ಗಂಡನನ್ನು ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿಯ ಬಂಧನ

Wife arrested for beating husband
ಫ್ಲೋರಿಡಾ, ನ. 29 : ಹುಟ್ಟಾ ಗಂಡಾಗಿದ್ದೂ ಹತ್ತೊಂಬತ್ತು ವರ್ಷಗಳ ಕಾಲ ತನ್ನ ನೈಜರೂಪವನ್ನು ಬಚ್ಚಿಟ್ಟು ಗಂಡನಿಗೆ ಮೋಸ ಮಾಡಿದ ಹೆಂಡತಿಯ ರೂಪವನ್ನು ನೋಡಿದ್ದೇವೆ. ಈಗ ಕಾರಣವಲ್ಲದ ಕಾರಣಕ್ಕೆ ಗಂಡನ ಮೇಲೆ ಕೋಪತಾಪ ತೋರಿಸಿ ಅಟ್ಟಾಡಿಸಿಕೊಂಡು ಹೊಡೆದ ಹೆಂಡತಿಯ ಕಥೆಯನ್ನೂ ಓದಿಬಿಡಿ.

ಯಸ್, ತನ್ನ ಗಂಡನನ್ನೇ ಮನಬಂದಂತೆ ಥಳಿಸಿದ ಆರೋಪದ ಮೇಲೆ ಫ್ಲೋರಿಡಾದ 24 ವರ್ಷ ಗೃಹಿಣಿ ರಾಕೆಲ್ ಗೊಂಜಾಲೆಜ್ ಎಂಬಾಕೆಯನ್ನು ಫ್ಲೋರಿಡಾದ ಪೊಲೀಸರು ಬಂಧಿಸಿದ್ದಾರೆ. ಆಕೆ ತನ್ನ ಗಂಡ 30 ವರ್ಷದ ಎಸ್ರಿಕ್ ಡೆವಿಸ್ ನನ್ನು ಹಿಗ್ಗಾಮುಗ್ಗಾ ಥಳಿಸಲು ಕಾರಣವೇನು ಗೊತ್ತಾ? ಇಬ್ಬರೂ ರಾತ್ರಿ ಸರಸವಾಡುತ್ತಿದ್ದ ಸಮಯದಲ್ಲಿ ಆತ ಆಕೆಗಿಂತ ಮೊದಲು ಸ್ಖಲನ ಹೊಂದಿದ್ದುದು! ಅಯ್ಯೋ ಪಾಪ.

ರಾಕೆಲ್ ಗೊಂಜಾಲೆಜ್ ಮತ್ತು ಎಸ್ರಿಕ್ ಡೆವಿಸ್ ಸೋಮವಾರ ರಾತ್ರಿ ಸರಸದಲ್ಲಿ ತೊಡಗಿದ್ದರು. ಆದರೆ, ಆ ಸಮಯದಲ್ಲಿ ಆಕೆಗಿಂತ ಮೊದಲು ಆತನಿಗೆ ಸ್ಖಲನವಾಗಿದ್ದರಿಂದ ಕೆಂಡಾಮಂಡಲವಾದ ಆಕೆ ಗಂಡನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಬೇಡ ಬೇಡವೆಂದು ಗಂಡನೆಂಬ ಪ್ರಾಣಿ ಗೋಗರೆದರೂ ಆಕೆ ಬಿಟ್ಟಿಲ್ಲ.

ಗಂಡನ ಕಣ್ಣು ಮತ್ತು ಕತ್ತಿನ ಮೇಲೆ ಗಾಯಗಳಾಗಿವೆ. ಪಾಪ, ಎಷ್ಟು ದಿನ ಅಂತ ಹೀಗೆಯೇ ಹೆಂಡತಿಯ ದಬ್ಬಾಳಿಕೆಯನ್ನು ಸಹಿಸಿಯಾನು? ಹೀಗೆ ಹೆಂಡತಿಯಿಂದ ಹೊಡೆಸಿಕೊಂಡು ಇದು ಮೊದಲೇನಲ್ಲ. ಆಗಾಗ ಚಂಡಿ ಚಾಮುಂಡಿಯ ಅವತಾರ ತಾಳುತ್ತಲೇ ಇರುತ್ತಾಳೆ ಎಂದು ತನಿಖಾಧಿಕಾರಿಯ ಮುಂದೆ ಗಂಡ ಅಲವತ್ತುಕೊಂಡಿದ್ದಾನೆ.

ಬಂಧಿನಕ್ಕೊಳಗಾಗುವಾಗ ಕೂಡ ಪೊಲೀಸರೆದಿರು ರುದ್ರಸ್ವರೂಪಿಣಿ ರೌದ್ರಾವತಾರ ತಾಳಿದ್ದಾಳೆ. ಈಗ ಆಕೆಯ ಮೇಲೆ ಗಂಡನ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆ ಮಾಡಿದ ಆರೋಪ ಹೊರಿಸಲಾಗಿದೆ.

ಫ್ಲೋರಿಡಾದಲ್ಲಿ ಗಂಡಂದಿರ ಮೇಲೆ ದೌರ್ಜನ್ಯ ನಡೆದಿರುವುದು ಕೂಡ ಇದು ಮೊದಲಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಗಂಡನ ವಿರುದ್ಧ ಸಿಟ್ಟಿಗೆದ್ದಿದ್ದ ಹೆಂಡತಿ ಆತನ ಬಾಯಿಯಲ್ಲಿ ಬಂದೂಕು ಇಟ್ಟು ಹೆದರಿಸಿದ್ದಳು ಮತ್ತು ಬಂಧನಕ್ಕೆ ಒಳಗಾಗಿದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+