ಚುನಾವಣೆಗೆ 170 ದಿನ ಬಾಕಿ ಆದ್ರೂ ನಿಂತಿಲ್ಲ ಭಿನ್ನಮತ

Interesting ಅಂದರೆ ಯಡಿಯೂರಪ್ಪ KJP ಕಾಂಗ್ರೆಸ್ ಜತೆ ಕೈಜೋಡಿಸಲಿದೆ ಎಂಬ ಸುದ್ದಿಗೆ ಪುಷ್ಠಿ ನೀಡುವಂತೆ ಡಾ. ಜಿ. ಪರಮೇಶ್ವರ್ ಅವರು ಅಪ್ಪಿತಪ್ಪಿಯೂ ಯಡಿಯೂರಪ್ಪ KJP ಬಗ್ಗೆ ಹೇಳಿಲ್ಲ. ಬದಲಿಗೆ BJP ಮತ್ತು JDS ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ.
ಪರಮೇಶ್ವರಗೆ ದೀಪಾವಳಿ ದಿನ ಜ್ಞಾನದ ಬೆಳಕು:
ನಿಮ್ಮ ಶತ್ರು ಪರಮೇಶ್ವರ್ ಅಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ವಿಧಾನಸಭೆ ಚುನಾವಣೆಗೆ ಇನ್ನು 170 ದಿನಗಳಷ್ಟೇ ಬಾಕಿಯಿದೆ. ಆದರೆ ನಮ್ಮಲ್ಲಿ ಭಿನ್ನಮತ ಮಾತ್ರ ಇನ್ನೂ ನಿಂತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಚುನಾವಣೆ ಎದುರಿಸುವುದು ಹೇಗೆ? ಎಂದು ಭಿನ್ನಮತದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಪರಮೇಶ್ವರ್, ಯಾವ ಲೆಕ್ಕಾಚವಾರದಲ್ಲಿ ಈ 170 ದಿನ fix ಮಾಡಿದ್ದಾರೋ ಅವರೇ ವಿವರಿಸಬೇಕು. ಇಂದು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಪರಮೇಶ್ವರ್ ಈ ಅತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications