ಚಂದಾ ಕೊಚ್ಚರ್ ಪ್ರಭಾವಿ ಮಹಿಳಾ ಉದ್ಯಮಿ ನಂ.1

ಸತತವಾಗಿ ಎರಡನೇ ವರ್ಷ ಫಾರ್ಚ್ಯೂನ್ ಪತ್ರಿಕೆ ಚಂದಾ ಕೊಚ್ಚರ್ ಅವರನ್ನು ಪ್ರಭಾವಿ ಉದ್ಯಮಿ ನಂ.1 ಎಂದು ಘೋಷಿಸಿದೆ.
ವಿಶ್ವದ ಪ್ರಭಾವಿ ಮಹಿಳಾ ಉದ್ಯಮಿ ಟಾಪ್ 10 ಪಟ್ಟಿಯಲ್ಲಿ ಬ್ರೆಜಿಲ್ ನ ಮರಿಯಾ ದಾಸ್ ಗ್ರಾಸಸ್ ಫಾಸ್ಟರ್ ಅಗ್ರಸ್ಥಾನದಲ್ಲಿದ್ದಾರೆ. ಚಂದಾ ಕೊಚ್ಚರ್ ಐದನೇ ಸ್ಥಾನ ಪಡೆದಿದ್ದು, ಪಟ್ಟಿಯಲ್ಲಿರುವ ಭಾರತದ ಏಕೈಕ ಉದ್ಯಮಿಯಾಗಿದ್ದಾರೆ.
ಉಳಿದಂತೆ ಆಕ್ಸಿಸ್ ಬ್ಯಾಂಕಿನ ಶಿಖಾ ಶರ್ಮ 37ನೇ ಸ್ಥಾನದಲ್ಲಿ ಹಾಗೂ ಎಚ್ ಎಸ್ ಬಿಸಿಯ ನೈನಾ ಲಾಲ್ ಕಿದ್ವಾಯಿ 40ನೇ ಸ್ಥಾನದಲ್ಲಿದ್ದಾರೆ.
TAFEನ ಮಲ್ಲಿಕಾ ಶ್ರೀನಿವಾಸನ್ ಹಾಗೂ ಕ್ಯಾಪ್ ಜೆಮಿನಿಯ ಅರುಣಾ ಜಯಂತಿ ಅವರು ಚಂದಾ ಕೊಚ್ಚರ್ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಫಾರ್ಚ್ಯೂನ್ ಪಟ್ಟಿಯ 50 ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ 6 ಜನ ಹೊಸದಾಗಿ ಸೇರ್ಪಡೆಗೊಂಡಿದಾರೆ. 19 ಜನ ಪಟ್ಟಿಯಲ್ಲಿ ಮೇಲಕ್ಕೇರಿದ್ದರೆ, 17 ಜನ ತಮ್ಮ ಶ್ರೇಯಾಂಕದಲ್ಲಿ ಕೆಳಗಿಳಿದಿದ್ದಾರೆ ಎಂದು ಫಾರ್ಚ್ಯೂನ್ಸ್ ಇಂಡಿಯಾ ಸಂಪಾದಕ ದಿವ್ಯೇಂದ್ರ ನಾಥ್ ಮುಖರ್ಜಿಯಾ ಹೇಳಿದ್ದಾರೆ.
6 ಜನ ಹೊಸ ಉದ್ಯಮಿಗಳಲ್ಲಿ ಕೋಲ್ಗೇಡ್ ಪಾಮೋಲಿವ್ ನ ವ್ಯವಸ್ಥಾಪಕ ನಿರ್ದೇಶಕಿ ಪ್ರಭಾ ಪರಮೇಶ್ವರನ್, ಮಾರ್ಗನ್ ಸ್ಟ್ಯಾನಿ ವ್ಯವಸ್ಥಾಪಕ ನಿರ್ದೇಶಕಿ ಅಯಿಷಾ ಡಿ ಸಿಕ್ವೇರಿಯಾ, ಇಂಟೆಲ್ ಇಂಡಿಯಾದ ಡಿವ್ಜಾನಿ ಘೋಶ್, ಡಿಯಾಜಿಯೋ ಇಂಡಿಯಾದ ಅಬಾಂತಿ ಶಂಕರನಾರಾಯಣನ್, ಸ್ಪೆಂಸರ್ ಸ್ಟುವರ್ಟ್ ನ ವ್ಯವಸ್ಥಾಪಕ ನಿರ್ದೇಶಕಿ ಅಂಜಲಿ ಬನ್ಸಾಲ್, ಟಪ್ಪರ್ ವೇರ್ ನ ವ್ಯವಸ್ಥಾಪಕ ನಿರ್ದೇಶಕಿ ಆಶಾ ಗುಪ್ತ ಇದ್ದಾರೆ.
ಟಾಪ್ 10 ಪಟ್ಟಿಯಲ್ಲಿ ಆಕ್ಸಿಸ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಶರ್ಮ, ಬ್ರಿಟಾನಿಯಾ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ನಿರ್ದೇಶಕಿ ವನಿತಾ ಬಾಲಿ, ಎಚ್ ಟಿ ಮೀಡಿಯಾ ಚೇರ್ಮನ್ ಶೋಭನಾ ಭಾರ್ತಿಯಾ, ಅಪೊಲೊ ಆಸ್ಪತ್ರೆಯ ಎಂಡಿ ಪ್ರೀತಿ ರೆಡ್ಡಿ, AZB ಪಾರ್ಟ್ನರ್ಸ್ ಸಹ ಸ್ಥಾಪಕಿ ಜಿಯಾ ಮೋದಿ, ಎನ್ ಎಸ್ ಇ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ, Crisil ನ ಸಿಇಒ ರೂಪಾ ಕುಡ್ವ,












Click it and Unblock the Notifications