ಈಗ ವಿಶ್ವದ 'ದೊಡ್ಡಣ್ಣ' ಆಮೆರಿಕ ಅಲ್ಲ, ಬ್ರಿಟನ್ !

ಆಮೆರಿಕವನ್ನು ಶಕ್ತಿಶಾಲಿ ರಾಷ್ಟ್ರ ಸ್ಥಾನದಿಂದ ಪದಚ್ಯುತಗೊಳಿಸಿರುವ ಬ್ರಿಟನ್ ಸಾಮ್ರಾಜ್ಯವು ಮೊದಲ ಬಾರಿಗೆ ಈ ಮುಕುಟವನ್ನು ಧರಿಸಿದೆ ಎನ್ನುತ್ತಿದೆ ಬ್ರಿಟನ್ ಸಮೀಕ್ಷೆಯೊಂದು.
ಆದರೆ ಇದು ಈ ಹಿಂದೆ ಆಮೆರಿಕ ಹೊತ್ತಿದ್ದ ಸರ್ವಾಧಿಕಾರಿ ಪಟ್ಟ ಅಲ್ಲ. ಬದಲಿಗೆ ಇಡೀ ವಿಶ್ವದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಶಕ್ತಿಶಾಲಿ ರಾಷ್ಟ್ರವಾಗಿ ಬ್ರಿಟನ್ ಹೊರಹೊಮ್ಮಿದೆ. ಹಾರ್ವರ್ಡ್ ಅಕಾಡೆಮಿ 1990ರಲ್ಲಿ ಸ್ಥಾಪಿಸಿದ ವಾರ್ಷಿಕ ಸಮೀಕ್ಷೆಯಲ್ಲಿ ಬ್ರಿಟನ್ ಈ ಸ್ಥಾನ ಅಲಂಕರಿಸಿದೆ.
Monocle ಪತ್ರಿಕೆಯ 'Global Soft Power' ಸಮೀಕ್ಷೆಯ ಪ್ರಕಾರ ಸರಕಾರಿಮಟ್ಟದಲ್ಲಿನ ರಾಯಭಾರ, ಸಾಂಸ್ಕೃತಿಕ ಸಂಬಂಧ, ಶಿಕ್ಷಣ ಸಾಮರ್ಥ್ಯದ ಸದ್ಬಳಕೆ ಮತ್ತು ಉದ್ಯಮ ವಲಯದ ಮೇಲೆ ಬ್ರಿಟನ್ ಬೀರಿರುವ ಪ್ರಭಾವವನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟ ಕಟ್ಟಲಾಗಿದೆ.
ಸಮೀಕ್ಷೆಯ ಪ್ರಕಾರ Global Soft Power ಪಟ್ಟಿಯಲ್ಲಿ ಮೊದಲ 5 ಸ್ಥಾನದಲ್ಲಿರುವ ರಾಷ್ಟ್ರಗಳೆಂದರೆ ಬ್ರಿಟನ್, ಅಮೆರಿಕ, ಜರ್ಮನ್, ಫ್ರಾನ್ಸ್ ಮತ್ತು ಸ್ವೀಡನ್. ಒಟ್ಟು 50 ಅಂಶಗಳ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ.
ಅಮೆರಿಕ ಈ ವರ್ಷ ಚುನಾವಣೆಯಲ್ಲಿ ಮುಳುಗಿದ್ದರೆ ಬ್ರಿಟನ್ ಒಂಲಿಂಪಿಕ್ಸ್ ಕ್ರೀಡಾಕೂಡದಲ್ಲಿ ತೇಲಿತ್ತು. ಗಮನಾರ್ಹವೆಂದರೆ Global Soft Power ಮಾನದಂಡವನ್ನು ಅಮೆರಿಕ ಕಡೆಗಣಿಸುತ್ತಿದೆ. ಅದರ ಆದ್ಯತೆಗಳು ಬೇರೆಯವೇ ಆಗಿವೆ ಎಂದು ಅಭಿಪ್ರಾಯಪಡಲಾಗಿದೆ. ಪ್ರತಿ ವರ್ಷ ಬ್ರಿಟನ್ನಿಗೆ 29 ದಶಲಕ್ಷ ಮಂದಿ ಭೇಟಿ ನೀಡಿದರೆ ಅಮೆರಿಕಕ್ಕೆ 6ರ ಮಂದಿ ಭೇಟಿ ನೀಡುತ್ತಾರೆ.












Click it and Unblock the Notifications