ಭೂ ಹಗರಣ: ರಾಮದಾಸ್ ಮೇಲೆ ಸಿಐಡಿ ತನಿಖೆ

Mysore Ramdas CID probe
ಮೈಸೂರು, ನ.29: ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ ಎನ್ನಲಾದ ಭೂ ಹಗರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಚಿವ ಎಸ್. ಎ. ರಾಮದಾಸ್ ಅವರ ವಿರುದ್ಧ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಗುರುವಾರ(ನ.28) ಆದೇಶಿಸಿದೆ.

ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆಯ ಪತ್ತೆಗಾಗಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ ನೀಡಿದೆ.

ಮೈಸೂರಿನ ಕಾರಂಜಿಕೆರೆ,ಲಲಿತ ಮಹಲ್ ಅರಮನೆ, ಎಸ್‌ಐ ಆರ್ ಡಿ ಸಿದ್ದಾರ್ಥನಗರ ಬಡಾವಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ
ಭೂಹಗರಣದಲ್ಲಿ ರಾಮದಾಸ್ ಅವರ ಕೈವಾಡವಿದೆ ಎಂದು ಮಧುಸೂದನ್ ಆರೋಪಿಸಿದ್ದರು.

ಈ ಆರೋಪ ಕುರಿತಂತೆ ರಾಮದಾಸ್ ಅವರೇ ಸ್ವತಃ ಮುಖ್ಯಮಂತ್ರಿಗಳಿಗೆ ನವೆಂಬರ್ 25 ರಂದು ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಇದೀಗ ರಾಜ್ಯ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ರಾಮದಾಸ್, ಈ ಆರೋಪದಿಂದ ಶೀಘ್ರ ಮುಕ್ತವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಯ ವರ್ಗಾವಣೆಯ ವಿರುದ್ಧವಾಗಿ ಅವರನ್ನು ರಕ್ಷಿಸುತ್ತಿದ್ದೇನೆಂದು ಅದಕ್ಕೆ 449 ಎಕರೆ ದಾಖಲೆ ಇಲ್ಲದ ಭೂಮಿಯ ಮೇಲೆ ರಾಮದಾಸ್ ಅವರು ಕಣ್ಣಿಟ್ಟಿದ್ದು, ನೂರಾರು ಎಕರೆ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಮಧುಸೂದನ್ ಆರೋಪಿಸಿದ್ದಾರೆ.

ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪಗಳು ಕೇಳಿಬಂದರೆ ಸುಮ್ಮನಿರುವುದು ಸರಿಯಲ್ಲ . ಹಾಗಾಗಿ ಈ ಕುರಿತು ತಮ್ಮ ಯಾವುದೇ ಪಾತ್ರ ಇಲ್ಲ ಮತ್ತು ಇದರಿಂದ ಮುಕ್ತರಾಗಬೇಕು ಎಂದು ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ರಾಮದಾಸ್ ಉಲ್ಲೇಖಿಸಿದ್ದಾರೆ.

ಒಬ್ಬ ವಿಧಾನ ಪರಿಷತ್ ಸದಸ್ಯರು ಇಂತಹ ಗಂಭೀರ ಆರೋಪ ಮಾಡಿದಾಗ ಅದರಿಂದ ಮುಕ್ತಿ ಪಡೆಯುವುದು ನನ್ನ ಕರ್ತವ್ಯ. ಆದ್ದರಿಂದ ಕೂಡಲೇ ತಾವು ತನಿಖೆ ನಡೆಸಿ ನನ್ನ ಪಾತ್ರವಿಲ್ಲ ಎಂಬುದನ್ನು ಸಾಬೀತು ಪಡೆಸಬೇಕಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು. ಡಿಸೆಂಬರ್ 2 ರ ಒಳಗೆ ಈ ಆರೋಪ ಕುರಿತು ಸಮಗ್ರ ತನಿಖೆ ಆದೇಶವನ್ನು ತಮ್ಮಿಂದ ನಿರೀಕ್ಷಿಸುತ್ತೇನೆ.

ಇಲ್ಲವಾದರೆ ನನ್ನ ಗೌರವದ ದೃಷ್ಟಿಯಿಂದ ಮತ್ತು ಸಮಾಜದ ಗೌರವದ ದೃಷ್ಟಿಯಿಂದ ನ್ಯಾಯಾಲಯಕ್ಕೆ ಮೊರೆ ಹೋಗಿ ತನಿಖೆಗೆ ಆದೇಶಿಸುವಂತೆಯೂ ಅವರು ವಿವರಿಸಿದ್ದರು.

ಈ ಮನವಿಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿಗಳು ಸಿಐಡಿ ತನಿಖೆಗೆ ವಹಿಸಿದ್ದಾರೆ. ಈ ಕೂಡಲೆ ಸಿಐಡಿ ತನಿಖೆ ಆರಂಭಿಸಿದರೆ ತಾವು ಎಲ್ಲಾ ಸಹಕಾರ ನೀಡುತ್ತೇನೆ ಎಂದು ರಾಮದಾಸ್ ತಿಳಿಸಿದ್ದು ಆರೋಪ ಮುಕ್ತರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+