ಮೋದಿ ನಾಡಿನಲ್ಲಿ ಮುಸ್ಲಿಂ ಪೊಲೀಸರದ್ದೇ ದರಬಾರು

ಹೌದು, ಮಾಹಿತಿ ಹಕ್ಕು ಕಾಯಿದೆಯಡಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಈ ಮಾಹಿತಿ ನೀಡಿದೆ. ಗುಜರಾತ್ ರಾಜ್ಯದಲ್ಲಿ ಶೇ. 10.6ರಷ್ಟು ಮಂದಿ ಪೊಲೀಸರು ಮುಸ್ಲಿಮರೇ ಆಗಿದ್ದಾರೆ. ಗಮನಾರ್ಹವೆಂದರೆ, ವಾಸ್ತವವಾಗಿ 2001ರ ಜನಸಂಖ್ಯೆ ಗಣತಿ ಪ್ರಕಾರ ರಾಜ್ಯದಲ್ಲಿ ವಾಸಿಸುತ್ತಿರುವ ಮುಸ್ಲಿಮರ ಪ್ರಮಾಣ ಶೇ. 9.1.
ಅಕ್ಟೋಬರ್ 16, 2012ರಂದು ಸಲ್ಲಿಸಲಾಗಿರುವ ಮಾಹಿತಿಯ ಪ್ರಕಾರ ಗುಜರಾತಿನಲ್ಲಿ ಒಟ್ಟು 501 ಪೊಲೀಸ್ ಠಾಣೆಗಳಿವೆ. ಅವುಗಳಲ್ಲಿ 47,424 ಪೊಲೀಸ್ ಸಿಬ್ಬಂದಿ ಇದ್ದಾರೆ. ಅವರ ಪೈಕಿ 5,021 ಮಂದಿ ಮುಸ್ಲಿಮರೇ ಇದ್ದಾರೆ. ಅಂದರೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ 10 ಮಂದಿ ಮುಸ್ಲಿಂ ಪೊಲೀಸರಿದ್ದಾರೆ. ಬೇರೆ ಯಾವುದೇ ರಾಜ್ಯದಲ್ಲೂ ಇಂತಹ ಪರಿಸ್ಥಿತಿಯಿಲ್ಲ.
ಮಸ್ಲಿಂ ಸಮುದಾಯದಲ್ಲಿ ವಿಶ್ವಾಸ ಮೂಡಿಸಲು ಪೊಲೀಸ್ ಠಾಣೆಗಳಲ್ಲಿ ಹೆಚ್ಚು ಹೆಚ್ಚು ಮುಸ್ಲಿಂ ಪೊಲೀಸರನ್ನೇ ನೇಮಿಸಬೇಕು ಎಂದು ಸಾಚಾರ್ ಸಮಿತಿ ಸಲಹಾ ವರದಿ ಸಲ್ಲಿಸಿದೆ. ಆದರೆ ಅದು ಜಾರಿಯಾಗಿರುವುದು ಕೋಮುದಳ್ಳುರಿಗೆ ಕುಖ್ಯಾತಿಯಾದ ಗುಜರಾತಿನಲ್ಲಿ ಎಂಬುದು ಗಮನಾರ್ಹವಾಗಿದೆ.
ತದನಂತರದ ಸ್ಥಾನದಲ್ಲಿ ಅಸ್ಸಾಂ ಮತ್ತು ಕೇರಳ ರಾಜ್ಯಗಳಿವೆ. ದುರ್ದೈವವೆಂದರೆ ನಿಮ್ಮ ರಾಜ್ಯದಲ್ಲಿ ಪೊಲೀಸ್ ಠಾಣೆಗಳಲ್ಲಿ ಎಷ್ಟು ಮಂದಿ ಮುಸ್ಲಿಂ ಪೊಲೀಸರಿದ್ದಾರೆ ಮಾಹಿತಿ ಒದಗಿಸಿ ಎಂದು ಕೇಂದ್ರ ಗೃಹ ಸಚಿವಾಲಯವು ಕರ್ನಾಟಕ ಸರಕಾರಕ್ಕೆ ಕೇಳಿದ್ದರೆ ಕರ್ನಾಟಕ ಇದುವರೆಗೂ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ!












Click it and Unblock the Notifications