದ ನಾಲ್ಕಾರು ಜಿಲ್ಲೆಗಳಲ್ಲಿ ಜನ ಬಿಎಸ್ಆರ್ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ತಮ್ಮ ಶ್ರಮಕ್ಕೆ ಆಧುನಿಕ ತಂತ್ರಜ್ಞಾನದ ಟಚ್ ನೀಡಲು ನಿರ್ಧರಿಸಿದರು.
ಶ್ರೀರಾಮುಲು ಸಂಕಲ್ಪ, ಕಾಯಕಲ್ಪ
ಇತ್ತ ಆಡಳಿತಾರೂಢ ಬಿಜೆಪಿ ನಾಯಕರು ಬೀದಿರಂಪಾಟದಲ್ಲಿ ತೊಡಗಿದ್ದರೆ ಅತ್ತ ರಾಮುಲು ಸದ್ದಿಲ್ಲದೆ ರಾಜ್ಯದ ಇತರೆಡೆಗಳಲ್ಲೂ ಪಕ್ಷಕ್ಕೆ ಭವಿಷ್ಯ ಹೇಗಿದೆ ಎಂಬುದನ್ನು ಅಳೆಯಲು/ಅರಿಯಲು ನಿರ್ಧರಿಸಿದರು. ಅದಕ್ಕಾಗಿ ಮುಂಬೈನ ಯಶಸ್ವಿ Public Relations Companyಯ ಮೊರೆಹೋದರು.
ತಮ್ಮ ಪಕ್ಷದ ಬಗ್ಗೆ ಜನ ಏನನ್ನುತ್ತಾರೆ ಎಂಬುದರ ಬಗ್ಗೆ ಸ್ವತಂತ್ರವಾಗಿ ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಆ ಕಂಪನಿಗೆ ಸೂಚಿಸಿದರು. ಅದರ ಫಲವಾಗಿ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಹೇಗೆ ಮುನ್ನಡೆಸಬೇಕು ಎಂಬುದನ್ನು ಅರಿತುಕೊಂಡರು. ಇದಕ್ಕೆ Big Brother ಜನಾರ್ದನ ರೆಡ್ಡಿಯ ಆಶೀರ್ವಾದ ಹೇಗೂ ಇದ್ದೇ ಇತ್ತು.

ಮಾಧ್ಯಮದ ನೆರವು, ಒಲವು
BSR Congressಗೆ ಚುನಾವಣೆ ಆಯೋಗ ಮಾನ್ಯತೆ ನೀಡುತ್ತಿದ್ದಂತೆ ಪಕ್ಷದ ಬಾವುಟವನ್ನು ಮತ್ತಷ್ಟು ಬಿರುಸಾಗಿ ಹಾರಿಸಿದರು. ಇದೇ ವೇಳೆ ಹಿರಿಯ ಪತ್ರಕರ್ತ, ಮಾಜಿ ಶಿಕ್ಷಕ ರವೀಂದ್ರ ರೇಷ್ಮೆ ಅವರ ಒಲವು ಸಂಪಾದಿಸಿ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಿಸುವಲ್ಲಿ ಯಶಸ್ವಿಯಾದರು.
'ಲಂಕೇಶ್ ಪತ್ರಿಕೆ' ಮೂಲಕ ಕರ್ನಾಟಕ ರಾಜಕೀಯವನ್ನು ಆಳವಾಗಿ ಅರಿತಿರುವ ರವೀಂದ್ರ ರೇಷ್ಮೆ BSR Congress ಪಕ್ಷದ ವಕ್ತಾರರಾಗಿ ಗುರುತಿಸಿಕೊಳ್ಳಲು ಸಿದ್ಧಹಸ್ತರಾದರು. ಮೂರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಪತ್ರಿಕೋದ್ಯಮ ಅನುಭವವನ್ನು BSR Congressಗೆ ಧಾರೆಯೆರೆಯಲು ಅವರು ಸಿದ್ಧರಾಗಿದ್ದಾರೆ.

ಚುನಾವಣೆಗೆ ಅಣಿಯಾಗಿರುವ ಬೆಂಬಲಿಗರು
ಇದರ ಹೊರತಾಗಿ ತಾವು ಕರಗತ ಮಾಡಿಕೊಂಡಿರುವ ಸ್ಥಳೀಯಮಟ್ಟದ ರಾಜಕೀಯವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಶ್ರೀರಾಮುಲು ತಮ್ಮ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬೆಂಬಲಿಗರನ್ನು ಈಗಾಗಲೇ ಚುನಾವಣೆಗೆ ಅಣಿಗೊಳಿಸಿದ್ದಾರೆ.

ಶ್ರೀರಾಮುಲು ವೆಬ್ ಸೈಟ್ ವಿಳಾಸ
ಚುನಾವಣೆಗೆ ಅಣಿಯಾಗಿರುವ ಬೆಂಬಲಿಗರು












Click it and Unblock the Notifications