Get Updates
Get notified of breaking news, exclusive insights, and must-see stories!

19 ವರ್ಷದಿಂದ ಮದುವೆಯಾಗಿದ್ದ ಹೆಂಡ್ತಿ ಹೆಣ್ಣಲ್ಲ!

Married wife is not woman
ಬೆಲ್ಜಿಯಂ, ನ. 28 : ಈ ಪ್ರಪಂಚದಲ್ಲಿ ವಿಸ್ಮಯಗಳಿಗೆ ಲೆಕ್ಕವೇ ಇಲ್ಲ. ಆಡು ಹಾಲು ಕರೆಯುವುದು, ನಾಯಿಯ ಹೊಟ್ಟೆಯಲ್ಲಿ ಬೆಕ್ಕು ಹುಟ್ಟುವುದು, ಹಂದಿ ನಾಯಿಗೆ ಹಾಲುಣಿಸುವುದು, ತಿಂಗಳ ಕೂಸು ಬೆಂಕಿಯುಗುಳುವುದು, ಭೂಪ ಮಲಗಿದರೆ ಆರು ತಿಂಗಳು ಮಲಗೇ ಇರುವುದು... ಒಂದೆ ಎರಡೆ?

ಅಷ್ಟೇ ಏಕೆ, ಗಂಡು ಹೆಣ್ಣಾಗಬಹುದು, ಹೆಣ್ಣು ಗಂಡಾಗಬಹುದು. ಗಂಡು ಗಂಡನ್ನು ಮದುವೆಯಾಗುವುದು, ಹೆಣ್ಣು ಹೆಣ್ಣನ್ನು ಲಗ್ನವಾಗುವುದು, ಗಂಡು ಹೆಣ್ಣನ್ನು ವಿವಾಹವಾಗುವಷ್ಟೇ ಸಹಜವಾದ ವಿದ್ಯಮಾನ. ಆದರೆ, ತಾನು ಮದುವೆಯಾಗಿ ಸುಖ ಉಂಡಿರುವ ಆಕೃತಿ ಹೆಣ್ಣಲ್ಲ ಗಂಡು ಎಂದು ಹತ್ತೊಂಬತ್ತು ವರ್ಷಗಳ ನಂತರ ಗಂಡಿಗೆ ಗೊತ್ತಾದರೆ ಆತನಿಗೆ ಹೇಗಾಗಿರಬೇಡ.

ಆದರೆ ಇದು ವಿಸ್ಮಯವೂ ಅಲ್ಲ ಮಣ್ಣೂ ಅಲ್ಲ. ಹೆಣ್ಣೆಂಬ ಆ ಗಂಡಿನ ಭಂಡತನ. ತಮಾಷೆ ಅಂದ್ರೆ ಮದುವೆಯಾಗಿರುವ ಗಂಡಿಗೆ ಆ ವ್ಯಕ್ತಿ ಹೆಣ್ಣೆಂದು ಹತ್ತೊಂಬತ್ತು ವರ್ಷಗಳ ವರೆಗೂ ಗೊತ್ತಾಗಿರಲಿಲ್ಲ. ಆ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದಾಗಲೂ. ಸಂಪೂರ್ಣವಾಗಿ ಆ ವ್ಯಕ್ತಿ ಹೆಣ್ಣಿನಂತೆಯೇ ವರ್ತಿಸುತ್ತಿತ್ತು. ಆದರೆ, ಆ ವಿಚಿತ್ರ ಘಟನೆ ಸಂಭವಿಸುವವರೆಗೆ...

