ಘಾಟ್ಕೋಪರ್ ಸ್ಫೋಟ ಪ್ರಕರಣ: HCL ಟೆಕ್ಕಿ ಬಂಧನ

mumbai-ghatkopar-blast-terrorist-techie-held-hyderabad
ಹೈದರಾಬಾದ್, ನ. 24: ಘಾಟ್ಕೋಪರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಶುಕ್ರವಾರ ಟೆಕ್ಕಿಯೊಬ್ಬನನ್ನು ಬಂಧಿಸಿದ್ದಾರೆ. 2002 ಡಿಸೆಂಬರ್ 6ರಂದು ಮುಂಬೈನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಆರೋಪಿಯು ತನ್ನ ಮುಂಬೈನಿಂದ ಪರಾರಿಯಾಗಿ ಹೈದರಾಬಾದಿಗೆ ಬಂದು ಪತ್ನಿ ಮತ್ತು ಐವರು ಮಕ್ಕಳೊಂದಿಗೆ ನೆಲೆಸಿದ್ದ.

ಆತಂಕಕಾರಿ ವಿಷಯವೆಂದರೆ ಈತ ಹೈದರಾಬಾದಿನಲ್ಲಿರುವ HCL ಸಾಫ್ಟ್ ವೇರ್ ಕಂಪನಿಯಲ್ಲಿ ನಕಲಿ ಹೆಸರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ ನಗರ ಸಾರಿಗೆ ಬಸ್ಸಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದರು.

ತಾಜ್ ಉಲ್ ಇಸ್ಲಾಂ ಖ್ವಾಜಿ ಬಂಧಿತ ಆರೋಪಿ. ಆದರೆ ಇವನು ಸಿದ್ದಿಖಿ ತಾಜ್ ಖ್ವಾಜಿ ಹೆಸರಿನಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಘಾಟ್ಕೋಪರ್ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಪ್ರಧಾನ ಸೂತ್ರಧಾರಿ ಇವನೇ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ ಹಿಮಾನ್ಷು ರಾಯ್ ತಿಳಿಸಿದ್ದಾರೆ.

ಮೂಲತಃ ಔರಂಗಾಬಾದಿನ ತಾಜ್ ಉಲ್ ಇಸ್ಲಾಂ ಖ್ವಾಜಿ (ಬಂಧಿತ ಟೆಕ್ಕಿ), ಡಾ. ಅಬ್ದುಲ್ ಮತೀನ್ ನೇತೃತ್ವದ ಭಯೋತ್ಪಾದನೆ ತಂಡದ ಪ್ರಮುಖ ಸದಸ್ಯ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+