48 ವರ್ಷದ ಆ ವ್ಯಕ್ತಿ ಕೆಲದಿನಗಳಿಂದ ನೈಟ್ ಕ್ಲಬ್‌ಗೆ ಹೋಗಲು ಆರಂಭಿಸಿದಾಗ ಮತ್ತು ಕೆಲ ಗಂಡಸರಿಂದ ಮೇಲಿಂದ ಮೇಲೆ ಈಮೇಲ್‌ಗಳು ಪ್ರಾರಂಭಿಸಲು ಶುರುವಾದಾಗ ಗಂಡನಿಗೆ ಅನುಮಾನ ಕಾಡಲು ಆರಂಭಿಸಿದೆ. ಆಗ ಹೆಂಡತಿಯೆಂಬ ಆ ವ್ಯಕ್ತಿಯನ್ನು ಗೋಡೆಗೊತ್ತಿ ಹಿಡಿದು 'ನಿಜ ಹೇಳು, ನೀನು ಯಾರು, ಗಂಡೋ ಹೆಣ್ಣೋ' ಎಂದು ಪಕ್ಕಾ ಸಿನಿಮೀಯ ರೀತಿಯಲ್ಲಿ ಕೇಳಿದಾಗ ಸತ್ಯವೇನೆಂಬುದನ್ನು ಆತ ಬಾಯಿಬಿಟ್ಟಿದ್ದಾನೆ.

ತಾನು ಹುಟ್ಟಾ ಗಂಡು. ಆಪರೇಷನ್ ಮಾಡಿಸಿಕೊಂಡು ಹೆಣ್ಣಾಗಿ ಪರಿವರ್ತಿತಳಾದೆ. ಅಲ್ಲಿಂದ ಇಲ್ಲಿಯವರೆಗೆ ಹೆಣ್ಣಾಗಿಯೇ ಇದ್ದೇನೆ. ನಾನು ದೇವರಾಣೆ ನಿಮ್ಮ ಕೈಹಿಡಿದ ಹೆಂಡ್ತೀನೆ ಎಂದು ಗೋಗರೆದರೂ ಗಂಡ ಸ್ವೀಕರಿಸಲು ಒಪ್ಪಿಲ್ಲ. ಈ ವಿಷಯ ತಿಳಿದು ಆಕಾಶವೇ ಕಳಚಿಬಿದ್ದಂತಾಗಿದೆ. ಈ ರೀತಿ ಮೋಸ ಹೋಗುತ್ತೀನೆಂದು ಕನಸಿನಲ್ಲಿಯೂ ಕಲ್ಪಿಸಿರಲಿಲ್ಲ ಎಂದು ಗಂಡ ಗೋಳಾಡಿದ್ದಾನೆ.

ಈ ಮದುವೆ ಅಸಿಂಧುವಾಗಿದ್ದು ಅನೂರ್ಜಿತ ಮಾಡಬೇಕೆಂದು ಗಂಡ ಹೆಂಡತಿಯ ವಿರುದ್ಧ ಕೇಸ್ ಹಾಕಿದ್ದಾನೆ. ಹೆಂಡತಿಯೊಡನೆ ಜೀವಿಸಲು ಸಿದ್ಧವಿಲ್ಲ ಎಂದು ಗಂಡ ಹಠ ಹಿಡಿದಿದ್ದಾನೆ. ಸದ್ಯಕ್ಕೆ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ನ್ಯಾಯಾಲಯ ಇನ್ನೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ.

ಇದೆಲ್ಲ ಕಥೆ ಕೇಳಿದರೆ ಭಾರತದ ಕ್ರೀಡಾಪಟು ಪಿಂಕಿ ಕಥೆಯೇ ನೆನಪಾಗುತ್ತದೆ. ಪಿಂಕಿ ಕೂಡ ಹುಟ್ಟಾ ಗಂಡಾಗಿದ್ದು ಹೆಣ್ಣಾಗಿ ಪರಿವರ್ತಿತಳಾಗಿದ್ದಾಳೆ. ಆದರೆ, ಪಿಂಕಿ ತನ್ನ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ್ದಾಳೆಂದು ಆರೋಪ ಎದುರಿಸುತ್ತಿದ್ದಾಳೆ. ಈ ಪ್ರಪಂಚದಲ್ಲಿ ಇನ್ನೂ ಏನೇನು ನೋಡಬೇಕೋ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+